36 ಲಕ್ಷ ಹೊಸ ಬಳಕೆದಾರರು ಸೇರ್ಪಡೆ; ಜಿಯೋ ಹಿಂದಿಕ್ಕಿದ ಏರ್‌ಟೆಲ್!

First Published | Dec 25, 2020, 3:47 PM IST

ಇತರ ಎಲ್ಲಾ ದೇಶಗಳಿಗಿಂತ ಭಾರತದಲ್ಲಿ ಟೆಲಿಕಾಂ ಸೇವೆಗಳಲ್ಲಿ ಭಾರಿ ಪೈಪೋಟಿ ಇದೆ. ಹೀಗಾಗಿ  ವಿಶ್ವದ ಅತ್ಯಂತ ಕಡಿಮೆ ಬೆಲೆಗೆ ಡೇಟಾ ಸೇವೆಗಳು ಭಾರತದಲ್ಲಿ ಲಭ್ಯವಿದೆ. ಪ್ರಮುಖಾಗಿ  ಭಾರತದಲ್ಲಿ ರಿಲಾಯನ್ಸ್ ಜಿಯೋ, ಏರ್‌ಟೆಲ್, ವೋಡಾಫೋನ್-ಐಡಿಯಾ ಪ್ರತಿಸ್ಪರ್ಧಿಗಳಾಗಿವೆ. ಇದೀಗ ಟ್ರಾಯ್ ಬಿಡುಗಡೆ ಮಾಡಿದ ಅಂಕಿ ಅಂಶದಲ್ಲಿ ಏರ್‌ಟೆಲ್, ತನ್ನ ಪ್ರತಿಸ್ಪರ್ಧಿಗಳಾದ ಜಿಯೋ ಹಾಗೂ ವೋಡಾಫೋನ್ ಹಿಂದಿಕ್ಕಿ ಅಗ್ರಸ್ಥಾನದಲ್ಲಿದೆ.

ಇತರ ದೇಶಗಳಲ್ಲಿ 1 ಜಿಬಿ ಡೇಟಾ ಬೆಲೆ ಸರಾಸರಿ 500 ರಿಂದ 800 ರೂಪಾಯಿ ಇದೆ. ಆದರೆ ಭಾರತದಲ್ಲಿ 30 ಜಿಬಿ ಕೇವಲ 150 ರೂಪಾಯಿಗೆ ಸಿಗಲಿದೆ. ಇದಕ್ಕೆ ಕಾರಣ ಭಾರತದ ಟೆಲಿಕಾಂ ಸರ್ವೀಸ್‌ಗಳ ಪೈಪೋಟಿ.
ರಿಲಾಯನ್ಸ್ ಜಿಯೋ, ಏರ್‌ಟೆಲ್ ಹಾಗೂ ವೋಡಾಫೋನ್-ಐಡಿಯಾ ಟೆಲಿಕಾಂ ನಡುವೆ ಭಾರಿ ಪೈಪೋಟಿ ಇದೆ. ಈ ಕಾಂಪಿಟೀಶನ್ ನಡುವೆ ಏರ್‌ಟೆಲ್ ಮತ್ತೊಮ್ಮೆ ಅತೀ ಹೆಚ್ಚು ಹೊಸ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
Tap to resize

ಅಕ್ಟೋಬರ್ ತಿಂಗಳ ಅಂಕಿ ಅಂಶವನ್ನು ಟ್ರಾಯ್ ಬಿಡುಗಡೆ ಮಾಡಿದೆ. ಇದರಲ್ಲಿ ಏರ್‌ಟೆಲ್ 3.67 ಮಿಲಿಯನ್ ಹೊಸ ಬಳಕೆದಾರರನ್ನು ಸೇರಿಸಿಕೊಂಡಿದೆ. ಈ ಮೂಲಕ ಅಗ್ರಸ್ಥಾನ ಪಡೆದಕೊಂಡಿದೆ.
ಭಾರಿ ಸದ್ದು ಮಾಡುತ್ತಿರುವ ರಿಲಾಯನ್ಸ್ ಜಿಯೋ ಅಕ್ಟೋಬರ್ ತಿಂಗಳಲ್ಲಿ 22 ಲಕ್ಷ ಹೊಸ ಬಳಕೆದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ 2ನೇ ಸ್ಥಾನದಲ್ಲಿದೆ.
ರೈತ ಪ್ರತಿಭಟನೆಗೂ ಮೊದಲಿನ ಅಂಕಿ ಅಂಶಗಳು ಇದಾಗಿದೆ. ಹೀಗಾಗಿ ಬಾಯ್ಕಾಟ್ ಜಿಯೋ ಸೇರಿದಂತೆ ರೈತರ ಬಹಿಷ್ಕಾರದ ಕರೆ ಈ ಅಂಕಿ ಅಂಶಕ್ಕೆ ಅನ್ವಯವಾಗುವುದಿಲ್ಲ.
ಹೊಸ ಬಳಕೆದಾರರ ಸೇರ್ಪಡೆಯಿಂದ ಅಕ್ಟೋಬರ್ ತಿಂಗಳಲ್ಲಿ ಏರ್‌ಟೆಲ್ ಚಂದಾದಾರರ ಸಂಖ್ಯೆ ಒಟ್ಟು 330.28 ಮಿಲಿಯನ್ ಆಗಿದೆ. ಈ ಮೂಲಕ ಏರ್‌ಟೆಲ್ ಚಂದಾದಾರಿಕೆಯಲ್ಲಿ ತೀವ್ರ ವೇಗದಲ್ಲಿ ಹೆಜ್ಜೆ ಹಾಕುತ್ತಿದೆ.
ಒಟ್ಟು ಚಂದಾದಾರಿಕೆಯಲ್ಲಿ ರಿಲಾಯನ್ಸ್ ಜಿಯೋ ಮೊದಲ ಸ್ಥಾನದಲ್ಲಿದೆ. ಜಿಯೋ ಅಕ್ಟೋಬರ್ ತಿಂಗಳಲ್ಲಿ ಒಟ್ಟು ಚಂದಾದಾರಿಕೆ 406.35 ಮಿಲಿಯನ್ ಆಗಿದೆ.
ಆದರೆ ವೋಡಾಫೋನ್ ಐಡಿಯಾಗೆ ಸಂಕಷ್ಟ ಎದುರಾಗಿದೆ. ಒಟ್ಟು ಚಂದಾದಾರಿಕೆ ಪೈಕಿ ಅಕ್ಟೋಬರ್ ತಿಂಗಳಲ್ಲಿ ಸುಮಾರು 26 ಲಕ್ಷ ಮಂದಿ ವೋಡಾಫೋನ್-ಐಡಿಯಾದಿಂದ ಹೊರಬಂದಿದ್ದಾರೆ.

Latest Videos

click me!