ಆಕಸ್ಮಿಕವಾಗಿ ಫೋನ್ ನೀರಿಗೆ ಬಿದ್ದರೆ ಏನು ಮಾಡಬೇಕೆಂದುಮತ್ತು ಏನು ಮಾಡಬಾರದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಅನೇಕ ಫೋನ್‌ಗಳು ವಾಟರ್‌ಪ್ರೂಫ್ ಕವರ್‌ಗಳೊಂದಿಗೆ ಬರುತ್ತವೆ. ಇದರ ಹೊರತಾಗಿಯೂ, ಹಲವು ಬಾರಿ ನೀರಿನ ಕಾರಣದಿಂದ ಫೋನ್‌ಗಳು ಹಾಳಾಗುತ್ತವೆ.
ಫೋನ್ ನೀರಿಗೆ ಬಿದ್ದರೆ, ತಕ್ಷಣ ಅದನ್ನು ಆನ್ ಮಾಡಲು ಪ್ರಯತ್ನಿಸಬೇಡಿ. ಫೋನ್ ಸರಿಯಾಗಿದೆಯೆ ಅಥವಾ ಇಲ್ಲವೇ ಎಂದು ಪರಿಶೀಲಿಸಲು ಅನೇಕ ಜನರು ಮೊಬೈಲ್ ಅನ್ನು ಆನ್ ಮಾಡುತ್ತಾರೆ. ಆದರೆ ಇದು ತಪ್ಪು
ಹೇರ್ ಡ್ರೈಯರ್‌ನಿಂದ ಫೋನ್ ಅನ್ನು ಎಂದಿಗೂ ಒಣಗಿಸಬೇಡಿ. ಅನೇಕ ಜನರು ಇಂತಹ ತಪ್ಪು ಮಾಡುತ್ತಾರೆ. ಡ್ರೈಯರ್‌ನ ಬಿಸಿ ಗಾಳಿಯು ಫೋನ್‌ನ ಸರ್ಕ್ಯೂಟ್ ಮೇಲೆ ಪರಿಣಾಮ ಬೀರುತ್ತದೆ.
ಅಲ್ಲದೆ, ಡ್ರೈಯರ್‌ಗಾಳಿ ವೇಗಕ್ಕೆ ನೀರು ಇನ್ನೂ ಒಳಗೆ ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹೇರ್ ಡ್ರೈಯರ್‌ನಿಂದ ಫೋನ್ ಒಣಗಿಸುವ ತಪ್ಪು ಮಾಡಬೇಡಿ.
ಮೊದಲನೆಯದಾಗಿ, ಫೋನ್ ಅನ್ನು ನೀರಿನಿಂದ ತೆಗೆದ ತಕ್ಷಣ ಸಿಮ್ ಕಾರ್ಡ್ ತೆಗೆಯಿರಿ.
ಫೋನ್‌ನಲ್ಲಿ ಮೈಕ್ರೋ ಚಿಪ್ ಇದ್ದರೆ, ಅದನ್ನೂ ಬೇರ್ಪಡಿಸಿ. ಫೋನ್‌ನಲ್ಲಿ ರಿಮೂವೇಬಲ್ ಬ್ಯಾಟರಿ ಇದ್ದರೆ, ಅದನ್ನೂ ತೆಗೆದು ಬಿಡಿ.
ನೀರಿನಲ್ಲಿ ಬಿದ್ದ ಫೋನ್‌ನಬ್ಯಾಟರಿಯನ್ನು ತೆಗೆಯುವ ಮೂಲಕ, ಹಾನಿಯಾಗುವ ಸಾಧ್ಯತೆಗಳು ಬಹಳಕಡಿಮೆಯಾಗುತ್ತವೆ.
ಈಗ ಫೋನ್ ಅನ್ನು 24 ಗಂಟೆಗಳ ಕಾಲ ಅಕ್ಕಿಯ ಮಧ್ಯದಲ್ಲಿ ಇರಿಸಿ. ಇದು ಬಹಳ ಫೇಮಸ್ ಟ್ರಿಕ್ ಆಗಿದೆ. ಈ ಮೂಲಕ ಅಕ್ಕಿ ಫೋನ್‌ನ ಎಲ್ಲಾ ತೇವಾಂಶವನ್ನು ಹೀರಿಕೊಳ್ಳುತ್ತದೆ.
24 ಗಂಟೆಗಳ ನಂತರ ಫೋನ್ ಆನ್ ಮಾಡಲು ಪ್ರಯತ್ನಿಸಿ. ಫೋನ್ ಆನ್ ಆಗಿಲ್ಲದಿದ್ದರೆ, ಅದನ್ನು ರಿಪೇರಿಗೆ ತೆಗೆದುಕೊಂಡು ಹೋಗಿ.