ಅಭಿಮಾನಿಗಳ ಕಾಯುವಿಕೆ ಕೊನೆಗೂ ಅಂತ್ಯ; Avatar Fire and Ash ಟ್ರೇಲರ್‌ಗೆ ಫ್ಯಾನ್ಸ್ ಫಿದಾ

Published : Sep 26, 2025, 06:33 PM IST

'Avatar: Fire and Ash' Trailer: ಈ ಬಾರಿ ದೃಶ್ಯಗಳಷ್ಟೇ ಭಾವನೆಗಳು ಸಹ ಹೆಚ್ಚು ತೀವ್ರವಾಗಿವೆ. ನೆಟೆಯಂ ಅವರ ಮರಣದಿಂದ ಛಿದ್ರಗೊಂಡ ಸುಲ್ಲಿ ಕುಟುಂಬ ಮತ್ತು ಪಂಡೋರಾ ಮೇಲೆ ಹೆಚ್ಚುತ್ತಿರುವ ಉದ್ವಿಗ್ನತೆ ಚಿತ್ರದ ಹೈಲೆಟ್ ಎಂದು ಹೇಳಲಾಗುತ್ತದೆ.  

PREV
16
ಟ್ರೇಲರ್ ಬಿಡುಗಡೆ

2009ರಿಂದ ಹಲವಾರು ಸಿನಿಮಾ ದಾಖಲೆಗಳನ್ನು ಮುರಿದಿರುವ ಜೇಮ್ಸ್ ಕ್ಯಾಮೆರಾನ್, ಇದೀಗ ಮತ್ತೊಮ್ಮೆ ಪ್ರೇಕ್ಷಕರನ್ನು ಮಾಂತ್ರಿಕ ಮತ್ತು ನಿಗೂಢ ಜಗತ್ತಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಹೌದು, ಅವತಾರ್ ಸರಣಿಯ ಮೂರನೇ ಸಿನಿಮಾ 'ಅವತಾರ್ ಫೈರ್ ಆ್ಯಂಡ್ ಆಶ್‌ (Avatar: Fire and Ash) ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

26
ಟ್ರೇಲರ್ ಹೇಗಿದೆ?

ಈ ಬಾರಿ ಕಥೆಯ ಆಳ ಚೆನ್ನಾಗಿರುವಂತೆ ತೋರುತ್ತಿದೆ. ನೋವು ಹೆಚ್ಚು ಸ್ಪಷ್ಟವಾಗಿ ವ್ಯಕ್ತವಾಗಿದೆ. ಚಿತ್ರದಲ್ಲಿ ಸುಲ್ಲಿ ಕುಟುಂಬವು ತಮ್ಮ ಹಿರಿಯ ಮಗ ನೆಟೆಯಂನ ಮರಣದಿಂದ ದುಃಖಿಸುತ್ತಿದೆ. ಈ ಕುಟುಂಬದ ದುಃಖದ ನಡುವೆ ಪಂಡೋರಾ ಮೇಲೆ ಹೊಸ ಸವಾಲು ಉದ್ಭವಿಸುತ್ತದೆ. ಅದೇ ಆಶ್ ಪೀಪಲ್ ಎಂಬ ಹೊಸ ಬುಡಕಟ್ಟು. ಈ ಗುಂಪು ಅತ್ಯಂತ ಆಕ್ರಮಣಕಾರಿಯಾಗಿದ್ದು, ಪಂಡೋರಾ ಮೇಲೆ ಹೊಸ ರೀತಿಯ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ.

36
ಚಿತ್ರದ ಹೈಲೆಟ್

ಈ ಚಿತ್ರವನ್ನ ಜೇಮ್ಸ್ ಕ್ಯಾಮೆರಾನ್, ರಿಕ್ ಜಾಫಾ ಮತ್ತು ಅಮಂಡಾ ಸಿಲ್ವರ್ ಅವರೊಂದಿಗೆ ನಿರ್ದೇಶಿಸಿದ್ದಾರೆ ಮತ್ತು ಬರೆದಿದ್ದಾರೆ. ಜೋಶ್ ಫ್ರೀಡ್‌ಮನ್ ಮತ್ತು ಶೇನ್ ಸಲೆರ್ನೊ ಕೂಡ ಕಥೆಗೆ ಕೊಡುಗೆ ನೀಡಿದ್ದಾರೆ. ಮತ್ತೊಮ್ಮೆ ಜೇಕ್ ಸುಲ್ಲಿ ಮತ್ತು ನೇಯ್ಟಿರಿಯ ಜೋಡಿಯನ್ನು ಸ್ಯಾಮ್ ವರ್ಥಿಂಗ್ಟನ್ ಮತ್ತು ಜೊಯಿ ಸಲ್ಡಾನಾ ನಿರ್ವಹಿಸಿದ್ದಾರೆ. ಈ ಬಾರಿ ದೃಶ್ಯಗಳಷ್ಟೇ ಭಾವನೆಗಳು ಸಹ ಹೆಚ್ಚು ತೀವ್ರವಾಗಿವೆ. ನೆಟೆಯಂ ಅವರ ಮರಣದಿಂದ ಛಿದ್ರಗೊಂಡ ಸುಲ್ಲಿ ಕುಟುಂಬ ಮತ್ತು ಪಂಡೋರಾ ಮೇಲೆ ಹೆಚ್ಚುತ್ತಿರುವ ಉದ್ವಿಗ್ನತೆ ಚಿತ್ರದ ಹೈಲೆಟ್ ಎಂದು ಹೇಳಲಾಗುತ್ತದೆ.

46
ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ

2022 ರ ಚಲನಚಿತ್ರ "ಅವತಾರ್: ದಿ ವೇ ಆಫ್ ವಾಟರ್" ವಿಶ್ವಾದ್ಯಂತ ಸುಮಾರು $2.3 ಬಿಲಿಯನ್ ಅಥವಾ ಸರಿಸುಮಾರು 19,090 ಕೋಟಿ ರೂ.ಗಳಿಸಿತು ಮತ್ತು ಅತ್ಯುತ್ತಮ ದೃಶ್ಯ ಪರಿಣಾಮಗಳಿಗಾಗಿ ಆಸ್ಕರ್ ಪ್ರಶಸ್ತಿಯನ್ನು ಸಹ ಗೆದ್ದುಕೊಂಡಿತು. 2009 ರ ಚಲನಚಿತ್ರ "ಅವತಾರ್" ವಿಶ್ವದ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ. $2.9 ಬಿಲಿಯನ್‌ಗಿಂತಲೂ ಹೆಚ್ಚು ಗಳಿಸಿದೆ. ಇದೀಗ "ಫೈರ್ ಆ್ಯಂಡ್ ಆಶ್‌" ನಿರೀಕ್ಷೆಯನ್ನ ಹೆಚ್ಚು ಮಾಡಿದೆ.

56
ಚಿತ್ರದ ತಾರಾಬಳಗ

ಚಿತ್ರದ ತಾರಾಬಳಗವು ಹಳೆಯ ಮುಖಗಳನ್ನೇ ಒಳಗೊಂಡಿದೆ. ಜೊತೆಗೆ ಕಥೆಯಲ್ಲಿ ಕೆಲವು ಹೊಸ ಪಾತ್ರಗಳನ್ನು ಸೇರಿಸಲಾಗಿದೆ. ಪಾತ್ರವರ್ಗದಲ್ಲಿ ಸಿಗೋರ್ನಿ ವೀವರ್, ಸ್ಟೀಫನ್ ಲ್ಯಾಂಗ್, ಕ್ಲಿಫ್ ಕರ್ಟಿಸ್, ಜೋಯಲ್ ಡೇವಿಡ್ ಮೂರ್, ಎಡಿ ಫಾಲ್ಕೊ, ಡೇವಿಡ್ ಥೆವ್ಲಿಸ್, ಜೆಮೈನ್ ಕ್ಲೆಮೆಂಟ್, ಜಿಯೋವಾನಿ ರಿಬಿಸಿ, ಬ್ರೆಟ್ ಡಾಲ್ಟನ್, ಜೇಮೀ ಫ್ಲಾಟರ್ಸ್, ಟ್ರಿನಿಟಿ ಜೋ-ಲೀ ಬ್ಲಿಸ್, ಜ್ಯಾಕ್ ಚಾಂಪಿಯನ್ ಮತ್ತು ಕೇಟ್ ವಿನ್ಸ್ಲೆಟ್ ಕೂಡ ಇದ್ದಾರೆ.

66
ಕನ್ನಡದಲ್ಲೂ ಬಿಡುಗಡೆ

ಕ್ಯಾಮರೂನ್ ನಾಲ್ಕನೇ ಮತ್ತು ಐದನೇ ಭಾಗಗಳಿಗೆ ಸಹ ಸಿದ್ಧತೆ ನಡೆಸಿದ್ದಾರೆ. ಅವತಾರ್ 4 ಅನ್ನು 2029 ರಲ್ಲಿ ಮತ್ತು ಅವತಾರ್ 5 ಅನ್ನು 2031 ರಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ. ಅವತಾರ್: ಫೈರ್ ಆ್ಯಂಡ್ ಆಶ್‌ ಡಿಸೆಂಬರ್ 19 ರಂದು ಭಾರತದಾದ್ಯಂತ ಇಂಗ್ಲಿಷ್, ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

Read more Photos on
click me!

Recommended Stories