ಐಫೋನ್ 16 ಪ್ರೋ ಮ್ಯಾಕ್ಸ್ ಒಳ್ಳೆದಾ? ಗ್ಯಾಲಕ್ಸಿ S25 ಅಲ್ಟ್ರಾ ಚೆನ್ನಾಗಿದೆಯಾ? ಗೊಂದಲಕ್ಕೆ ಇಲ್ಲಿದೆ ಉತ್ತರ

Published : Jan 23, 2025, 03:55 PM IST

ಸ್ಯಾಮ್‌ಸಂಗ್ S25 ಅಲ್ಟ್ರಾ ಮತ್ತು ಐಫೋನ್ 16 ಪ್ರೋ ಮ್ಯಾಕ್ಸ್ ಎರಡು ಫೋನ್‌ಗಳಲ್ಲಿ ಯಾವುದು ಬೆಸ್ಟ್,  ಡಿಸ್‌ಪ್ಲೇ, ಕ್ಯಾಮೆರಾ, ಪ್ರೊಸೆಸರ್, ಬ್ಯಾಟರಿ, ಬೆಲೆ ಮತ್ತು ಸ್ಟೋರೇಜ್ ನೋಡಿ ಯಾವ ಫೋನ್ ನಿಮಗೆ ಸೂಕ್ತ ಅಂತ ತಿಳ್ಕೊಳ್ಳಿ.

PREV
14
ಐಫೋನ್ 16 ಪ್ರೋ ಮ್ಯಾಕ್ಸ್ ಒಳ್ಳೆದಾ? ಗ್ಯಾಲಕ್ಸಿ S25 ಅಲ್ಟ್ರಾ ಚೆನ್ನಾಗಿದೆಯಾ? ಗೊಂದಲಕ್ಕೆ ಇಲ್ಲಿದೆ ಉತ್ತರ

ಸ್ಯಾಮ್‌ಸಂಗ್ S25 ಸರಣಿ ಬಿಡುಗಡೆ ಮಾಡಿದೆ. S25, S25+, ಮತ್ತು S25 Ultra. ಮೂರು ಮಾಡೆಲ್‌ಗಳು ಟಾಪ್ ಫೀಚರ್ಸ್‌ಗಳಿವೆ. ಫ್ಲ್ಯಾಗ್‌ಶಿಪ್ ಫೋನ್ ಖರೀದಿ ಮಾಡ್ಬೇಕು ಅಂದ್ರೆ ಈ ಹೋಲಿಕೆ ಸಹಾಯ ಮಾಡುತ್ತೆ.

24

S25 ಅಲ್ಟ್ರಾ vs ಐಫೋನ್ 16 ಪ್ರೋ ಮ್ಯಾಕ್ಸ್: ಡಿಸ್‌ಪ್ಲೇ

ಗ್ಯಾಲಕ್ಸಿ S25 ಅಲ್ಟ್ರಾ 6.9  ಇಂಚಿನ ಡೈನಾಮಿಕ್ ಅಮೋಲ್ಡ್ 2X ಸ್ಕ್ರೀನ್, QHD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ಹೊಂದಿದೆ. S ಪೆನ್ ಸಪೋರ್ಟ್ ಇದೆ. ಐಫೋನ್ 16 ಪ್ರೋ ಮ್ಯಾಕ್ಸ್ ಕೂಡ 6.9 ಇಂಚಿನ ಸೂಪರ್ ರೆಟಿನಾ XDR ಸ್ಕ್ರೀನ್ ಮತ್ತು 120 Hz ಪ್ರೋಮೋಶನ್  ಟೆಕ್ನಾಲಜಿ ಹೊಂದಿದೆ.

ಐಫೋನ್ 16 ಪ್ರೋ ಮ್ಯಾಕ್ಸ್ ಟೈಟಾನಿಯಂ ಬಾಡಿ, ಸೆರಾಮಿಕ್ ಶೀಲ್ಡ್ ಫ್ರಂಟ್ ಮತ್ತು ಮ್ಯಾಟ್ ಗ್ಲಾಸ್ ಹಿಂಭಾಗ ಹೊಂದಿದೆ. 227g ತೂಕವಿದೆ. ಗ್ಯಾಲಕ್ಸಿ S25 ಅಲ್ಟ್ರಾ 218g ತೂಕವಿದೆ.

34

S25 ಅಲ್ಟ್ರಾ vs ಐಫೋನ್ 16 ಪ್ರೋ ಮ್ಯಾಕ್ಸ್: ಕ್ಯಾಮೆರಾ

ಗ್ಯಾಲಕ್ಸಿ  S25 ಅಲ್ಟ್ರಾ ಎರಡು ಟೆಲಿಫೋಟೋ ಲೆನ್ಸ್‌ಗಳು (3x ಮತ್ತು 5x ಆಪ್ಟಿಕಲ್ ಜೂಮ್), 50MP ಅಲ್ಟ್ರಾ-ವೈಡ್ ಲೆನ್ಸ್, ಮತ್ತು 200MP ಮೇನ್ ಕ್ಯಾಮೆರಾ ಹೊಂದಿದೆ. ಐಫೋನ್ 16 ಪ್ರೋ ಮ್ಯಾಕ್ಸ್ 48MP ಪ್ರೈಮರಿ ಕ್ಯಾಮೆರಾ, ಅಲ್ಟ್ರಾ-ವೈಡ್, ಪೋರ್ಟ್ರೇಟ್, ಮತ್ತು 5x ಟೆಲಿಫೋಟೋ ಲೆನ್ಸ್‌ಗಳನ್ನು ಹೊಂದಿದೆ.

S25 ಅಲ್ಟ್ರಾ vs ಐಫೋನ್ 16 ಪ್ರೋ ಮ್ಯಾಕ್ಸ್:ಪ್ರೊಸೆಸರ್

ಗ್ಯಾಲಕ್ಸಿ ಎಸ್25 ಅಲ್ಟಾ ಸ್ನಾಪ್‌ಡ್ರಾಗನ್ 8 ಎಲೈಟ್ ಸಿಪಿಯು, 12ಜಿಬಿ  RAM ಹಾಗೂ 1ಟಿಬಿ ಸ್ಟೋರೇಜ್ ಹೊಂದಿದೆ. ಐಉೋನ್ 16 ಪ್ರೋ ಮ್ಯಾಕ್ಸ್ ಎ18 ಪ್ರೋ ಚಿಪ್ ಹೊಂದಿದೆ.  

44

S25 ಅಲ್ಟ್ರಾ vs ಐಫೋನ್ 16 ಪ್ರೋ ಮ್ಯಾಕ್ಸ್: ಬ್ಯಾಟರಿ

S25 ಅಲ್ಟ್ರಾ 5,000mAh ಬ್ಯಾಟರಿ, ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಮತ್ತು 45W ಫಾಸ್ಟ್ ಚಾರ್ಜಿಂಗ್ ಹೊಂದಿದೆ. ಐಫೋನ್ 16 ಪ್ರೋ ಮ್ಯಾಕ್ಸ್ ಬ್ಯಾಟರಿ ಚೆನ್ನಾಗಿದೆ ಎಂದು ವರದಿ ಇದೆ. ಮ್ಯಾಗ್‌ಸೇಫ್ ವೈರ್‌ಲೆಸ್ ಚಾರ್ಜಿಂಗ್ ಮತ್ತು 20W ಚಾರ್ಜಿಂಗ್ ಸಪೋರ್ಟ್ ಇದೆ.

S25 ಅಲ್ಟ್ರಾ vs ಐಫೋನ್ 16 ಪ್ರೋ ಮ್ಯಾಕ್ಸ್: ಬೆಲೆ ಮತ್ತು ಸ್ಟೋರೇಜ್

ಸ್ಯಾಮ್‌ಸಂಗ್ S25 ಅಲ್ಟ್ರಾ ಮೂರು ವೆರಿಯಂಟ್‌ಗಳಲ್ಲಿ ಲಭ್ಯವಿದೆ. ಬೆಲೆ ₹1,29,999 ರಿಂದ ಶುರುವಾಗುತ್ತದೆ. 256GB, 512GB, ಮತ್ತು 1TB ಆಯ್ಕೆಗಳಿವೆ.

ಐಪೋನ್ 16 ಪ್ರೋ ಮ್ಯಾಕ್ಸ್ ಬೆಲೆ ₹1,44,900 ರಿಂದ ಶುರು. 256GB, 512GB, ಮತ್ತು 1TB ಆಯ್ಕೆಗಳಿವೆ.

Read more Photos on
click me!

Recommended Stories