ನಿಮ್ಮ ಐಫೋನ್ ಹೆಚ್ಚು ಬಿಸಿಯಾಗ್ತಿದ್ಯಾ..? ಆ್ಯಪಲ್ ಕಂಪನಿ ನೀಡಿದ ಕಾರಣಗಳು ಹೀಗಿದೆ..

Published : Oct 02, 2023, 01:18 PM ISTUpdated : Oct 02, 2023, 01:40 PM IST

ಹೊಸ ಐಫೋನ್‌ 15 ಹೊಂದಿರುವವವರು ಬಳಕೆಯ ಸಮಯದಲ್ಲಿ ಅಹಿತಕರವಾಗಿ ಬಿಸಿಯಾಗುತ್ತಿದೆ ಎಂದು ವರದಿ ಮಾಡಿದ್ದಾರೆ, ವಿಶೇಷವಾಗಿ iPhone 15 Pro ಮಾಡೆಲ್‌ಗಳಿಗೆ ಈ ಕಂಪ್ಲೇಂಟ್‌ ಹೆಚ್ಚಾಗಿದೆ.

PREV
114
ನಿಮ್ಮ ಐಫೋನ್ ಹೆಚ್ಚು ಬಿಸಿಯಾಗ್ತಿದ್ಯಾ..?  ಆ್ಯಪಲ್ ಕಂಪನಿ ನೀಡಿದ ಕಾರಣಗಳು ಹೀಗಿದೆ..

ಹೊಸ iPhone 15 - ವೆನಿಲ್ಲಾ iPhone 15 ಮತ್ತು iPhone 15 Pro ಮಾಡೆಲ್‌ಗಳನ್ನು ಕೇವಲ ಒಂದು ವಾರದ ಹಿಂದೆ ಮಾರಾಟಕ್ಕೆ ಬಿಡುಗಡೆಯಾಗಿದೆ. ಹೊಸ ಐಫೋನ್‌ಗಳ ಬೇಡಿಕೆಯು ಹೆಚ್ಚುತ್ತಿದ್ದು, ಇದರಿಂದ ಗ್ರಾಹಕರು ಅಂಗಡಿ ಮುಂದೆ ಸಾಲುಗಟ್ಟಲೆ ನಿಲ್ತಿದ್ದಾರೆ. ಹಾಗೂ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದವರ ಕಾಯುವಿಕೆ ಸಮಯ ಹೆಚ್ಚಾಗಿದೆ. 
 

214

ಇವೆಲ್ಲವುಗಳ ಮಧ್ಯೆ ಹೊಸ ಐಫೋನ್‌ 15 ಹೊಂದಿರುವವವರು ಬಳಕೆಯ ಸಮಯದಲ್ಲಿ ಅಹಿತಕರವಾಗಿ ಬಿಸಿಯಾಗುತ್ತಿದೆ ಎಂದು ವರದಿ ಮಾಡಿದ್ದಾರೆ, ವಿಶೇಷವಾಗಿ iPhone 15 Pro ಮಾಡೆಲ್‌ಗಳಿಗೆ ಈ ಕಂಪ್ಲೇಂಟ್‌ ಹೆಚ್ಚಾಗಿದೆ. ಆ್ಯಪಲ್ ಈ ಸಮಸ್ಯೆಯನ್ನು ಒಪ್ಪಿಕೊಂಡಿದೆ ಮತ್ತು ಫೋರ್ಬ್ಸ್‌ಗೆ ಹೇಳಿಕೆಯಲ್ಲಿ ಐಫೋನ್ "ನಿರೀಕ್ಷೆಗಿಂತ ಬೆಚ್ಚಗಾಗಲು" ಕೆಲ ಕಾರಣಗಳನ್ನು ಗುರುತಿಸಿದೆ.
 

314

ಐಫೋನ್ 15 ಪ್ರೋ ಫೋನ್‌ಗಳು ಹೆಚ್ಚು ಬಿಸಿಯಾಗ್ತಿದೆ ಎಂದು ವರದಿಗಳಾಗಿದ್ದು, ಹೆಚ್ಚಿನ ಜನರು ಐಫೋನ್ 15 ಪ್ರೋ ಮಾದರಿಗಳ ಹೊಸ ಟೈಟಾನಿಯಂ ಫ್ರೇಮ್ ಅನ್ನು ದೂಷಿಸುತ್ತಿದ್ದಾರೆ. ಕೆಲವರು ಹೊಸ 3nm A17 Pro ಅನ್ನು ಐಫೋನ್ 15 ಪ್ರೋ ತಾಪನದ ಹಿಂದಿನ ಕಾರಣವೆಂದು ರೂಪಿಸುತ್ತಿದ್ದಾರೆ.
 

414

ಆದರೆ, ಆ್ಯಪಲ್ ಇದನ್ನು ನಿರಾಕರಿಸುತ್ತದೆ ಮತ್ತು ಮೊದಲ ಕೆಲ ದಿನಗಳ ಕಾಲ ಫೋನ್‌ ಬಿಸಿಯಾಗುವುದು ಸಾಮಾನ್ಯವಾಗಿದೆ ಎಂದು ಹೇಳುತ್ತದೆ. ಅಷ್ಟೇ ಅಲ್ಲ, ಐಒಎಸ್ 17 ಅಪ್‌ಡೇಟ್‌ನಲ್ಲಿ ಕೆಲವು ದೋಷವೂ ಇದ್ದು, ಅದು ಐಫೋನ್‌ಗಳು ಬೆಚ್ಚಗಾಗಲು ಕಾರಣವಾಗಿದೆ ಎಂದು ಹೇಳಿದೆ.

514

ನಿಮ್ಮ ಐಫೋನ್ ಏಕೆ ಹೆಚ್ಚು ಬಿಸಿಯಾಗಬಹುದು
ಆದರೆ ಮೊದಲ ಕೆಲವು ದಿನಗಳಲ್ಲಿ ಐಫೋನ್ ಏಕೆ "ನಿರೀಕ್ಷೆಗಿಂತ ಬೆಚ್ಚಗಿರುತ್ತದೆ"? ಅಥವಾ ಬಿಸಿಯಾಗಿರುತ್ತದೆ ಅಂದ್ರೆ ಹೆಚ್ಚಿದ ಬ್ಯಾಕ್‌ಗ್ರೌಂಡ್‌ ಚಟುವಟಿಕೆಯ ಕಾರಣದಿಂದಾಗಿ ಎಂದು ಆ್ಯಪಲ್ ಹೇಳುತ್ತದೆ. ನೀವು ಹೊಸ iPhone ಅನ್ನು ಸೆಟಪ್‌ ಮಾಡಿದಾಗ ಅಥವಾ ನಿಮ್ಮ ಹಿಂದಿನದರಿಂದ ಅದನ್ನು ರೀಸ್ಟೋರ್‌ ಮಾಡಿದಾಗ, ಅದು ಮೊದಲಿನಿಂದ ಎಲ್ಲವನ್ನೂ ಡೌನ್‌ಲೋಡ್ ಮಾಡುತ್ತದೆ - ಅಪ್ಲಿಕೇಶನ್‌, ಫೋಟೋ ಮತ್ತು ಮ್ಯೂಸಿಕ್ - ಹಾಗೂ ಉತ್ತಮ ಆಪ್ಟಿಮೈಸೇಶನ್‌ಗಾಗಿ ನಿಮ್ಮ ಬಳಕೆಯ ಮಾದರಿಯನ್ನು ಸಹ ಕಲಿಯುತ್ತದೆ.

614

ಆದ್ದರಿಂದ ಕೆಲವು ಪ್ರಕ್ರಿಯೆಗಳು ಬ್ಯಾಕ್‌ಗ್ರೌಂಡ್‌ನಲ್ಲಿ ಚಾಲನೆಯಲ್ಲಿರುತ್ತದೆ, ಇದು ಹೊಸದಾಗಿ ಸೆಟಪ್‌  ಮಾಡಲಾದ iPhone ಅಥವಾ ಯಾವುದೇ ಇತರ ಸಾಧನವನ್ನು ಅತಿಯಾಗಿ ಬಿಸಿಯಾಗುವಂತೆ ಮಾಡುತ್ತದೆ.

714

ಇನ್ನು, ಆ್ಯಪಲ್ iOS 17 ನಲ್ಲಿ ಕಂಪನಿ ದೋಷವನ್ನು ಕಂಡುಕೊಂಡಿದ್ದು, ಇದು ಮುಂಬರುವ ಸಾಫ್ಟ್‌ವೇರ್ ಅಪ್‌ಡೇಟ್‌ನಲ್ಲಿ ಸರಿಪಡಿಸಲ್ಪಡುತ್ತದೆ. ಇದು ಸಹ ಐಫೋನ್‌ಗಳು ಹೆಚ್ಚು ಬಿಸಿಯಾಗಲು ಕಾರಣವಾಗುತ್ತಿದೆ ಎಂದು ತಿಳಿದುಬಂದಿದೆ.

814

ಅಲ್ಲದೆ, Instagram, Uber ಮತ್ತು Asphalt 9 ನಂತಹ ಥರ್ಡ್- ಪಾರ್ಟಿ ಅಪ್ಲಿಕೇಶನ್‌ಗಳಿಂದಲೂ ಹೀಟಿಂಗ್ ಸಮಸ್ಯೆ ಉಂಟಾಗುತ್ತಿದೆ ಮತ್ತು ನವೀಕರಣಗಳನ್ನು ಹೊರತರಲು ಈ ಡೆವಲಪರ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು Apple ಹೇಳುತ್ತದೆ. ಹಾಗೂ, ಅದೇ ಸಮಸ್ಯೆಯನ್ನು ಉಂಟುಮಾಡುವ ಇತರ ಅಪ್ಲಿಕೇಶನ್‌ಗಳ ಬಗ್ಗೆಯೂ ತನಿಖೆ ಮಾಡುತ್ತಿದೆ.

914

ನಿಮ್ಮ ಐಫೋನ್ ಅತಿಯಾಗಿ ಬಿಸಿಯಾದರೆ ಏನು ಮಾಡಬೇಕು
ನಿಮ್ಮ ಸಾಧನವನ್ನು ನೀವು ಸೆಟಪ್‌ ಮಾಡಿದಾಗ, ಡೇಟಾವನ್ನು ರೀಸ್ಟೋರ್‌ ಮಾಡಿದಾಗ, ವೈರ್‌ಲೆಸ್‌ ಆಗಿ ಚಾರ್ಜ್ ಮಾಡಿದಾಗ, ಗ್ರಾಫಿಕ್ಸ್/ಪ್ರೊಸೆಸರ್-ಇಂಟೆನ್ಸೀವ್‌ ಅಪ್ಲಿಕೇಶನ್‌ಗಳನ್ನು ಬಳಸುವಾಗ ಅಥವಾ ಉತ್ತಮ ಗುಣಮಟ್ಟದ ವಿಡಿಯೋ ಸ್ಟ್ರೀಮ್ ಮಾಡಿದಾಗ ನಿಮ್ಮ ಸಾಧನವು ಬೆಚ್ಚಗಾಗುವುದು ಸಹಜ. ಪ್ರಕ್ರಿಯೆಯು ಪೂರ್ಣಗೊಂಡ ನಂತರ ನಿಮ್ಮ ಸಾಧನವು ಸಾಮಾನ್ಯ ತಾಪಮಾನಕ್ಕೆ ಹಿಂತಿರುಗುತ್ತದೆ.

1014

iOS ಮತ್ತು iPadOS ಸಾಧನಗಳು ಅಧಿಕ ಬಿಸಿಯಾಗುವುದನ್ನು ತಡೆಯಲು ಬಿಲ್ಟ್‌ ಇನ್‌ ರಕ್ಷಣೆಗಳನ್ನು ಹೊಂದಿವೆ. ತಾಪಮಾನವು ಸಾಮಾನ್ಯ ಕಾರ್ಯಾಚರಣೆಯ ವ್ಯಾಪ್ತಿಯನ್ನು ಮೀರಿದ ಸಂದರ್ಭದಲ್ಲಿ, ನಿಧಾನವಾದ ಚಾರ್ಜಿಂಗ್, ಮಂದ ಅಥವಾ ಕಪ್ಪು ಪರದೆಯಂತಹ ಬದಲಾವಣೆಗಳನ್ನು ನೀವು ಗಮನಿಸಬಹುದು, ದುರ್ಬಲ ಸಿಗ್ನಲ್ ಸಾಮರ್ಥ್ಯ ಅಥವಾ ಗ್ರಾಫಿಕ್ಸ್‌ ಇಂಟೆನ್ಸಿವ್ ಅಪ್ಲಿಕೇಶನ್‌ಗಳೊಂದಿಗೆ ನಿಧಾನವಾದ ಕಾರ್ಯಕ್ಷಮತೆ ಆಗಬಹುದು.
 

1114

ಇನ್ನು, ನ್ಯಾವಿಗೇಷನ್ ಬಳಸುವಾಗ ನಿಮ್ಮ ಸಾಧನವು ಹೆಚ್ಚು ಬಿಸಿಯಾಗಿದ್ದರೆ, "Temperature: iPhone needs to cool down,"  ಎಂಬ ಎಚ್ಚರಿಕೆಯನ್ನು ನೀವು ನೋಡುತ್ತೀರಿ, ಬಳಿಕ ಡಿಸ್ಪ್ಲೇ ಆಫ್ ಆಗಬಹುದು. ಆದರೂ ನೀವು ನಿರ್ದೇಶನಗಳನ್ನು ಕೇಳುತ್ತೀರಿ.

1214

ಐಫೋನ್ ತುಂಬಾ ಬೆಚ್ಚಗಾಗಿದ್ದರೆ, ನಿಮ್ಮ ಸಾಧನವನ್ನು ತೀವ್ರತರವಾದ ತಾಪಮಾನಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ ಅಥವಾ ಕಾರ್ಯಕ್ಷಮತೆಯ ಸಮಸ್ಯೆಗಳನ್ನು ತಪ್ಪಿಸಲು ಬಿಸಿ ಪರಿಸ್ಥಿತಿಗಳಲ್ಲಿ ಅಥವಾ ನೇರ ಸೂರ್ಯನ ಬೆಳಕಿನಲ್ಲಿ ಕೆಲವು ವೈಶಿಷ್ಟ್ಯಗಳನ್ನು ಬಳಸುವುದನ್ನು ತಪ್ಪಿಸಿ.

1314

ಐಫೋನ್ ಅಥವಾ ಇತರ ಯಾವುದೇ ಸಾಧನಗಳ ಅಧಿಕೃತ ಚಾರ್ಜರ್ ಅನ್ನು ಬಳಸಲು ಸಲಹೆ ನೀಡಲಾಗುತ್ತದೆ. ಐಫೋನ್ ತುಂಬಾ ಬೆಚ್ಚಗಾಗಿದ್ದರೆ, ಅದನ್ನು ಶಟ್‌ಡೌನ್‌ ಮಾಡಿ, ರೀಸ್ಟಾರ್ಟ್‌ ಮಾಡಿ. ತೀವ್ರವಾದ ಬ್ಯಾಕ್‌ಗ್ರೌಂಡ್‌ ಚಟುವಟಿಕೆಯೊಂದಿಗೆ ಅಪ್ಲಿಕೇಶನ್‌ಗಳನ್ನು ಪರಿಶೀಲಿಸಿ ಮತ್ತು ನಿಮ್ಮ ಸಾಧನದ ಮೇಲೆ ಪರಿಣಾಮ ಬೀರುವ ಒಂದನ್ನು ಅನ್‌ಇನ್‌ಸ್ಟಾಲ್ ಮಾಡಿ.

1414

ನಿಮ್ಮ ಬ್ಯಾಟರಿಯ ಆರೋಗ್ಯವು 80% ಕ್ಕಿಂತ ಕಡಿಮೆಯಿದ್ದರೆ ಮತ್ತು ಚಾರ್ಜ್ ಮಾಡುವಾಗ ಅಥವಾ ಸಾಮಾನ್ಯ ಬಳಕೆಯಲ್ಲಿ ನಿಮ್ಮ ಐಫೋನ್ ಬಿಸಿಯಾಗುತ್ತಿದ್ದರೆ, ಬ್ಯಾಟರಿಯನ್ನು ಬದಲಾಯಿಸುವುದು ಉತ್ತಮ.

Read more Photos on
click me!

Recommended Stories