ಸಾವಿರಾರು ರೂಪಾಯಿ ಕೊಟ್ಟು ಸ್ಮಾರ್ಟ್‌ಫೋನ್ ಖರೀದಿ ಮಾಡ್ತೀವಿ. ಆದರೆ ಕೆಲವೇ ದಿನಗಳಲ್ಲಿ ಫೋನ್ ಹ್ಯಾಂಗ್ ಆಗೋದು, ಬ್ಯಾಟರಿ ಬೇಗ ಖಾಲಿಯಾಗೋದು ಶುರುವಾಗುತ್ತೆ. ಇದಕ್ಕೆ ನಾವು ಮಾಡುವ ಈ 5 ತಪ್ಪುಗಳೇ ಕಾರಣ.
ಬ್ಯಾಂಕಿಂಗ್, ಆನ್‌ಲೈನ್ ಶಾಪಿಂಗ್, ಶಿಕ್ಷಣದಿಂದ ಹಿಡಿದು ಉದ್ಯೋಗದವರೆಗೆ ಪ್ರತಿಯೊಂದು ಕೆಲಸಕ್ಕೂ ನಾವು ಮೊಬೈಲ್ ಫೋನ್ ಅನ್ನೇ ಅವಲಂಬಿಸಿದ್ದೇವೆ. ಅಂತಹ ಫೋನ್ ಇದ್ದಕ್ಕಿದ್ದಂತೆ ನಿಧಾನವಾದರೆ, ಬ್ಯಾಟರಿ ಬೇಗ ಖಾಲಿಯಾದರೆ ಅಥವಾ ಹ್ಯಾಂಗ್ ಆದರೆ ತುಂಬಾ ತೊಂದರೆಯಾಗುತ್ತದೆ. ಫೋನ್ ಹಾಳಾಗಲು ನಾವು ಮಾಡುವ ಕೆಲವು ಸಣ್ಣ ತಪ್ಪುಗಳೇ ಮುಖ್ಯ ಕಾರಣ. ನಿಮ್ಮ ಸ್ಮಾರ್ಟ್‌ಫೋನ್ ಹೆಚ್ಚು ಕಾಲ ಹೊಸದರಂತೆ ಕೆಲಸ ಮಾಡಲು ಯಾವ ತಪ್ಪುಗಳನ್ನು ಮಾಡಬಾರದು ಎಂದು ಇಲ್ಲಿ ತಿಳಿಯಿರಿ.
25
100% ಚಾರ್ಜ್ ಮಾಡೋದು ಅಥವಾ 0% ಆಗುವವರೆಗೂ ಬಳಸುವುದು
ಅನೇಕರು ಮಾಡುವ ದೊಡ್ಡ ತಪ್ಪು ಅಂದ್ರೆ ಫೋನ್ ಅನ್ನು 100% ಚಾರ್ಜ್ ಮಾಡೋದು ಅಥವಾ 0% ಆಗುವವರೆಗೂ ಬಳಸುವುದು. ಈಗಿನ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಲಿಥಿಯಂ-ಅಯಾನ್ ಬ್ಯಾಟರಿಗಳಿರುತ್ತವೆ. ಇವುಗಳನ್ನು ಪೂರ್ತಿ ಡಿಸ್ಚಾರ್ಜ್ ಅಥವಾ ಹೆಚ್ಚು ಚಾರ್ಜ್ ಮಾಡಿದರೆ ಬ್ಯಾಟರಿ ಹಾಳಾಗುತ್ತದೆ. ತಜ್ಞರ ಪ್ರಕಾರ, ಬ್ಯಾಟರಿಯನ್ನು 20 ರಿಂದ 80% ನಡುವೆ ಇಡುವುದು ಉತ್ತಮ. ರಾತ್ರಿಯಿಡೀ ಚಾರ್ಜ್ ಮಾಡುವುದನ್ನು ತಪ್ಪಿಸಿ.
35
ಕಳಪೆ ಗುಣಮಟ್ಟದ ಚಾರ್ಜರ್ ಬಳಕೆ
ಒರಿಜಿನಲ್ ಚಾರ್ಜರ್ ಹಾಳಾದಾಗ, ಕಡಿಮೆ ಬೆಲೆಗೆ ಸಿಗುವ ಬೇರೆ ಚಾರ್ಜರ್ ಬಳಸುತ್ತಾರೆ. ಆದರೆ ಕಳಪೆ ಗುಣಮಟ್ಟದ ಚಾರ್ಜರ್‌ಗಳು ಸರಿಯಾದ ವೋಲ್ಟೇಜ್ ನೀಡುವುದಿಲ್ಲ. ಇದರಿಂದ ಬ್ಯಾಟರಿ ಮತ್ತು ಫೋನ್‌ನ ಚಾರ್ಜಿಂಗ್ ಸರ್ಕ್ಯೂಟ್ ಹಾಳಾಗುವ ಅಪಾಯವಿದೆ. ಯಾವಾಗಲೂ ಕಂಪನಿ ಕೊಟ್ಟ ಒರಿಜಿನಲ್ ಚಾರ್ಜರ್ ಅಥವಾ ಉತ್ತಮ ಬ್ರ್ಯಾಂಡ್‌ನ ಸರ್ಟಿಫೈಡ್ ಚಾರ್ಜರ್ ಬಳಸಿ.
45
ಫೋನ್ ಮೆಮೊರಿಯನ್ನು ಪೂರ್ತಿ ತುಂಬುವುದು
ಫೋಟೋ, ವಿಡಿಯೋ, ಅನಗತ್ಯ ಆ್ಯಪ್‌ಗಳಿಂದ ಫೋನ್ ಮೆಮೊರಿಯನ್ನು ಪೂರ್ತಿ ತುಂಬುವುದು ತಪ್ಪು. ಇದರಿಂದ ಫೋನ್‌ನ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಆ್ಯಪ್‌ಗಳು ಓಪನ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಫೋನ್ ಹ್ಯಾಂಗ್ ಆಗಬಹುದು. ಹಾಗಾಗಿ, ಕನಿಷ್ಠ 15 ರಿಂದ 20% ಸ್ಟೋರೇಜ್ ಖಾಲಿ ಇಡುವುದು ಒಳ್ಳೆಯದು.
55
ಬಿಸಿಲಿನಲ್ಲಿ ಫೋನ್ ಬಳಸುವುದು
ಹೆಚ್ಚು ಹೊತ್ತು ಗೇಮ್ ಆಡುವುದು, ಬಿಸಿಲಿನಲ್ಲಿ ಫೋನ್ ಬಳಸುವುದು, ಚಾರ್ಜ್ ಹಾಕಿಕೊಂಡು ವಿಡಿಯೋ ನೋಡುವುದರಿಂದ ಫೋನ್ ಬಿಸಿಯಾಗುತ್ತದೆ. ಹೀಗೆ ಪದೇ ಪದೇ ಬಿಸಿಯಾದರೆ ಬ್ಯಾಟರಿ ಲೈಫ್ ಕಡಿಮೆ ಆಗುತ್ತದೆ ಮತ್ತು ಪ್ರೊಸೆಸರ್ ಕಾರ್ಯಕ್ಷಮತೆಗೂ ಧಕ್ಕೆಯಾಗುತ್ತದೆ. ಫೋನ್ ಬಿಸಿಯಾದಾಗ ಸ್ವಲ್ಪ ಹೊತ್ತು ಪಕ್ಕಕ್ಕಿಟ್ಟು ನಂತರ ಬಳಸಿ.
ಸಾಫ್ಟ್‌ವೇರ್ ಅಪ್‌ಡೇಟ್ ನೋಟಿಫಿಕೇಶನ್ ಬಂದರೂ ಹಲವರು ನಿರ್ಲಕ್ಷಿಸುತ್ತಾರೆ. ಈ ಅಪ್‌ಡೇಟ್‌ಗಳು ಹೊಸ ಫೀಚರ್‌ಗಳ ಜೊತೆಗೆ ಸೆಕ್ಯುರಿಟಿ ದೋಷಗಳನ್ನು ಸರಿಪಡಿಸುತ್ತವೆ. ಅಧಿಕೃತ ಆ್ಯಪ್ ಸ್ಟೋರ್ ಬಿಟ್ಟು ಬೇರೆ ಕಡೆಯಿಂದ ಆ್ಯಪ್ ಡೌನ್‌ಲೋಡ್ ಮಾಡಿದರೆ ವೈರಸ್ ಬರಬಹುದು. ಇದರಿಂದ ಫೋನ್ ಸ್ಲೋ ಆಗುತ್ತದೆ. ಯಾವಾಗಲೂ ಅಧಿಕೃತ ಆ್ಯಪ್ ಸ್ಟೋರ್‌ನಿಂದಲೇ ಆ್ಯಪ್ ಇನ್‌ಸ್ಟಾಲ್ ಮಾಡಿ ಮತ್ತು ಸಮಯಕ್ಕೆ ಸರಿಯಾಗಿ ಅಪ್‌ಡೇಟ್ ಮಾಡಿ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.