ಟೆಕ್ ದಿಗ್ಗಜ ಗೂಗಲ್ ಇದೀಗ ಪಿಕ್ಸೆಲ್ 8 ಸೀರಿಸ್ ಫೋನ್ ಬಿಡುಗಡೆ ಮಾಡುತ್ತಿದೆ. ಭಾರತ ಸೇರಿದಂತೆ ವಿಶ್ವದೆಲ್ಲಡೆ ಅಕ್ಟೋಬರ್ 4 ರಂದು ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ.
ಕಳೆದ ವರ್ಷ ಗೂಗಲ್ ಪಿಕ್ಸೆಲ್ 7 ಸೀರಿಸ್ ಬಿಡುಗೆಡಯಾಗಿ ಯಶಸ್ವಿಯಾಗಿತ್ತು. ಇದೀಗ ಪಿಕ್ಸೆಲ್ 8 ಹಾಗೂ ಗೂಗಲ್ ಪಿಕ್ಸೆಲ್ 8 ಪ್ರೋ ಎರಡು ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ.
ಅಕ್ಟೋಬರ್ 4 ರ ಸಂಜೆ 7.30ಕ್ಕೆ ಗೂಗಲ್ ಪಿಕ್ಸೆಲ್ 8 ಸೀರಿಸ್ ಫೋನ್ ಲಾಂಚ್ ಕಾರ್ಯಕ್ರಮ ಆರಂಭಗೊಳ್ಳಲಿದೆ. ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳಲ್ಲಿ ಕಾರ್ಯಕ್ರಮದ ಲೈವ್ ವೀಕ್ಷಿಸಲು ಸಾಧ್ಯವಿದೆ.
ಗೂಗಲ್ ಪಿಕ್ಸೆಲ್ 8 ಫೋನ್ ಟೆನ್ಸರ್ G3 ಚಿಪ್‌ಸೆಟ್ ಹೊಂದಿದ್ದು, 8GB RAM ಹೊಂದಿದೆ. 50MP ಪ್ರೈಮರಿ ಕ್ಯಾಮೆರಾ ಹಾಗೂ 12MP ಅಲ್ಟ್ರಾ ವೈಡ್ ಕ್ಯಾಮೆರಾ ಇರಲಿದೆ.
ಗೂಗಲ್ ಪಿಕ್ಸೆಲ್ 8 ಸ್ಮಾರ್ಟ್‌ಫೋನ್ 4575mAh ಬ್ಯಾಟರಿ, 6.2 ಇಂಚಿನ FHD+ OLED ಡಿಸ್‌ಪ್ಲೇ ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್ಸ್ ಹೊಂದಿದೆ.
ಗೂಗಲ್ ಪಿಕ್ಸೆಲ್ 8 ಪ್ರೋ ಫೋನ್ ಗೂಗಲ್ ಟೆನ್ಸರ್ G3 ಚಿಪ್‌ಸೆಟ್ ಹಾಗೂ 12GB RAM ಹೊಂದಿದೆ. ಇನ್ನು 50MP ಪ್ರೈಮರಿ ಕ್ಯಾಮೆರಾ ಹಾಗೂ 48MP ಅಲ್ಟ್ರಾ ವೈಡ್ ಕ್ಯಾಮೆರಾ ಫೀಚರ್ಸ್ ಹೊಂದಿದೆ.
ಇನ್ನು 8 ಪ್ರೋ ಸ್ಮಾರ್ಟ್ ಫೋನ್ 5050mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದೆ. 6.7 ಇಂಚಿನ QHD+ OLED ಡಿಸ್‌ಪ್ಲೆ ಸೇರಿದಂತೆ ಕೆಲ ಹೆಚ್ಚುವರಿ ಫೀಚರ್ಸ್ ಈ ಫೋನ್‌ನಲ್ಲಿದೆ.
ಗೂಗಲ್ ಪಿಕ್ಸೆಲ್ 8 ಹಾಗೂ ಪಿಕ್ಸೆಲ್ 8 ಪ್ರೋ ಸ್ಮಾರ್ಟ್‌ಫೋನ್ ಬೆಲೆ ಇನ್ನು ಬಹಿರಂಗವಾಗಿಲ್ಲ. ನಾಳೆ ಕಾರ್ಯಕ್ರಮದಲ್ಲಿ ಬೆಲೆ ಪ್ರಕಟಗೊಳ್ಳಲಿದೆ. ಕಳೆದ ವರ್ಷ ಬಿಡುಗಡೆಯಾದ ಗೂಗಲ್ ಪಿಕ್ಸೆಲ್ 7 ಫೋನ್ ಬೆಲೆ 49,999 ರೂಪಾಯಿ.