20 ಸಾವಿರ ರೂಗೆ ಲಭ್ಯವಿರುವ ವೇಗದ ಚಾರ್ಜಿಂಗ್ ಸ್ಮಾರ್ಟ್‌ಫೋನ್, ಇಲ್ಲಿದೆ ಬೆಸ್ಟ್ 5

Published : Jan 28, 2025, 12:39 PM IST

20,000 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ವೇಗದ ಚಾರ್ಜಿಂಗ್ ಸ್ಮಾರ್ಟ್‌ಫೋನ್ ಹುಡುಕುತ್ತಿದ್ದೀರಾ? ಉತ್ತಮ ಬ್ಯಾಟರಿ ಬಾಳಿಕೆ ಮತ್ತು ವೇಗದ ಚಾರ್ಜಿಂಗ್ ವೇಗವನ್ನು ಹೊಂದಿರುವ ಟಾಪ್ 5 ಮೊಬೈಲ್‌ ಯಾವುದು?

PREV
16
20 ಸಾವಿರ ರೂಗೆ ಲಭ್ಯವಿರುವ ವೇಗದ ಚಾರ್ಜಿಂಗ್ ಸ್ಮಾರ್ಟ್‌ಫೋನ್, ಇಲ್ಲಿದೆ ಬೆಸ್ಟ್ 5
₹20,000 ಒಳಗಿನ ವೇಗದ ಚಾರ್ಜಿಂಗ್ ಮೊಬೈಲ್‌ಗಳು

ಸ್ಮಾರ್ಟ್‌ಫೋನ್ ಅತ್ಯವಶ್ಯಕ, ಇದರ ಜೊತೆಗೆ ಉತ್ತಮ ಬ್ಯಾಟರಿ ಬ್ಯಾಕ್ಅಪ್ ಕೂಡ ಇರಬೇಕು. ಪವರ್ ಬ್ಯಾಂಕ್ ಹೊತ್ತುಕೊಂಡು ನಡೆಯುವ ಬದಲು ವೇಗವಾಗಿ ಚಾರ್ಜಿಂಗ್ ಸಾಮರ್ಥ್ಯ, ಉತ್ತಮ ಬ್ಯಾಟರಿ ಬ್ಯಾಕಪ್ ಮೊಬೈಲ್‌ಗಳು ಲಭ್ಯವಿದೆ.  ಭಾರತದಲ್ಲಿ 20,000 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ, ವೇಗವಾಗಿ ಚಾರ್ಜಿಂಗ್ ಸಾಮರ್ಥ್ಯದ ಟಾಪ್ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ನೋಡೋಣ.

26
ರಿಯಲ್‌ಮಿ ನಾರ್ಜೊ 70 ಪ್ರೊ

ರಿಯಲ್‌ಮಿ ನಾರ್ಜೊ 70 ಪ್ರೊ 67W ಪವರ್ ಅಡಾಪ್ಟರ್‌ನೊಂದಿಗೆ ವೇಗವಾಗಿ ಚಾರ್ಜ್ ಆಗುತ್ತದೆ. ಇದು 20% ರಿಂದ 100% ವರೆಗೆ ಕೇವಲ 42 ನಿಮಿಷಗಳಲ್ಲಿ ಚಾರ್ಜ್ ಆಗುತ್ತದೆ. PC ಮಾರ್ಕ್ ಬ್ಯಾಟರಿ ಪರೀಕ್ಷೆಯಲ್ಲಿ, 5,000mAh ಬ್ಯಾಟರಿ 16 ಗಂಟೆ 24 ನಿಮಿಷಗಳ ಬಾಳಿಕೆ ನೀಡಿದೆ.

36
ಒನ್‌ಪ್ಲಸ್ ನಾರ್ಡ್ CE 4 ಲೈಟ್

ಒನ್‌ಪ್ಲಸ್ ನಾರ್ಡ್ CE 4 ಲೈಟ್ 80W ವೇಗದ ಚಾರ್ಜಿಂಗ್‌ನೊಂದಿಗೆ20% ರಿಂದ 100% ವರೆಗೆ ಕೇವಲ 50 ನಿಮಿಷಗಳಲ್ಲಿ ಚಾರ್ಜ್ ಆಗುತ್ತದೆ. 5,500mAh ಬ್ಯಾಟರಿ 11 ಗಂಟೆ 30 ನಿಮಿಷಗಳ ಬಾಳಿಕೆ ನೀಡಲಿದೆ. ಇದರಿಂದ ದಿನವಿಡಿ ಬಳಕೆ ಮಾಡಿದರೂ ನಡುವೆ ಚಾರ್ಜ್ ಹಾಕಬೇಕಾದ ಪರಿಸ್ಥಿತಿ ಎದುರಾಗುವುದಿಲ್ಲ. 

46
ರೆಡ್‌ಮಿ ನೋಟ್ 14

ರೆಡ್‌ಮಿ ನೋಟ್ 14, 45W ಚಾರ್ಜಿಂಗ್‌ನೊಂದಿಗೆ, ಕೇವಲ 32 ನಿಮಿಷಗಳಲ್ಲಿ 20% ರಿಂದ 100% ವರೆಗೆ ಚಾರ್ಜ್ ಆಗುತ್ತದೆ. ಇದರ 5,110mAh ಬ್ಯಾಟರಿ 19 ಗಂಟೆ 21 ನಿಮಿಷಗಳ ಬಾಳಿಕೆ ನೀಡುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸರಿಸುಮಾರು 2 ದಿನ ಚಾರ್ಜ್ ಮಾಡದಿದ್ದರೂ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

56
ಟೆಕ್ನೊ ಪೋವಾ 6 ಪ್ರೊ

ಟೆಕ್ನೊ ಪೋವಾ 6 ಪ್ರೊ 70W ವೇಗದ ಚಾರ್ಜಿಂಗ್‌ನೊಂದಿಗೆ 20% ರಿಂದ 100% ವರೆಗೆ ಕೇವಲ 51 ನಿಮಿಷಗಳಲ್ಲಿ ಚಾರ್ಜ್ ಆಗುತ್ತದೆ. 6,00mAh ಬ್ಯಾಟರಿ 15 ಗಂಟೆ 56 ನಿಮಿಷಗಳ ಬಾಳಿಕೆ ನೀಡಿದೆ.

66
ರಿಯಲ್‌ಮಿ P1

ರಿಯಲ್‌ಮಿ P1 45W ಚಾರ್ಜರ್‌ನೊಂದಿಗೆ ಸುಮಾರು 48ನಿಮಿಷಗಳಲ್ಲಿ 20% ರಿಂದ ಶೇರಡಾ100ರಷ್ಟು  ಚಾರ್ಜ್ ಆಗುತ್ತದೆ. 5,000 mAh ಬ್ಯಾಟರಿ 16 ಗಂಟೆ 20 ನಿಮಿಷಗಳ ಬಾಳಿಕೆ ನೀಡಲಿದೆ. . 

Read more Photos on
click me!

Recommended Stories