ಭಾರತದಲ್ಲಿ ಮೊದಲು ಬಳಕೆಯಾದ ಮೊಬೈಲ್ ನೋಕಿಯಾ, ಸ್ಯಾಮ್‌ಸಂಗ್ ಅಲ್ಲ; ಮತ್ಯಾವುದು?

First Published Oct 11, 2023, 12:12 PM IST

ಭಾರತದಲ್ಲಿ ಮೊದಲ ಬಾರಿಗೆ ಬಳಕೆಯಾದ ಮೊಬೈಲ್ ಯಾವುದು ಎಂದು ಯೋಚಿಸಲು ತೊಡಗಿದರೆ ಹೆಚ್ಚಿನವರು ನೋಕಿಯಾ ಅಥವಾ ಸ್ಯಾಮ್‌ಸಂಗ್  ಎಂದು ಹೇಳಬಹುದು. ಆದರೆ,  ಭಾರತದಲ್ಲಿ ಪರಿಚಯಿಸಲಾದ ಮೊದಲ ಮೊಬೈಲ್ ಫೋನ್ ಇದೆರಡೂ ಅಲ್ಲ. ಮತ್ಯಾವುದು?

ಭಾರತದಲ್ಲಿ ಸದ್ಯ ಐಫೋನ್‌, ಹಲವಾರು ರೀತಿಯ ಆಂಡ್ರಾಯ್ಡ್‌ ಫೋನ್‌ಗಳು ಲಭ್ಯವಿದೆ. ಆದರೆ ಕೆಲವೊಬ್ಬರು ತಮಗೆ ಅತ್ಯುತ್ತಮವೆನಿಸಿದ ನಿರ್ಧಿಷ್ಟ ಬ್ರ್ಯಾಂಡ್‌ಗಳನ್ನಷ್ಟೇ ಬಳಸುತ್ತಾರೆ. ಕೆಲವರು ಐಪೋನ್‌ ಪ್ರಿಯರಾದರೆ, ಮತ್ತೆ ಕೆಲವರು ಸ್ಯಾಮ್‌ಸಂಗ್‌, ವಿವೋ ಮುಂತಾದ ಬ್ರ್ಯಾಂಡ್ ಇಷ್ಟಪಡುತ್ತಾರೆ. ಆದರೆ ಭಾರತದಲ್ಲಿ ಮೊದಲ ಬಾರಿಗೆ ಬಳಕೆಯಾದ ಮೊಬೈಲ್ ಯಾವುದು ನಿಮಗೆ ಗೊತ್ತಿದ್ಯಾ?

ಭಾರತದಲ್ಲಿ ಮೊದಲ ಬಾರಿಗೆ ಬಳಕೆಯಾದ ಮೊಬೈಲ್ ಯಾವುದು ಎಂದು ಯೋಚಿಸಲು ತೊಡಗಿದರೆ ಹೆಚ್ಚಿನವರು ನೋಕಿಯಾ ಎಂದು ಹೇಳಬಹುದು. ಯಾಕೆಂದರೆ ಮೊಬೈಲ್ ಬಳಕೆ ಆರಂಭವಾದ ದಿನಗಳಲ್ಲಿ ಎಲ್ಲರ ಕೈಯಲ್ಲೂ ನೋಕಿಯಾ ಬೇಸಿಕ್ ಸೆಟ್‌ ಹೆಚ್ಚಾಗಿ ಕಂಡು ಬಂದಿತ್ತು. ಮತ್ತೆ ಹಲವರು ಸ್ಯಾಮ್‌ಸಂಗ್‌ ಹೆಚ್ಚಾಗಿ ಬಳಸುತ್ತಿದ್ದರು.

ಆದರೆ,  ಭಾರತದಲ್ಲಿ ಪರಿಚಯಿಸಲಾದ ಮೊದಲ ಮೊಬೈಲ್ ಫೋನ್ Nokia ಅಥವಾ Samsung ಎರಡೂ ಅಲ್ಲ ಅನ್ನೋದು ನಿಮಗೆ ಗೊತ್ತಿದ್ಯಾ? ಆ ಬಗ್ಗೆ ವಿವರಗಳು ಇಲ್ಲಿವೆ

ಭಾರತದ ಮೊಬೈಲ್ ಮಾರುಕಟ್ಟೆಗೆ ಮೊದಲಿಗೆ ಎಂಟ್ರಿ ಕೊಟ್ಟ ಬ್ರ್ಯಾಂಡ್‌  ಮೊಟೊರೊಲಾ. ಇದು ಪುಟ್ಟದಾದ ಬೇಸಿಕ್‌ ಮೊಬೈಲ್‌ನ್ನು ಮೊದಲ ಬಾರಿಗೆ ಭಾರತದಲ್ಲಿ ರಿಲೀಸ್ ಮಾಡಿತ್ತು. ಪುಟ್ಟ ಗಾತ್ರದಲ್ಲಿದ್ದ ಈ ಮೊಬೈಲ್‌ ಹೆಸರು DYNTAC 8000X.ಆ ನಂತರ ನೋಕಿಯಾ, ಸ್ಯಾಮ್‌ಸಂಗ್ ಮೊಬೈಲ್‌ ಲಭ್ಯವಾಗಲು ತೊಡಗಿತು.

ಮೊಟೊರೊಲಾ ಭಾರತೀಯ ಮಾರುಕಟ್ಟೆಗೆ ಮೊಬೈಲ್ ಫೋನ್‌ಗಳನ್ನು ಪರಿಚಯಿಸಿದ ಕಂಪನಿಯಾಗಿದೆ. ಅವರ ಐಕಾನಿಕ್ ಮಾಡೆಲ್, DYNTAC 8000X, ನಾಲ್ಕು ದಶಕಗಳ ಹಿಂದೆಯೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. ಇಟ್ಟಿಗೆಯಂತಿದ್ದ ಈ ಮೊಬೈಲ್‌ ವೈರ್‌ಲೆಸ್ ಸಂವಹನ ತಂತ್ರಜ್ಞಾನದಲ್ಲಿ ಒಂದು ಅದ್ಭುತ ಪ್ರಗತಿಯನ್ನು ಪ್ರತಿನಿಧಿಸಿತ್ತು.

ಆಧುನಿಕ ಸ್ಮಾರ್ಟ್‌ಫೋನ್‌ಗಳು ಬಹು ಬೇಗನೇ ಜಾರ್ಜ್‌ ಆಗುತ್ತವೆ. ಆದರೆ DYNTAC 8000X ಚಾರ್ಜ್‌ ಆಗಲು ಬರೋಬ್ಬರಿ 10 ಗಂಟೆ ಬೇಕಾಗುತ್ತಿತ್ತು. ಫುಲ್ ಚಾರ್ಜ್‌ ಇದ್ದರೂ ಸಹ ಈ ಮೊಬೈಲ್‌ ಕೇವಲ 30 ನಿಮಿಷ ಮಾತ್ರ ಬಳಸಲು ಸಾಧ್ಯವಾಗುತ್ತಿತ್ತು. ಇದರ ತೂಕ ಬರೋಬ್ಬರಿ 1 ಕೆಜಿ.

DYNTAC 8000X ತನ್ನ ಅಗಾಧವಾದ ತೂಕದ ಕಾರಣದಿಂದಾಗಿ ಹೆಚ್ಚು ಫೇಮಸ್ ಆಗಲ್ಲಿಲ್ಲ. ಜನರು ಇದನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವುದು ಕಷ್ಟ ಅನ್ನೋ ಕಾರಣಕ್ಕೆ ಅವಾಯ್ಡ್ ಮಾಡಿದರು. ಇದರ ಬೆಲೆ ಬರೋಬ್ಬರಿ ಮೂರು ಲಕ್ಷ ರೂಪಾಯಿ ಆಗಿತ್ತು ಅನ್ನೋದು ಅಚ್ಚರಿಯ ಸಂಗತಿ. 

ಈ ಬೆಲೆಯು ಇಂದಿನ ಐಫೋನ್ 15 ಪ್ರೊ ಮ್ಯಾಕ್ಸ್‌ನ ಬೆಲೆಗಿಂತ ಸರಿಸುಮಾರು ದುಪ್ಪಟ್ಟಾಗಿದೆ. ಇದರ ಬೆಲೆ ಪ್ರಸ್ತುತ ಸುಮಾರು 1.5 ಲಕ್ಷ ರೂಪಾಯಿಗಳು.
ಮೊಟೊರೊಲಾ ನಂತರ ಅತೀ ಕಡಿಮೆ ತೂಕದ, ಹಲವು ಫೀಚರ್‌ಗಳುಳ್ಳ ಹಲವು ಮೊಬೈಲ್ ಫೋನ್‌ಗಳನ್ನು ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು. 

click me!