40,000 ರೂ. ಗೂ ಕಡಿಮೆ ದರದಲ್ಲಿ ಐಫೋನ್‌ ಖರೀದಿಸ್ಬೇಕಾ? ಹಾಗಾದ್ರೆ ಇಲ್ಲಿದೆ ಸೂಪರ್ ಆಫರ್‌!

First Published | Oct 1, 2023, 5:08 PM IST

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 ನಲ್ಲಿ ಐಫೋನ್‌ 13 ಅನ್ನು 40,000 ರೂ. ಗೂ ಕಡಿಮೆ ದರದಲ್ಲಿ ಖರೀದಿಸಬಹುದು. ಈ ಬಗ್ಗೆ ಇಲ್ಲಿದೆ ಮಾಹಿತಿ..

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 ಅಕ್ಟೋಬರ್ 8 ರಂದು ಪ್ರಾರಂಭವಾಗಲಿದೆ. ಮತ್ತು, ಈ ಸೇಲ್‌ಗೆ ಮುಂಚಿತವಾಗಿ, ಅಮೆಜಾನ್ ಗ್ರಾಹಕರಿಗೆ ಕೆಲವು ಉತ್ತಮ ಡೀಲ್‌ಗಳ ಬಗ್ಗೆ ಮಾಹಿತಿ ನೀಡುತ್ತಿದೆ. ಈ ಪೈಕಿ ಇತ್ತೀಚೆಗೆ iPhone 13 ಕೊಡುಗೆ ಬಗ್ಗೆಯೂ ಮಾಹಿತಿ ನೀಡಲಾಗಿದೆ. 40,000 ಗೂ. ಕಡಿಮೆ ದರದಲ್ಲಿ ಐಫೋನ್‌ 13 ಲಭ್ಯವಾಗುತ್ತಿದೆ. ಈ ಬಗ್ಗೆ ಇಲ್ಲಿದೆ ವಿವರ..

ನೀವು ಸಹ 40,000 ರೂ. ಗೂ ಕಡಿಮೆ ದರದಲ್ಲಿ ಐಫೋನ್‌ 13 ಕೊಳ್ಳಬೇಕು ಅಂತ ಯೋಚಿಸ್ತಿದ್ರೆ ನಿಮಗಿಲ್ಲಿದೆ ಸುವರ್ಣಾವಕಾಶ. ಆದರೆ, ನೀವು ಇದಕ್ಕಗಿ ನಿಮ್ಮ ಹಳೆಯ ಫೋನ್‌ ಅನ್ನು ಎಕ್ಸ್‌ಚೇಂಜ್‌ ಮಾಡಿಕೊಳ್ಳಬೇಕು. ನೀವು ಎಕ್ಸ್‌ಚೇಂಜ್‌ ಮಾಡಲು ಇಚ್ಚಿಸದಿದ್ದರೆ ಸ್ವಲ್ಪ ಹೆಚ್ಚಿನ ಬೆಲೆಗೆ iPhone 13 ಸಿಗುತ್ತದೆ. 

Tap to resize

2021 ರಲ್ಲಿ ಬಿಡುಗಡೆಯಾದ iPhone 13 ಪ್ರಸ್ತುತ 128GB ಸ್ಟೋರೇಜ್ ಮಾಡೆಲ್‌ಗೆ 59,900 ರೂ. , 256GB ಮಾಡೆಲ್‌ಗೆ 69,900 ರೂ. ಮತ್ತು 512GB ಮಾಡೆಲ್‌ಗೆ 89,900 ರೂ. ಇದೆ. ಇದರರ್ಥ ಮುಂಬರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಈ ದರಕ್ಕಿಂತ 20,000 ರೂ. ಕ್ಕೂ ಹೆಚ್ಚು ರಿಯಾಯಿತಿಯನ್ನು ನೀಡುತ್ತದೆ. 

iPhone 13 40,000 ರೂ. ಡೀಲ್ ಬ್ರೇಕ್‌ಡೌನ್ ಇಲ್ಲಿದೆ
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 ರ ಸಮಯದಲ್ಲಿ, ಆಸಕ್ತ ಗ್ರಾಹಕರು ಐಫೋನ್ 13 ಅನ್ನು ಅತಿ ಕಡಿಮೆ ಬೆಲೆಗೆ ಪಡೆಯಬಹುದು. ಅದು ಹೇಗೆ ಅಂತೀರಾ?  ಅಮೆಜಾನ್ ನೀಡುವ ಡೀಲ್ ಕಡಿಮೆ ಬೆಲೆಗೆ ಫೋನ್‌ ನೀಡುವ ಭರವಸೆ ನೀಡುತ್ತದೆ, ಇದು 59,900 ರೂ. ಗಿಂತ ಕಡಿಮೆ ಬೆಲೆ ಇರುವ ಸಾಧ್ಯತೆ ಇದೆ. ಇದಲ್ಲದೆ, ಗ್ರಾಹಕರು ಎಸ್‌ಬಿಐ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿದರೆ ಹೆಚ್ಚುವರಿ 1,500 ರೂ. ಗರಿಷ್ಠ ರಿಯಾಯಿತಿ ನೀಡಲಾಗುವುದು.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಸಮಯದಲ್ಲಿ, ಎಸ್‌ಬಿಐ ಬ್ಯಾಂಕ್ ಗ್ರಾಹಕರು ಮೊಬೈಲ್‌ಗಳ ಮೇಲಿನ ಖರೀದಿಗಳ ಮೇಲೆ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಅದಕ್ಕೆ ಗರಿಷ್ಠ ಮಿತಿ 1,500 ರೂ. ಹಾಗೂ ಇತರ ವರ್ಗಗಳಿಗೆ ಗರಿಷ್ಠ ಮಿತಿ 1,750 ರೂ.

ಐಫೋನ್‌ 13 ಕೊಳ್ಳಲು ನಿಮ್ಮ ಹಳೆಯ ಫೋನ್‌ ಎಕ್ಸ್‌ಚೇಂಜ್‌ ಮಾಡಿಕೊಳ್ಳುವುದಿದ್ದರೆ (ವರ್ಕಿಂಗ್ ಸ್ಮಾರ್ಟ್‌ಫೋನ್) ಗ್ರಾಹಕರು ಅಮೆಜಾನ್‌ನಿಂದ ಹೆಚ್ಚುವರಿ ರಿಯಾಯಿತಿಯನ್ನು ಪಡೆಯುತ್ತಾರೆ. ಇದು ಫೋನ್‌ನ ವಿನಿಮಯದ ಮೌಲ್ಯಕ್ಕಿಂತ ಹೆಚ್ಚಾಗಿರುತ್ತದೆ. ಆದರೂ ಪ್ರತಿಯೊಬ್ಬರೂ ಎಕ್ಸ್‌ಚೇಂಜ್‌ ಮಾಡಿಕೊಳ್ಳಲು ಫೋನ್ ಹೊಂದಿರುವುದಿಲ್ಲ. ಆದ್ದರಿಂದ ಬ್ಯಾಂಕ್ ಕೊಡುಗೆಯನ್ನು ಬಹಳಷ್ಟು ಜನರು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ನಾವು ಊಹಿಸಬಹುದು.

ಅದೇನೇ ಇದ್ದರೂ, ಡೀಲ್ ಬೆಲೆ, ಬ್ಯಾಂಕ್ ರಿಯಾಯಿತಿ ಮತ್ತು ಎಕ್ಸ್‌ಚೇಂಜ್‌ನಲ್ಲಿ ಹೆಚ್ಚುವರಿ ಆಫರ್‌ ಅನ್ನು ಒಟ್ಟುಗೂಡಿಸಿದರೆ iPhone 13 ಗೆ 40,000 ರೂ. ಗೂ ಕಡಿಮೆ ಬೆಲೆಗೆ ಖರೀದಿ ಮಾಡಬಹುದು. 

ಒಪ್ಪಂದವು ಸೀಮಿತ ಅವಧಿಗೆ ಮಾತ್ರ ಇರುತ್ತದೆ. ಬೇಡಿಕೆ ಹೆಚ್ಚಾದಂತೆ ಮತ್ತು ಲಭ್ಯವಿರುವ ಸ್ಟಾಕ್‌ಗಳನ್ನು ಅವಲಂಬಿಸಿ ಅಮೆಜಾನ್ ಐಫೋನ್ 13 ನ ಡೀಲ್ ಬೆಲೆಯನ್ನು ಹೆಚ್ಚಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

ಐಫೋನ್ 13 ಹೊರತಾಗಿ, ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 ರ ಸಮಯದಲ್ಲಿ ಅಮೆಜಾನ್‌ ಇತರ ಐಫೋನ್ ಮಾಡೆಲ್‌ಗಳಾದ iPhone 14, iPhone 14 Plus ಮತ್ತು iPhone 14 Pro ಮೇಲೆ ರಿಯಾಯಿತಿಗಳನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸಬಹುದು.
 

Latest Videos

click me!