WhatsApp ಫೈಲ್ಸ್‌ನಿಂದ ತುಂಬಿರುವ ಫೋನ್, ಕ್ಲೌಡ್ ಸ್ಟೋರೇಜ್ ಕ್ಲೀಯರ್ ಮಾಡುವುದು ಹೇಗೆ?

First Published | Dec 7, 2020, 2:35 PM IST

ವ್ಯಾಟ್ಸ್ಆ್ಯಪ್‌ನಲ್ಲಿನ ಚಾಟಿಂಗ್, ವಿಡಿಯೋ, ಇಮೇಜ್, ಡಾಕ್ಯುಮೆಂಟ್ ಸೇರಿದಂತೆ ಹಲವು ಫೈಲ್‌ಗಳನ್ನು ಕಳುಹಿಸುವುದು ಹಾಗೂ ರಿಸೀವ್ ಮಾಡುವ ಕಾರಣ ನಿಮ್ಮ ಫೋನ್ ಸ್ಟೋರೇಜ್ ಹಾಗೂ ಕ್ಲೌಡ್ ಸ್ಟೋರೇಜ್ ತುಂಬುವ ಸಾಧ್ಯತೆ ಹೆಚ್ಚು. ಇದರಿಂದ ಫೋನ್ ಹ್ಯಾಂಗ್ ಆಗಲಿದೆ. ಹೀಗಾಗಿ ಸುಲಭವಾಗಿ ವ್ಯಾಟ್ಸ್ಆ್ಯಪ್‌ನಿಂದ ತುಂಬಿರುವ ಫೋನ್ ಹಾಗೂ ಕ್ಲೌಡ್ ಸ್ಟೋರೇಜ್ ನಿರ್ವಹಣೆ ಹೇಗೆ? ಇಲ್ಲಿದೆ.
 

ಇತರ ಆ್ಯಪ್, ಗೇಮಿಂಗ್ ಆ್ಯಪ್‌ಗಳಿಗೆ ಹೋಲಿಸಿದರೆ ವ್ಯಾಟ್ಸ್ಆ್ಯಪ್ ನಿಮ್ಮ ಫೋನ್‌ನಲ್ಲಿರುವ ಹೆಚ್ಚಿನ ಸ್ಟೋರೇಜ್ ಆಕ್ರಮಿಸಿಕೊಳ್ಳುವುದಿಲ್ಲ.
ಕಡಿಮೆ ಸ್ಟೋರೇಜ್‌ನಲ್ಲಿ WhatsApp ಕಾರ್ವನಿರ್ವಹಿಸಲಿದೆ. ಆದರೆ ವ್ಯಾಟ್ಸ್ಆ್ಯಪ್ ಚಾಟಿಂಗ್, ವಿಡಿಯೋ ಫೈಲ್, ಡಾಕ್ಯುಮೆಂಟ್ ಸೇರಿದಂತೆ ಹಲವು ಫೈಲ್‌ಗಳಿಂದ ನಿಮ್ಮ ಫೋನ್ ಸ್ಟೋರೇಜ್, ಕ್ಲೌಡ್ ಸ್ಟೋರೇಜ್ ತುಂಬಿ ಹೋಗಲಿದೆ.
Tap to resize

ಸ್ಟೋರೇಜ್ ಸ್ಪೇಸ್ ಕಡಿಮೆಯಾಗುತ್ತಿದ್ದಂತೆ ಫೋನ್ ಹ್ಯಾಂಗ್ ಆಗುವ, ದಿಢೀರನೇ ಕಮಾಂಡ್ ಸ್ವೀಕರಿಸದಿರು ಸಾಧ್ಯತೆಗಳು ಹೆಚ್ಚು. ಹೀಗಾಗಿ ಸ್ಟೋರೇಜ್ ಸ್ಪೇಸ್ ಖಾಲಿ ಮಾಡಲೇಬೇಕು.
ವ್ಯಾಟ್ಸ್‌ಆ್ಯಪ್‌ನಲ್ಲಿ ಬರುವ ಎಲ್ಲಾ ಫೈಲ್ ಮುಖ್ಯವಾಗಿರುವುದಿಲ್ಲ. ಹಲವು ಫಾರ್ವರ್ಡ್ ವಿಡಿಯೋ, ಫೈಲ್, ಇಮೇಜ್‌ಗಳು ಆ ಕ್ಷಣದ ಬಳಿಕ ವ್ಯಾಟ್ಸ್‌ಆ್ಯಪ್ ಹಿಸ್ಟರಿ ಕ್ಲಿಯರ್ ಮಾಡಿದ್ದರೂ, ಸ್ಟೋರೇಜ್‌ನಲ್ಲಿ ಉಳಿದುಕೊಂಡಿರುತ್ತದೆ.
ವ್ಯಾಟ್ಸ್ಆ್ಯಪ್ ಬ್ಯಾಕ್ ಅಫ್ ಫೈಲ್ಸ್ ಮಾಡಿದಾಗ ಮಿಡಿಯಾ ಫೈಲ್ ಕೂಡ ಇದರೊಂದಿಗೆ ಸೇರಿಹೋಗಲಿದೆ. ಹೀಗಾಗಿ ಅನಗತ್ಯ ಫೈಲ್‌ಗಳು ಸ್ಟೋರೇಜ್ ಸ್ಪೇಸ್ ತಿನ್ನುತ್ತದೆ. ಇದನ್ನು ವ್ಯಾಟ್ಸ್ಆ್ಯಪ್ ಸೆಟ್ಟಿಂಗ್ ಮೂಲಕ ಸುಲಭವಾಗಿ ನಿಭಾಯಿಸಬಹುದು.
ವ್ಯಾಟ್ಸ್ಆ್ಯಪ್ ಸೆಟ್ಟಿಂಗ್‌ನಲ್ಲಿ > Storage ಮತ್ತು Data > Manage Storage ಕ್ಲಿಕ್ ಮಾಡಬೇಕು. ಇಲ್ಲಿ 5 MBಗಿಂತ ದೊಡ್ಡದಾದ ಫೈಲ್ಸ್ ಆಯ್ಕೆ ಮಾಡಬೇಕು. ಬಳಿಕ ಕ್ಲೀಯರ್ ಫೈಲ್ಸ್ ಆಯ್ಕೆ ನೀಡಿದರೆ, ಅನಗತ್ಯ ಫೈಲ್ಸ್ ಕ್ಲೀಯರ್ ಆಗಲಿದೆ.
ಇದೇ ಸೆಟ್ಟಿಂಗ್‌ನಲ್ಲಿ ಕೆಳಗಡೆ ಫಾರ್ವರ್ಡ್ ಮೇಸೇಜ್ ಕ್ಲೀಯರ್ ಆಯ್ಕೆ ಕೂಡ ಲಭ್ಯವಿದೆ. ಮೂಲಕ ಅನಗತ್ಯ ಫಾರ್ವರ್ಡ್ ಮೇಸೇಜ್‌ಗಳನ್ನು ಕ್ಲೀಯರ್ ಮಾಡಬುಹುದು.
ವೈಯುಕ್ತಿ, ಗ್ರೂಪ್ ಚಾಟ್ ಮೇಸೇಜ್‌ಗಳನ್ನು ಡಿಲೀಟ್ ಮಾಡುವ ಆಯ್ಕೆಯೂ ಇದೆ. ಈ ಮೂಲಕ ಸುಲಭವಾಗಿ ಫೋನ್ ಸ್ಟೋರೇಜ್ ಹಾಗೂ ಕ್ಲೌಡ ಸ್ಟೋರೇಜ್‌ನಲ್ಲಿ ತುಂಬಿರುವ ವ್ಯಾಟ್ಸ್ಆ್ಯಪ್ ಅನಗತ್ಯ ಫೈಲ್‌ಗಳನ್ನು ಡಿಲೀಟ್ ಮಾಡಬಹುದು.

Latest Videos

click me!