ಮೋಟೊ G5G ಸ್ಮಾರ್ಟ್‌ಫೋನ್ ಕಡಿಮೆ ಬೆಲೆಯ 5ಜಿ ಕೆನೆಕ್ಟಿವಿಟಿ ಫೋನ್ ಎಂದು ಮೊಟೊರೋಲಾ ಇಂಡಿಯಾ ಹೇಳಿದೆ. ಜೊತೆಗೆ ಹತ್ತು ಹಲವು ಫೀಚರ್ಸ್ ಹೊಂದಿದೆ.
ಮೊಟೊ G 5G ಸ್ಮಾರ್ಟ್‌ಫೋನ್ ಬೆಲೆ(6GB RAM + 128GB) 20,999 ರೂಪಾಯಿ. ಆನ್‌ಲೈನ್ ಖರೀದಿಯಲ್ಲಿ ಹಲವು ಆಫರ್‌ಗಳು ಲಭ್ಯವಿದ್ದು ಗರಿಷ್ಠ 1,000 ರೂಪಾಯಿ ಡಿಸ್ಕೌಂಟ್ ಆಫರ್ ಕೂಡ ಸಿಗಲಿದೆ.
Moto G 5G ಸ್ಮಾರ್ಟ್‌ಫೋನ್ ಆ್ಯಂಡ್ರಾಯ್ಡ್ 10 ಹಾಗೂ 6.7 ಫುಲ್ HD+ (1,080x2,400 pixels) LTPS ಡಿಸ್‍ಪ್ಲೇ ಹೊಂದಿದೆ. ಇನ್ನು ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 750G SoC ಪ್ರೊಸೆಸರ್ ಹೊಂದಿದೆ.
Moto G 5G ಟ್ರಿಪಲ್ ಕ್ಯಾಮರ ಹೊಂದಿದೆ. 48 ಮೆಗಾಪಿಕ್ಸಲ್ ಪ್ರೈಮರಿ ಕ್ಯಾಮರ, 8 ಮೆಗಾಪಿಕ್ಸಲ್ ಸೆಕೆಂಡರಿ ಕ್ಯಾಮರಾ(ವೈಡ್ ಆ್ಯಂಗಲ್ ಸೆನ್ಸಾರ್ ಹಾಗೂ 2 ಮೆಗಾಪಿಕ್ಸಲ್ ಮ್ಯಾಕ್ರೋ ಸೆನ್ಸಾರ್ ಕ್ಯಾಮರ ಹೊಂದಿದೆ. ಸೆಲ್ಫಿಗಾಗಿ 16 ಮೆಗಾಪಿಕ್ಸಲ್ ಕ್ಯಾಮಾರ ಹೊಂದಿದೆ.
ಡಸ್ಟ್ ಪ್ರೊಟೆಕ್ಷನ್ ಫೀಚರ್ಸ್ ಕೂಡ ಇದರಲ್ಲಿದೆ. ಇನ್ನು 128GB ಸ್ಟ್ರೋರೇಜ್ ಹೊಂದಿದ್ದು, ಗರಿಷ್ಠ 1TBವರೆಗೆ ವಿಸ್ತರಿಸುವ ಅವಕಾಶವಿದೆ.
ಫಿಂಗರ್‌ಫ್ರಿಂಟ್ ಸೆನ್ಸಾರ್, 5,000mAh ಬ್ಯಾಟರಿ ಹೊಂದಿದೆ. ಹೀಗಾಗಿ ಎರಡು ದಿನ ಯಾವುದೇ ಸಮಸ್ಯೆ ಇಲ್ಲದೆ ಫೋನ್ ಬಳಕೆ ಮಾಡಬಹುದು. ಹಾಗೂ 20W ಫಾಸ್ಟ್ ಚಾರ್ಚಿಂಗ್ ಸೌಲಭ್ಯವೂ ಇದೆ.
5G, NFC, ಬ್ಲೂಟೂಥ್ 5.1,Wi-Fi 802.11ac, USB ಟೈಪ್ ಸಿ ಪೋರ್ಟ್, GPS ಸೇರಿದಂತೆ ಹತ್ತು ಹಲವು ಕೆನೆಕ್ಟಿವಿಟಿ ಫೀಟರ್ಸ್ ಒಳಗೊಂಡಿದೆ.