ಕೇವಲ 18,750 ರೂಪಾಯಿಗೆ ಐಫೋನ್ 15 ಪ್ಲಸ್, ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಆಫರ್ ಡೀಲ್

Published : May 17, 2025, 04:50 PM IST

ಡೋನಾಲ್ಡ್ ಟ್ರಂಪ್ ಖುದ್ದು ಟಿಮ್ ಕುಕ್ ಬಳಿ ಭಾರತದಲ್ಲಿ ಆ್ಯಪಲ್ ಹೂಡಿಕೆ ಮಾಡಬೇಡಿ ಎಂದ ಬೆನ್ನಲ್ಲೇ ಇದೀಗ ಬಿಗ್ ಆಫರ್ ಮೂಲಕ ಐಫೋನ್ ಖರೀದಿಸುವ ಅವಕಾಶವೊಂದು ಲಭ್ಯವಿದೆ. ಪ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 15 ಪ್ಲಸ್ ಇದೀಗ ಕೇವಲ 18,750 ರೂಪಾಯಿಗೆ ಲಭ್ಯವಿದೆ.

PREV
15
ಕೇವಲ 18,750 ರೂಪಾಯಿಗೆ ಐಫೋನ್ 15 ಪ್ಲಸ್, ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಆಫರ್ ಡೀಲ್

ಆ್ಯಪಲ್ ಭಾರತದಲ್ಲಿನ ಹೂಡಿಕೆಗೆ ಡೋನಾಲ್ಡ್ ಟ್ರಂಪ್ ಅಸಮಾಧಾನಗೊಂಡಿದ್ದರು. ನೇರವಾಗಿ ಟಿಮ್ ಕುಕ್ ಬಳಿ ಹೂಡಿಕೆ ಮಾಡದಂತೆ ಸೂಚಿಸಿದ್ದರು. ಆದರೆ ಟಿಮ್ ಕುಕ್ ಭಾರತದಲ್ಲಿ ಆ್ಯಪಲ್ ಹೂಡಿಕೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಬೆಳವಣಿಗೆ ನಡುವೆ ಇದೀಗ ಆ್ಯಪಲ್ ಐಫೋನ್ 15 ಅತೀ ಕಡಿಮೆ ಬೆಲೆಗೆ ಭಾರತದಲ್ಲಿ ಲಭ್ಯವಿದೆ. ಇದು ಫ್ಲಿಪ್‌ಕಾರ್ಟ್ ಆಫರ್. ಫ್ಲಿಪ್‌ಕಾರ್ಟ್ ಮೂಲಕ ಐಫೋನ್ 15 ಪ್ಲಸ್ ಖರೀದಿಸಿದರೆ ನಿಮಗೆ ಸದ್ಯ 18,750 ರೂಪಾಯಿಗೆ ಐಫೋನ್ 15 ಪ್ಲಸ್ ಕೈಸೇರಲಿದೆ. ಇತರ ಆ್ಯಂಡ್ರಾಯ್ಡ್ ಹಾಗೂ ಕೈಗೆಟುಕುವ ದರದಲಲ್ಲೇ ಇದೀಗ ಐಫೋನ್ 15 ಪ್ಲಸ್ ಲಭ್ಯವಾಗುತ್ತಿದೆ.

25

ಸದ್ಯ ಐಫೋನ್ 15 ಪ್ಲಸ್ ಬೆಲೆ  79,900 ರೂಪಾಯಿ. ಆದರೆ ನೀವು ಫ್ಲಿಪ್‌ಕಾರ್ಟ್ ಡೀಲ್ ಮೂಲಕ ಖರೀದಿಸಿದರೆ ಇದರ ಬೆಲೆ ಕನಿಷ್ಠ 18,750 ರೂಪಾಯಿಗೆ ಇಳಿಕೆಯಾಗಲಿದೆ. ಇದೀಗ ನಿಮಗೆ ನಿಮ್ಮ ಫೋನ್ ಅಪ್‌ಗ್ರೇಡ್ ಮಾಡಲು ಸುವರ್ಣ ಅವಕಾಶವೊಂದು ಒದಗಿ ಬಂದಿದೆ. ಕಡಿಮೆ ಬೆಲೆಯಲ್ಲಿ ವಿಶ್ವದಲ್ಲೇ ಲಭ್ಯವಿರುವ ಅತ್ಯುತ್ತಮ ಗುಣಮಟ್ಟದ ಫೋನ್ ಖರೀದಿಸಲು ಸಾಧ್ಯವಿದೆ. 

35

ಬ್ಯಾಂಕ್ ಆಫರ್‌ನಿಂದ ಐಫೋನ್ 15 ಪ್ಲಸ್ ಬೆಲೆ ಅತೀ ಕಡಿಮೆ
ಫ್ಲಿಪ್‌ಕಾರ್ಟ್ ಇದೀಗ ಗ್ರಾಹಕರ ಖರೀದಿಗೆ ಅನುಕೂಲವಾಗುವಂತೆ ಹಲವು ಬ್ಯಾಂಕ್ ಹಾಗೂ ಫಿನಾನ್ಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರ ಜೊತೆಗೆ ಫ್ಲಿಪ್‌ಕಾರ್ಟ್ ಕೂಡ ಕೆಲ ಆಫರ್ ನೀಡುತ್ತಿದೆ. 

1) ಫ್ಲಿಪ್‌ಕಾರ್ಟ್ ಮೂಲಕ ಐಫೋನ್ 15 ಪ್ಲಸ್ ಖರೀದಿಸುವಾಗ ಆಯ್ದ ಬ್ಯಾಂಕ್ ಕಾರ್ಡ್‌ಗಳಿಗೆ ಇನ್‌ಸ್ಟಾಂಟ್ 3000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.

2) ಆ್ಯಕ್ಸಿಸ್ ಬ್ಯಾಂಕ್ ಕ್ರಿಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಶೇಕಡಾ 5 ರಷ್ಟು ಕ್ಯಾಶ್‌ಬ್ಯಾಕ್ ಆಫರ್ ನೀಡಲಾಗಿದೆ.

3) ನಿಮ್ಮ ಹಳೇ ಫೋನ್ ಎಕ್ಸ್‌ಜೇಂಜ್ ಮಾಡಿದರೆ ಗರಿಷ್ಠ 61,150 ರೂಪಾಯಿ ಬೋನಸ್ ನೀಡಲಾಗುತ್ತದೆ

45

ಬ್ಯಾಂಕ್ ಆಫರ್ ಹಾಗೂ ಹಳೆ ಫೋನ್ ಎಕ್ಸ್‌ಚೇಂಜ್ ಗರಿಷ್ಠ ಬೋನಸ್ ಆಫರ್ ಮೂಲಕ ಐಫೋನ್ 15 ಪ್ಲಸ್ ಖರೀದಿಸಿದರೆ 79,900 ರೂಪಾಯಿ ಸ್ಮಾರ್ಟ್‌ಫೋನ್ 18,750 ರೂಪಾಯಿಗೆ ಲಭ್ಯವಾಗಲಿದೆ. ಈ ಬೆಲೆಗೆ ಐಫೋನ್ 15 ಪ್ಲಸ್ ಕೈಸೇರಲು ನಿಮ್ಮ ಹಳೇ ಫೋನ್ ಮೇಲೆ ಸಿಗುವ ಬೋನಸ್ ಮೊತ್ತ ಪರಿಣಗಣೆಯಾಗುತ್ತದೆ. ಫೋನ್ ಬ್ರ್ಯಾಂಡ್ ಹಾಗೂ ಅದರ ಗುಣಮಟ್ಟದ ಆಧಾರದಲ್ಲಿ ಎಕ್ಸ್‌ಚೇಂಜ್ ಬೋನಸ್ ಮೊತ್ತ ನಿರ್ಧಾರವಾಗುತ್ತದೆ. ಹೀಗಾಗಿ ಕೆಲವರಿಗೆ ಎಕ್ಸ್‌ಚೇಂಜ್ ಬೋನಸ್ ಕಡಿಮೆ ಸಿಕ್ಕಿದರೆ ಐಫೋನ್ 15 ಪ್ಲಸ್ ಮೊತ್ತದಲ್ಲಿ ವ್ಯತ್ಯಾಸವಾಗಲಿದೆ.

55

6.7 ಡಿಸ್‌ಪ್ಲೇ, ಆಲ್ಯುಮಿನಿಯಂ ಫ್ರೇಮ್,  IP68 ವಾಟರ್ ರೆಸಿಸ್ಟೆನ್ಸ್, ಆ್ಯಪಲ್  A16 ಬಯೋನಿಕ್ ಚಿಪ್ ಪ್ರೊಸೆಸರ್,  iOS 17 ಆಪರೇಟಿಂಗ್ ಸಿಸ್ಟಮ್, 48MP + 12MP ಕ್ಯಾಮೆರಾ ಹಾಗೂ 12MP ಫ್ರಂಟ್ ಕ್ಯಾಮೆರಾ, 512GB ಸ್ಟೋರೇಜ್ ಹಾಗೂ 8GB RAM ಸಾಮರ್ಥ್ಯ ಸೇರಿದಂತೆ ಹಲವು ವಿಶೇಷತೆಗಳು, ಫೀಚರ್ಸ್ ಈ ಐಫೋನ್ 15 ಪ್ಲಸ್ ಫೋನ್‌ನಲ್ಲಿದೆ.

Read more Photos on
click me!

Recommended Stories