ಪ್ರತಿ ವರ್ಷ ಹೊಸ ಐಫೋನ್ ಬಿಡುಗಡೆ ಮಾಡೋದ್ಯಾಕೆ? ರಹಸ್ಯ ಬಯಲು ಮಾಡಿದ ಆ್ಯಪಲ್ ಸಿಇಒ..

First Published | Oct 10, 2023, 5:45 PM IST

ಪ್ರತಿ ವರ್ಷ ಆ್ಯಪಲ್ ಒಂದಲ್ಲ ಒಂದು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇದರ ಅಗತ್ಯತೆ ಬಗ್ಗೆ ಆ್ಯಪಲ್ ಸಿಇಒ ಟಿಮ್‌ ಕುಕ್‌ ಹೇಳಿದ್ದಾರೆ. 

ಇತ್ತೀಚಿನ ಕೆಲ ದಿನಗಳ ಹಿಂದಷ್ಟೇ ಆ್ಯಪಲ್ ಕಂಪನಿಯ ಐಫೋನ್‌ 15 ಸೀರಿಸ್‌ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿದೆ. ದರ ಹೆಚ್ಚಿದ್ದರೂ ಗ್ರಾಹಕರು ಮುಗಿಬಿದ್ದು ಹೊಸ ಫೋನ್‌ಗಳನ್ನು ಖರೀದಿಸಿದ್ದಾರೆ. ಇನ್ನು, ಪ್ರತಿ ವರ್ಷ ಆ್ಯಪಲ್ ಒಂದಲ್ಲ ಒಂದು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಈ ಬಗ್ಗೆ ಹಲವರಿಗೆ ಖುಷಿ ಇದ್ದರೆ, ಇನ್ನು ಹಲವರಿಗೆ ಅಸಮಾಧಾನವೂ ಇದೆ.

ಹೊಸ ಐಫೋನ್‌ನಲ್ಲಿ ಹೆಚ್ಚೇನೂ ಬದಲಾವಣೆ ಇಲ್ಲ ಎಂದು ಕೆಲವರು ಅಸಮಾಧಾನದ ಗೊಣಗಾಟ ಇರುತ್ತದೆ. ಇನ್ನು, ಆ್ಯಪಲ್ ಕಂಪನಿ ಬದಲಾವಣೆಗಳನ್ನು ಮಾಡಿದ್ರೂ,  ಪ್ರತಿ ವರ್ಷ ನಮಗೆ ನಿಜವಾಗಿಯೂ ಹೊಸ ಐಫೋನ್ ಅಗತ್ಯವಿದೆಯೇ ಎಂಬ ಪ್ರಶ್ನೆ ಕೇಳಿಬರುತ್ತದೆ. ಈ ಜ್ವಲಂತ ಪ್ರಶ್ನೆಗೆ ಆ್ಯಪಲ್ ಸಿಇಒ ಟಿಮ್ ಕುಕ್ ಉತ್ತರ ನೀಡಿದ್ದಾರೆ. 

Tap to resize

ಬ್ರೂಟ್‌ನೊಂದಿಗಿನ ಸಂದರ್ಶನವೊಂದರಲ್ಲಿ ಟಿಮ್‌ ಕುಕ್‌ಗೆ ಈ ಪ್ರಶ್ನೆ ಕೇಳಲಾಗಿದ್ದು, ಈ ಬಗ್ಗೆ ಅವರು ಉತ್ತರಿಸಿದ್ದಾರೆ. "ಪ್ರತಿ ವರ್ಷ ಐಫೋನ್ ಅನ್ನು ಬಯಸುವ ಜನರು ಅದನ್ನು ಹೊಂದಿರುವುದು ಉತ್ತಮ ವಿಷಯ ಎಂದು ನಾನು ಭಾವಿಸುತ್ತೇನೆ’’ ಎಂದು ಆ್ಯಪಲ್ ಸಿಇಒ ಟಿಮ್ ಕುಕ್‌ ಹೇಳಿದ್ದಾರೆ.

ಅಲ್ಲದೆ, ಆ್ಯಪಲ್ ಬಳಕೆದಾರರಿಗೆ ಅವರು ತಮ್ಮ ಫೋನ್‌ ಅನ್ನು ಟ್ರೇಡ್‌ ಇನ್‌ ಮಾಡಲು ಅವಕಾಶ ನೀಡಿರುವ ಬಗ್ಗೆ, ಅಂದರೆ ಹಳೆಯದನ್ನು ಹೊಸ ಫೋನ್‌ಗೆ ಬದಲಾಯಿಸುವ ಅವಕಾಶದ ಬಗ್ಗೆಯೂ ಹೇಳಿದರು.  "ಹಾಗಾಗಿ ನಾವು ಆ ಫೋನ್ ಇನ್ನೂ ಕಾರ್ಯನಿರ್ವಹಿಸುತ್ತಿದ್ದರೆ ಅದನ್ನು ಮರುಮಾರಾಟ ಮಾಡುತ್ತೇವೆ" ಎಂದೂ ಟಿಮ್‌ ಕುಕ್‌ ಹೇಳಿದ್ದಾರೆ. ಈ ಮೂಲಕ ಹಳೆಯ ಐಫೋನ್‌ಗಳನ್ನು ಬೇರೆ ಬೇರೆ ಜನರು ಬಳಸುತ್ತಾರೆ ಎಂದು ಸೂಚಿಸುವ ಮೂಲಕ ಸಮರ್ಥಿಸಿಕೊಂಡಿದ್ದಾರೆ.
 

ಅಲ್ಲದೆ, ಕಾರ್ಯ ನಿರ್ವಹಿಸದಿರುವ ಫೋನ್‌ಗಳು ಸಹ ಸಂಪೂರ್ಣ ವ್ಯರ್ಥವಾಗುವುದಿಲ್ಲ ಎಂದು ಟಿಮ್‌ ಕುಕ್‌ ಹೇಳಿದ್ದಾರೆ. "ಇದು [ಐಫೋನ್] ಕಾರ್ಯನಿರ್ವಹಿಸದಿದ್ದರೆ, ಅದನ್ನು ಡಿಸ್ಅಸೆಂಬಲ್ ಮಾಡುವ ಮತ್ತು ಹೊಸ ಐಫೋನ್ ತಯಾರಿಸಲು ವಸ್ತುಗಳನ್ನು ತೆಗೆದುಕೊಳ್ಳುವ ಮಾರ್ಗಗಳನ್ನು ನಾವು ಪಡೆದುಕೊಂಡಿದ್ದೇವೆ’’ ಎಂದೂ ಆ್ಯಪಲ್ ಸಿಇಒ ಟಿಮ್ ಕುಕ್ ಮಾಹಿತಿ ನೀಡಿದ್ದಾರೆ. 

ಪರಿಸರ ಮತ್ತು ಐಫೋನ್
ಕಂಪನಿಗಳ ಪರಿಸರ ಪ್ರಜ್ಞೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುವುದರಿಂದ ಈ ಪ್ರಶ್ನೆಯನ್ನು ಕೇಳಲಾಗಿದೆ. ಆ್ಯಪಲ್ ಪರಿಸರ ಪ್ರಜ್ಞೆ ಹೊಂದಿದ್ದು, ಇದನ್ನು ಮುಂದಾಳತ್ವ ವಹಿಸುತ್ತಿರುವ ಕಂಪನಿಗಳಲ್ಲಿ ಒಂದಾಗಿದೆ. ಬಹುಶಃ ಅದಕ್ಕಾಗಿಯೇ ಪ್ರತಿ ವರ್ಷ ಹೊಸ ಐಫೋನ್ ಅನ್ನು ಹೊಂದುವ ಪ್ರಶ್ನೆಯು ಪರಿಸರ ಪ್ರಜ್ಞೆಗೆ ಪೂರಕವಲ್ಲ ಎಂದು ಹಲವರು ಹೇಳಿಕೊಳ್ಳುತ್ತಾರೆ. 
 

ಆದರೆ, ಹಳೆಯ ಐಫೋನ್‌ಗಳಿಂದ ಉತ್ತಮವಾದದನ್ನು ಪಡೆಯಲು ಆ್ಯಪಲ್ ಏನು ಮಾಡಬಹುದೆಂಬ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದೂ ಟಿಮ್ ಕುಕ್ ಹೇಳಿದ್ದಾರೆ. ಹಾಗೂ, 2030 ರ ವೇಳೆಗೆ ಸಂಪೂರ್ಣವಾಗಿ ಇಂಗಾಲವನ್ನು ತಟಸ್ಥಗೊಳಿಸುವ ಗುರಿಯನ್ನು ಆ್ಯಪಲ್ ಹೊಂದಿದೆ ಮತ್ತು ಅದು ಆ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. 

2023 ರ ಐಫೋನ್ ಈವೆಂಟ್‌ನಲ್ಲಿ, ಹೊಸ ಆ್ಯಪಲ್ ವಾಚ್ ಮಾಡೆಲ್‌ಗಳನ್ನು ಬಿಡುಗಡೆ ಮಾಡಿದ್ದು, ಇದು ಮೊದಲ 100% ಸಂಪೂರ್ಣವಾಗಿ ಇಂಗಾಲದ ತಟಸ್ಥ ಉತ್ಪನ್ನಗಳಾಗಿವೆ. ಹೀಗೆ, 2030 ರ ವೇಳೆಗೆ ಐಫೋನ್ ಸಂಪೂರ್ಣವಾಗಿ ಕಾರ್ಬನ್ ನ್ಯೂಟ್ರಲ್ ಆಗುವ ಗುರಿ ಇದೆ ಎಂದೂ ಟಿಮ್‌ ಕುಕ್ ಹೇಳಿದರು.
 

Latest Videos

click me!