ಫೋನ್ ಜೊತೆ ನೀವೂ ಅಪಾಯದಲ್ಲಿದ್ದೀರಿ, ಆ್ಯಂಡ್ರಾಯ್ಡ್ ಬಳಕೆದಾರರಿಗೆ ಕೇಂದ್ರ ಸರ್ಕಾರದ ಎಚ್ಚರಿಕೆ !

First Published Oct 11, 2023, 6:09 PM IST

ಭಾರತದಲ್ಲಿ ಆ್ಯಂಡ್ರಾಯ್ಡ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚು. ಇದೀಗ ಆ್ಯಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಕೇಂದ್ರ ಸರ್ಕಾರದ ಮಹತ್ವದ ಎಚ್ಚರಿಕೆ ನೀಡಿದೆ.ನಿಮ್ಮ ಫೋನ್ ಜೊತೆಗೆ ನೀವು ಅಪಾಯದಲ್ಲಿದ್ದೀರಿ ಎಂದು ಅಲರ್ಟ್ ನೀಡಿದೆ.

ಸ್ಮಾರ್ಟ್‌ಫೋನ್ ಜೀವನವನ್ನು ಸುಲಭಗೊಳಿಸುತ್ತದೆ. ಸಂಪರ್ಕ ಸೇರಿದಂತೆ ಎಲ್ಲವೂ ಸುಲಭ ಹಾಗೂ ಸರಳ. ಭಾರತದಲ್ಲಿ ಐಫೋನ್‌ಗಿಂತ ಆ್ಯಂಡ್ರಾಯ್ಡ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚು. ಆದರೆ ಇದೇ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಆ್ಯಂಡ್ರಾಯ್ಡ್‌ನ 11, 12.5, 12L ಹಾಗೂ 13 ವರ್ಶನ್ ಫೋನ್‌ಗಳ ಆಪರೇಟಿಂಗ್ ಸಿಸ್ಟಮ್(OS)ನಲ್ಲಿ ಬಹುದೊಡ್ಡ ದೋಷವನ್ನು ಭಾರತೀಯ ಸೈಬರ್ ಎಜೆನ್ಸಿ ಕಂಪ್ಯೂಟರ್ ಎಮರ್ಜೆನ್ಸಿ ಟೀಮ್(CERT-In) ಪತ್ತೆ ಹಚ್ಚಿದೆ. ಇದರ ಬೆನ್ನಲ್ಲೇ ಭಾರತೀಯರಿಗೆ ಎಚ್ಚರಿಕೆಯನ್ನೂ ನೀಡಿದೆ.
 

CERT-In ಸೂಚಿಸಿದ ಆವೃತ್ತಿಗಳ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ ಸುಲಭವಾಗಿ ಹ್ಯಾಕರ್ಸ್ ದಾಳಿ ಮಾಡಲು ಸಾಧ್ಯವಿದೆ. ಕೆಲ ಅನಿಯಂತ್ರಿತ ಕೋಡ್‌ನ್ನು ಈ ಫೋನ್‌ಗಳಲ್ಲಿ ಕಾರ್ಯಗತಗೊಳಿಸವುದು ಸಾಧ್ಯ. 
 

ಹ್ಯಾಕರ್ಸ್ ನಿಮ್ಮ ಫೋನ್‌ನಿಂದ ಸೂಕ್ಷ್ಮ ಮಾಹಿತಿಯನ್ನು ಪ್ರಯಾಸವಿಲ್ಲದೇ ಕದಿಯಲು ಸಾಧ್ಯವಿದೆ. ಇದೇ ವೇಳೆ ಕೆಲ ಸೇವೆಗಳನ್ನು ನಿಮ್ಮ ಫೋನ್‌ನಿಂದ ನಿರಾಕರಿಸಲು ಸಾಧ್ಯವಾಗಲಿದೆ ಎಂದು CERT-In ಹೇಳಿದೆ.

ಆ್ಯಂಡ್ರಾಯ್ಡ್‌ನ 11, 12.5, 12L ಹಾಗೂ 13 ವರ್ಶನ್ ಫೋನ್‌ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಫ್ರೇಮ್‌ವರ್ಕ್, ಸಿಸ್ಟಮ್, ಗೂಗಲ್ ಪ್ಲೇ ಸಿಸ್ಟಮ್ ಅಪ್ಡೇಟ್, ಆರ್ಮ್ ಕಾಂಪೋನೆಂಟ್, ಮೀಡಿಯಾ ಟೆಕ್ ಕಾಂಪೋನೆಟ್, ಯುನಿಸಾಕ್ ಕಾಂಪೋನೆಂಟ್, ಕ್ವಾಲ್ಕಾಮ್ ಕಾಂಪೋನೆಂಟ್ ಸೇರಿದಂತೆ ಕೆಲ ಕ್ಲೋಸ್ಡ್ ಸೋರ್ಸ್‌ಗಳಲ್ಲಿ ನ್ಯೂನತೆಗಳಿವೆ ಎಂದು CERT-In ಹೇಳಿದೆ.

ನಿಗಿದತ ವರ್ಶನ್ ಆ್ಯಂಡ್ರಾಯ್ಡ್ ಫೋನ್ ಬಳಕೆ ಮಾಡವು ಬಳಕೆದಾರರು ಎಚ್ಚರಿಕೆಯಿಂದ ಇರಬೇಕು. ಪ್ರಮುಖವಾಗಿ ಸಿಸ್ಟಮ್ ಅಪ್ಡೇಟ್ ಮಾಡಿಕೊಳ್ಳಬೇಕು. ಹೀಗೆ ಮಾಡುವಾಗ ಅಪ್‌ಡೇಟ್ ಪ್ರೊಸೆಸಿಂಗ್ ಸರಿಯಾದ ಸ್ಟೋರೇಜ್ ಸಾಮರ್ಥ್ಯ ಹಾಗೂ ಇಂಟರ್ನೆಟ್ ಇದ್ದರೂ ಹೆಚ್ಚು ಹೊತ್ತು ತೆಗೆದುಕೊಂಡರೆ ನಿಮ್ಮ ಫೋನ್ ರಿಸ್ಕ್‌ನಲ್ಲಿದೆ ಎಂದರ್ಥ.

ಗೂಗಲ್ ಪ್ಲೇನಲ್ಲಿ ಸಿಸ್ಟಮ್ ಅಪ್ಡೇಟ್ ನೋಟಿಫಿಕೇಶನ್ ಆನ್ ಮಾಡಿ, ಕಾಲಕ್ಕೆ ತಕ್ಕಂತೆ ಅಪ್ಡೇಟ್ ಮಾಡಿಕೊಳ್ಳಿ. ಅಥವಾ ಅಪ್‌ಡೇಟ್ ಚೆಕ್ ಮಾಡಿಕೊಳ್ಳುವುದು ಸೂಕ್ತ

ನಿಮ್ಮ ಆ್ಯಂಡ್ರಾಯ್ಡ್ ಫೋನ್ ಯಾವ ವರ್ಶನ್ ಅನ್ನೋದು ತಿಳಿಯಲು ಸೆಟ್ಟಿಂಗ್ಸ್‌ ಕ್ಲಿಕ್ ಮಾಡಿ, ಬಳಿಕ ಎಬೌಟ್ ಫೋನ್ ಕ್ಲಿಕ್ ಮಾಡಿ ವರ್ಶನ್ ತಿಳಿದುಕೊಳ್ಳಿ.

click me!