ಮೊಬೈಲ್ ವಿಚಿತ್ರವಾಗಿ ಅಡುತ್ತಿದೆ ಅಂದರೆ ಹ್ಯಾಕ್ ಆಗಿರಬಹುದು ಎಂದರ್ಥ. ವಿಪರ್ಯಾಸವೆಂದರೆ ಹೀಗೆ ಹ್ಯಾಕ್ ಆಗಿರುವುದೂ ನಮಗೇ ಗೊತ್ತಾಗೋಲ್ಲ. ಅಷ್ಟರಮಟ್ಟಿಗೆ ಹ್ಯಾಕರ್ಸ್ ತಮ್ಮ ಕೈ ಚಳಕ ತೋರಿರುತ್ತಾರೆ. ನನ್ನ ಮೊಬೈಲ್‌ನಲ್ಲಿ ಅಂಥದ್ದೇನಿದೆ? ಅದನ್ನು ಹ್ಯಾಕ್ ಮಾಡಿ ಹ್ಯಾಕರ್ಸ್ ಏನು ಮಾಡುತ್ತಾರೆಂದು ಕೊಳ್ಳಬಹುದು. ಆದರೆ, ನಮ್ಮ ಬ್ಯಾಂಕಿಂಗ್ ಆ್ಯಪ್ಸ್ ಇರಬಹುದು, ಇಲ್ಲವೇ ನೀವು ಕೆಲವು ಮಹತ್ವದ ಮಾಹಿತಿಗಳನ್ನು ಇ-ಮೇಲಲ್ಲೋ, ಯಾವುದೋ ಫೋಲ್ಡರ್‌ನಲ್ಲಿಯೋ ಇಟ್ಟಿರಬಹುದು. ಅದು ಹ್ಯಾಕರ್ಸ್ ಕೈ ಸೇರಿದರೆ?
ಅಲ್ಲಗಳೆಯುವಂತಿಲ್ಲ. ಹೆಚ್ಚಾಗಿ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ಸ್ ಹ್ಯಾಕ್ ಆಗುತ್ತಿವೆ. ಇವೇ ಹ್ಯಾಕರ್ಸ್ ಅಥವಾ ಸೈಬರ್ ಅಪರಾಧಿಗಳ ಟಾರ್ಗೆಟ್. ಇಲ್ಲಿ ಹ್ಯಾಕ್ ಮಾಡಲೆಂದೇ ಕೆಲವು ದೋಷಪೂರಿತ ಆ್ಯಪ್‌ಗಳನ್ನೂ ಸೃಷ್ಟಿಸಲಾಗುತ್ತದೆ. ಇಂಥ ದೋಷಪೂರಿತ URLಗಳೂ ಇದ್ದು, ಇವುಗಳ ಮೇಲೆ ಅಪ್ಪಿತಪ್ಪಿಯೂ ಒಂದು ಕ್ಲಿಕ್ಕಿಸಿದರೆ ಸಾಕು, ಮೊಬೈಲ್‌ನ ಸಂಪೂರ್ಣ ಮಾಹಿತಿ ಹ್ಯಾಕರ್‌ಗಳ ಕಂಪ್ಯೂಟರ್ ಅನ್ನು ಸೇರಿರುತ್ತದೆ ಎಂದೇ ಅರ್ಥ.