ಹೊಸಪೇಟೆ: ಜೋಗದ ತಾತನ ದರ್ಶನ ಪಡೆದ ನಟ ದುನಿಯಾ ವಿಜಯ್‌

Kannadaprabha News   | Asianet News
Published : Jul 24, 2020, 02:53 PM ISTUpdated : Jul 24, 2020, 03:06 PM IST

ಹೊಸಪೇಟೆ(ಜು.24):  ಕನ್ನಡ ಚಲನಚಿತ್ರ ಖ್ಯಾತ ನಟ ದುನಿಯಾ ವಿಜಯ್‌ ಪರಿವಾರ ಸಮೇತ ಸಂಡೂರು ತಾಲೂಕಿನ ಜೋಗದ ದೇವರಕೊಳ್ಳ ಶ್ರೀ ಅನ್ನಪೂರ್ಣೇಶ್ವರಿ ಮಠಕ್ಕೆ ಭೇಟಿ ನೀಡಿ ದಿಗಂಬರನ ಶ್ರೀ ರಾಜ ಭಾರತಿ ಮಹಾಸ್ವಾಮಿಗಳ (ಜೋಗದ ತಾತ) ದರ್ಶನ ಪಡೆದುಕೊಂಡಿದ್ದಾರೆ. 

PREV
15
ಹೊಸಪೇಟೆ: ಜೋಗದ ತಾತನ ದರ್ಶನ ಪಡೆದ ನಟ ದುನಿಯಾ ವಿಜಯ್‌

ಪತ್ನಿ ಕೀರ್ತಿಗೌಡ, ಪುತ್ರ ಸಾಮ್ರಾಟ್‌ ಹಾಗೂ ಸ್ನೇಹಿತರೊಂದಿಗೆ ಮಠಕ್ಕೆ ಭೇಟಿ ನೀಡಿದ ಅವರು, ಬಿಡುಗಡೆಗೆ ಸಿದ್ಧವಾಗಿರುವ ಸಲಗ ಚಿತ್ರದ ಯಶ್ವಸಿಗಾಗಿ ಪೂಜೆ ಸಲ್ಲಿಸಿ ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ. 

25

ಟಗರು ಸಿನಿಮಾ ಖ್ಯಾತಿಯ ಕೆ.ಪಿ. ಶ್ರೀಕಾಂತ್‌ ನಿರ್ಮಾಣದ ಬಹನಿರೀಕ್ಷಿತ ಸಿನಿಮಾ ಸಲಗ ಈಗಾಗಲೇ ಪೂರ್ಣಗೊಂಡು ತೆರೆಗೆ ಬರಲು ಸಿದ್ಧಗೊಂಡಿದ್ದು, ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಸಿನಿಮಾ ತೆರೆ ಕಾಣಲು ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿದ ದುನಿಯಾ ವಿಜಿ, ಶ್ರೀ ಅನ್ನಪೂರ್ಣೇಶ್ವರಿ ದೇವಿ ಹಾಗೂ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಠದಲ್ಲಿ ಪ್ರಸಾದ ಸ್ವೀಕಾರ ಮಾಡಿದ್ದಾರೆ. 

35

ಮಠದಲ್ಲಿ ಸುಮಾರು ಎರಡು ತಾಸುಗಳಿಗೂ ಹೆಚ್ಚು ಕಾಲ ಕಳೆದ ಅವರು ಈ ಸಂದರ್ಭದಲ್ಲಿ ದುನಿಯಾ ವಿಜಿ ಅವರನ್ನು ಮಠದವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

45

ನಂತರ ಮಾತನಾಡಿದ ನಟ ದುನಿಯಾ ವಿಜಯ್‌, ಬಳ್ಳಾರಿ ಬಿಸಿಲು ನಾಡು ಎಂದೆಷ್ಟೆ ನಾನು ತಿಳಿದಿದ್ದೆ, ಬಳ್ಳಾರಿಯಲ್ಲಿ ಪ್ರಕೃತಿ ಸೊಬಗನ್ನು ಕಣ್ತುಂಬಿಕೊಳ್ಳಬಹುದು ಎಂದು ನಾನು ಮಠಕ್ಕೆ ಭೇಟಿ ನೀಡಿದಾಗ ತಿಳಿಯಿತು. ಸಂಡೂರು ತಾಲೂಕಿನ ಪ್ರಕೃತಿ ಮಡಿನಲ್ಲಿರುವ ಅನ್ನಪೂರ್ಣೇಶ್ವರಿ ಮಠದ ಬಗ್ಗೆ ನಾನು ಕೇಳಿದ್ದೆ, ಆದರೆ ಈ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ತುಂಬಾ ದಿನದಿಂದ ಕಾಯುತ್ತಿದ್ದೆ, ಈಗ ಬರಲು ಅವಕಾಶ ಸಿಕ್ಕಿದೆ. ಮತ್ತೆ ಮತ್ತೆ ಬರಬೇಕು ಎನ್ನುಸುತ್ತಿದೆ. ಮತ್ತೊಮ್ಮೆ ಬರುತ್ತೇನೆ ಎಂದು ದುನಿಯಾ ವಿಜಯ್‌ ಅವರು ಸಂತಸ ವ್ಯಕ್ತಪಡಿಸಿದ್ದಾರೆ. 

55

ಪತ್ರಕರ್ತ ಸತೀಶ್‌ ಬಿಲ್ಲಾಡಿ, ಜಂಬಾನಹಳ್ಳಿ ಪರಶುರಾಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories