ಹೇಗೆಲ್ಲ ಹಣ ಹೂಡಿಕೆ ಮಾಡಿ ದುಡ್ಡು ಮಾಡಬಹುದು? ಬೆಂಗಳೂರಿನ ದಂಪತಿ ಬಿಚ್ಚಿಟ್ಟ ಸೀಕ್ರೇಟ್‌ ಇದು!

Published : Jul 07, 2026, 11:20 AM IST

Investment Strategy For Beginners: ಇಂದು ಹಣ ಉಳಿತಾಯ ಮಾಡುವ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ. ಈಗ ದಂಪತಿಯೊಂದು ಹೇಗೆಲ್ಲ ಹಣ ಉಳಿತಾಯ ಮಾಡಬಹುದು ಎಂಬುದನ್ನು ವಿಡಿಯೋ ಮೂಲಕ ಹೇಳಿದ್ದಾರೆ. ಎಸ್‌ಐಪಿ (SIP), ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದರ ಜೊತೆಗೆ ಬೇರೆ ಏನೆಲ್ಲ ಮಾಡಬಹುದು ಎಂದಿದ್ದಾರೆ.

PREV
15
ಹೇಗೆಲ್ಲ ಹಣ ಉಳಿತಾಯ ಮಾಡಬಹುದು?

ನಗರದಲ್ಲಿ ಕೆಲಸ ಮಾಡಿಕೊಂಡು ಬದುಕುವವರು ಹೇಗೆಲ್ಲ ಹಣ ಉಳಿಸಬಹುದು ಎಂಬುದನ್ನು ಆ ಜೋಡಿ ಮುಕ್ತವಾಗಿ ಹೇಳಿಕೊಂಡಿದೆ. ತಮ್ಮ ಆರ್ಥಿಕ ಭವಿಷ್ಯವನ್ನು ಸುರಕ್ಷಿತಗೊಳಿಸಲು ಹಣವನ್ನು ಹೇಗೆ ಎಷ್ಟು ಮುತುವರ್ಜಿಯಿಂದ ಖರ್ಚು ಮಾಡೋದು? ಹಂಚಿಕೆ ಮಾಡೋದು ಎಂದು ಈ ದಂಪತಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ಮಿಲೇನಿಯಲ್ ದಂಪತಿಯಾದ ನಾವು ವಿವಿಧ ಕಡೆ ಹೇಗೆ ಎಷ್ಟು ಹೂಡಿಕೆ ಮಾಡುತ್ತೇವೆ ಎಂದು ಈ ದಂಪತಿ ಹೇಳಿದ್ದೇವೆ. ಮೇಘಾ ಮತ್ತು ಶುಭಂ ಎನ್ನುವವರು ಈ ವಿಡಿಯೋ ಮಾಡಿದ್ದಾರೆ.

25
ಹೇಗೆಲ್ಲ ಹಣ ಹೂಡಿಕೆ ಮಾಡಬಹುದು?

"ಬೆಂಗಳೂರಿನಲ್ಲಿ ಮಿಲೇನಿಯಲ್ ಕುಟುಂಬವಾಗಿ ನಾವು ನಮ್ಮ ಹಣವನ್ನು ಹೇಗೆ ಹೂಡಿಕೆ ಮಾಡುತ್ತೇವೆ ಎಂಬುದನ್ನು ಹೇಳ್ತೀವಿ. ಕ್ರಮೇಣವಾಗಿ ತಮ್ಮ ಎಸ್‌ಐಪಿಗಳನ್ನು (SIPs) ಹೆಚ್ಚು ಮಾಡಿದ್ದು, ಈಗ ತಿಂಗಳಿಗೆ ₹65,000 ಕೊಡುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

35
ಎಲ್ಲಿ ಹಣ ಹೂಡಿಕೆ ಮಾಡಿದ್ದಾರೆ?

ಈಕ್ವಿಟಿಗಳಲ್ಲೂ ಹೂಡಿಕೆ ಮಾಡುತ್ತಿದ್ದೇವೆ, ಅವಕಾಶ ಸಿಕ್ಕಿದರೆ ದೊಡ್ಡ ಮೊತ್ತದ ಹೂಡಿಕೆ ಮಾಡ್ತೀವಿ. ಅಷ್ಟೇ ಅಲ್ಲದೆ ನಿವೃತ್ತಿ ನಿಧಿಗೂ ಹಣ ಹಾಕ್ತೀವಿ. ಮಗಳ ಭವಿಷ್ಯವನ್ನು ಭದ್ರ ಮಾಡಲು ಸರ್ಕಾರಿ ಯೋಜನೆಯಲ್ಲಿ ಕೂಡ ಹೂಡಿಕೆ ಮಾಡ್ತೀವಿ ಎಂದು ಈ ದಂಪತಿ ಹೇಳಿಕೊಂಡಿದೆ.

45
ಜನರು ಏನೇನು ಹೇಳಿದ್ರು?

ಇದನ್ನು ನೋಡಿ ಅನೇಕರು ಖುಷಿ ಪಟ್ಟರೆ, ಇನ್ನೂ ಕೆಲವರು ಕಾಮಿಡಿ ಮಾಡಿದ್ದಾರೆ. “ಇದು ಒಂದು ವರ್ಗಕ್ಕೆ ಮಾತ್ರ ಅನ್ವಯ ಆಗುತ್ತದೆ, ಎಲ್ಲರಿಗೂ ಹೂಡಿಕೆ ಮಾಡಲು ಇಷ್ಟೆಲ್ಲ ಹಣ ಇರೋದಿಲ್ಲ” ಎಂದು ಓರ್ವ ದಂಪತಿ ಹೇಳಿದೆ. ಇನ್ನೋರ್ವ ದಂಪತಿ “ಹೂಡಿಕೆ ಮಾಡಲು ನನಗೂ ಸ್ವಲ್ಪ ಹಣ ಕೊಡಿ. ನೀವು ಹೂಡಿಕೆ ಮಾಡ್ತಿರುವ ನಿರ್ದಿಷ್ಟ ಫಂಡ್‌ ಯಾವುವು” ಎಂದು ಇನ್ನೂ ಕೆಲವರು ಕಾಮಿಡಿ ಮಾಡಿದ್ದಾರೆ.

55
ಯುರೋಪ್‌ ಟ್ರಿಪ್‌ಗೆ ಖರ್ಚು

"ಜಾಸ್ತಿ ಸಂಬಳ ಇಲ್ಲ ಎನ್ನೋರಿಗೆ ಈ ಮಾಹಿತಿ ಯೂಸ್‌ ಇಲ್ಲ. ನೀವೇನು ಕೆಲಸ ಮಾಡುತ್ತೀರಿ?" ಎಂದು ಕೂಡ ಹೇಳಿದ್ದಾರೆ. ಈ ದಂಪತಿ ಈ ಹಿಂದೆ ಯುರೋಪ್‌ಗೆ 15 ದಿನಗಳ ಪ್ರವಾಸಕ್ಕಾಗಿ ತಾವು ಮಾಡಿದ ₹6.85 ಲಕ್ಷ ಬಜೆಟ್‌ನ ಬಗ್ಗೆ ಹೇಳಿದ್ದರು.

Read more Photos on
click me!

Recommended Stories