ಕೇವಲ 20 ಸಾವಿರ ರೂ ಒಳಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಬಜೆಟ್ ಸ್ಮಾರ್ಟ್‌ಫೋನ್

Published : Feb 06, 2026, 03:07 PM IST

ಕೇವಲ 20 ಸಾವಿರ ರೂ ಒಳಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಬಜೆಟ್ ಸ್ಮಾರ್ಟ್‌ಫೋನ್, ಅತೀ ಕಡಿಮೆ ಬೆಲೆಯಿಂದ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್ ಭಾರತದಲ್ಲಿ ಲಭ್ಯವಿದೆ. ಈ ಪೈಕಿ ಬಜೆಟ್ ಸ್ಮಾರ್ಟ್‌ಫೋನ್ ಬಹುತೇಕರ ಮೊದಲ ಆಯ್ಕೆಯಾಗಿದೆ. 

PREV
15
1. ವಿವೋ T4 (Vivo T4)
ಏಪ್ರಿಲ್ 2025 ರಲ್ಲಿ ಬಿಡುಗಡೆಯಾದ ವಿವೋ T4, 20,000 ರೂ. ಒಳಗಿನ ಅತ್ಯುತ್ತಮ ಫೋನ್‌ಗಳಲ್ಲಿ ಒಂದಾಗಿದೆ. ಇದು ಸ್ನಾಪ್‌ಡ್ರಾಗನ್ 7s ಜೆನ್ 3 ಚಿಪ್‌ಸೆಟ್, 8 GB RAM, 50+2 MP ಬ್ಯಾಕ್ ಕ್ಯಾಮೆರಾ, 32 MP ಫ್ರಂಟ್ ಕ್ಯಾಮೆರಾ, 90W ಫ್ಲ್ಯಾಶ್ ಚಾರ್ಜಿಂಗ್‌ ಜೊತೆಗೆ 7300 mAh ಬ್ಯಾಟರಿ ಮತ್ತು 6.77-ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ.
25
2. ಐಕ್ಯೂ Z10 (iQOO Z10)
ಐಕ್ಯೂ Z10 ಫೋನ್ ಸ್ನಾಪ್‌ಡ್ರಾಗನ್ 7s ಜೆನ್ 3 ಚಿಪ್‌ಸೆಟ್‌ನೊಂದಿಗೆ ಬರುತ್ತದೆ. ಇದರಲ್ಲಿ 50 MP + 2 MP ಬ್ಯಾಕ್ ಕ್ಯಾಮೆರಾ ಮತ್ತು 32 MP ಫ್ರಂಟ್ ಕ್ಯಾಮೆರಾ ಇರಲಿದೆ. 90 ವ್ಯಾಟ್ಸ್ ಫ್ಲ್ಯಾಶ್ ಚಾರ್ಜಿಂಗ್ ಬೆಂಬಲಿಸುವ 7300 mAh ಬ್ಯಾಟರಿಯನ್ನು ಈ ಫೋನ್‌ನಲ್ಲಿ ನೀಡಲಾಗಿದೆ.
35
3. ಮೋಟೋ G67 ಪವರ್ (Moto G67 Power)
ಮೋಟೋರೋಲಾ ಅಭಿಮಾನಿಗಳಿಗಾಗಿ ಮೋಟೋ G67 ಪವರ್ ಫೋನ್ ಸ್ನಾಪ್‌ಡ್ರಾಗನ್ 7s ಜೆನ್ 2 ಚಿಪ್‌ಸೆಟ್‌ನೊಂದಿಗೆ ಬಂದಿದೆ. ಇದರಲ್ಲಿ 8 GB RAM, 50+8 MP ಬ್ಯಾಕ್ ಕ್ಯಾಮೆರಾ, 32 MP ಫ್ರಂಟ್ ಕ್ಯಾಮೆರಾ, 30W ಟರ್ಬೋ ಚಾರ್ಜಿಂಗ್‌ ಜೊತೆಗೆ 7000 mAh ಬ್ಯಾಟರಿ ಮತ್ತು 6.7-ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ.
45
4. ರಿಯಲ್‌ಮೀ P4 (Realme P4)
ರಿಯಲ್‌ಮೀ P4 ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7400 ಅಲ್ಟ್ರಾ ಚಿಪ್‌ಸೆಟ್‌ನೊಂದಿಗೆ ಮಾರುಕಟ್ಟೆಗೆ ಬರಲಿದೆ. ಇದರಲ್ಲಿ 6 GB RAM, 50+8 MP ಬ್ಯಾಕ್ ಕ್ಯಾಮೆರಾ, 16 MP ಫ್ರಂಟ್ ಕ್ಯಾಮೆರಾ, 80W ಅಲ್ಟ್ರಾ ಚಾರ್ಜಿಂಗ್‌ ಜೊತೆಗೆ 7000 mAh ಬ್ಯಾಟರಿ ಮತ್ತು 6.77-ಇಂಚಿನ ಹೈಪರ್ ಗ್ಲೋ ಅಮೋಲೆಡ್ ಡಿಸ್‌ಪ್ಲೇ ಇದೆ.
55
5. ರೆಡ್‌ಮಿ ನೋಟ್ 15 (Xiaomi Redmi Note 15)
ಶಿಯೋಮಿ ರೆಡ್‌ಮಿ ನೋಟ್ 15 ಫೋನ್ ಸ್ನಾಪ್‌ಡ್ರಾಗನ್ 6 ಜೆನ್ 3 ಚಿಪ್‌ಸೆಟ್ ಮತ್ತು 8 GB RAM ನೊಂದಿಗೆ ಬರುತ್ತದೆ. ಇದರಲ್ಲಿ 108+8 MP ಬ್ಯಾಕ್ ಕ್ಯಾಮೆರಾ, 20 MP ಫ್ರಂಟ್ ಕ್ಯಾಮೆರಾ, 45W ಟರ್ಬೋ ಚಾರ್ಜಿಂಗ್‌ ಬೆಂಬಲಿಸುವ 5520 mAh ಬ್ಯಾಟರಿ ಮತ್ತು 6.77-ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ನೀಡಲಾಗಿದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories