24 ಸಾವಿರಕ್ಕೂ ಕಡಿಮೆ ಬೆಲೆಗೆ ಸಿಗುತ್ತೆ ಆ್ಯಪಲ್ ಐಫೋನ್‌ 14 ಪ್ಲಸ್‌: ಇಲ್ಲಿದೆ ವಿವರ..

First Published Oct 13, 2023, 5:12 PM IST

Apple iPhone 14 Plus ಪ್ರಸ್ತುತ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಭಾರಿ ರಿಯಾಯಿತಿಯಲ್ಲಿ ಲಭ್ಯವಿದ್ದು, ಐಫೋನ್‌ 13 ಗಿಂತ ಕಡಿಮೆ ಬೆಲೆಗೆ ಸಿಗುತ್ತದೆ. 

ಆ್ಯಪಲ್ ಐಫೋನ್‌ 15 ಆರಂಭಿಕ ದಿನಗಳಲ್ಲಿ ಅದ್ಭುತ ಪ್ರತಿಕ್ರಿಯೆ ಪಡೆದ ನಂತರ ಆ್ಯಪಲ್ ಐಫೋನ್‌ 14 ಪ್ಲಸ್‌ ಖರೀದಿದಾರರ ಗಮನ ಸೆಳೆಯುತ್ತಿದೆ. ಆ್ಯಪಲ್ ಐಫೋನ್‌ 14 ಪ್ಲಸ್ ಕಳೆದ ವರ್ಷ ಬಿಡುಗಡೆಯಾದಾಗ ಹೆಚ್ಚು ಗಮನ ಸೆಳೆಯಲು ವಿಫಲವಾಗಿತ್ತು. ಆದರೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2023 ರಲ್ಲಿ ಇದು ಉತ್ತಮ ಮಾರಾಟವಾಗುತ್ತಿದೆಯಂತೆ.

ಏಕೆಂದರೆ, Apple iPhone 14 Plus ಪ್ರಸ್ತುತ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಭಾರಿ ರಿಯಾಯಿತಿಯಲ್ಲಿ ಲಭ್ಯವಿದೆ. ಐಫೋನ್‌ 14 ಪ್ಲಸ್‌ ಅನ್ನು ಭಾರತದಲ್ಲಿ ಮೂಲ ಮಾಡೆಲ್‌ಗಾಗಿ 89,900 ರೂಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಯಿತು ಮತ್ತು Apple iPhone 15 Plus ಬಿಡುಗಡೆ ಮಾಡಿದ ನಂತರ, ಕಂಪನಿಯು ಐಫೋನ್‌ 14 ಪ್ಲಸ್‌ ಫೋನ್‌ನ ಬೆಲೆಯನ್ನು 10,000 ರೂ. ನಷ್ಟು ಕಡಿತಗೊಳಿಸಿದೆ.  

ಅಂದರೆ, ಭಾರತದಲ್ಲಿ ಐಫೋನ್‌ 14 ಪ್ಲಸ್‌ ಬೆಲೆ ಈಗ 79,900 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಪ್ರಸ್ತುತ, ಆ್ಯಪಲ್ ಐಫೋನ್‌ 14 ಪ್ಲಸ್‌ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ 42,150 ರೂ. ಆಫರ್‌ ನಂತರ ಕೇವಲ 23,849 ರೂ. ಗಳಲ್ಲಿ ಲಭ್ಯವಿದೆ.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಆ್ಯಪಲ್ ಐಫೋನ್‌ 14 ಪ್ಲಸ್‌ 13,901 ರೂ.  ರಿಯಾಯಿತಿಯ ನಂತರ 65,999 ರೂ.ಗೆ  ಪಟ್ಟಿ ಮಾಡಲಾಗಿದೆ. ಇದರ ಜೊತೆಗೆ, ಖರೀದಿದಾರರು ICICI ಬ್ಯಾಂಕ್, Axis ಬ್ಯಾಂಕ್ ಮತ್ತು Citi ಬ್ಯಾಂಕ್ ಕ್ರೆಡಿಟ್ ಕಾರ್ಡ್ ಟ್ರಾನ್ಸಾಕ್ಷನ್‌ ಮೇಲೆ 1000 ರೂ. ರಿಯಾಯಿತಿ ಪಡೆಯಬಹುದು. ಇದು Apple iPhone 14 Plus ಬೆಲೆಯನ್ನು 64,999 ರೂ.ಗೆ ಇಳಿಸಿದೆ.

ಇದಲ್ಲದೇ, ಖರೀದಿದಾರರು ಹಳೆಯ ಸ್ಮಾರ್ಟ್‌ಫೋನ್‌ಗೆ ಎಕ್ಸ್‌ಚೇಂಜ್‌ ಆಗಿ 41,150 ರೂ. ವರೆಗೆ ರಿಯಾಯಿತಿ ಪಡೆಯಬಹುದು. ಎಲ್ಲಾ ಕೊಡುಗೆ ಮತ್ತು ಬ್ಯಾಂಕ್ ರಿಯಾಯಿತಿಗಳೊಂದಿಗೆ, ಖರೀದಿದಾರರು Apple iPhone 14 Plus ಅನ್ನು 42,150 ರೂ. ಆಫರ್‌ ನಂತರ ಕೇವಲ 23,849 ರೂ. ಗಳಲ್ಲಿ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಖರೀದಿಸಬಹುದು.

ಆ್ಯಪಲ್ ಐಫೋನ್ 14 ಪ್ಲಸ್ ಕಳೆದ ವರ್ಷ ಐಫೋನ್ ಸರಣಿಯಲ್ಲಿ ಮಿನಿ ಮಾಡೆಲ್‌ನ ಬದಲಿಯಾಗಿ ಪಾದಾರ್ಪಣೆ ಮಾಡಿದ ನಂತರ ಖರೀದಿದಾರರಿಂದ ಬದಿಗೆ ಸರಿದಿತ್ತು. ಆ್ಯಪಲ್ ಐಫೋನ್ 14 ಪ್ಲಸ್ ಐಫೋನ್ 14 ನಂತಹ ವೈಶಿಷ್ಟ್ಯಗಳನ್ನು ಹೊಂದಿದ್ದು, ಜತೆಗೆ ದೊಡ್ಡ ಡಿಸ್ಪ್ಲೇ ಮತ್ತು ಉತ್ತಮ ಬ್ಯಾಟರಿ ಹೊಂದಿದೆ.

ಐಫೋನ್ 14 ಪ್ಲಸ್ ನೀಲಿ, ನೇರಳೆ, ಮಿಡ್‌ನೈಟ್‌, ಸ್ಟಾರ್‌ಲೈಟ್‌ ಮತ್ತು ಕೆಂಪು ಸೇರಿ ಐದು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಇದು 6.7 - ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ ಹೊಂದಿದೆ. 

ಆ್ಯಪಲ್ ಐಫೋನ್ 13 ಪ್ರೋ ಮಾಡೆಲ್‌ಗಳಲ್ಲಿ ಕಂಡುಬರುವಂತೆ ಸ್ಮಾರ್ಟ್‌ಫೋನ್ ಸುಧಾರಿತ A15 ಬಯೋನಿಕ್ ಚಿಪ್‌ನಿಂದ ಚಾಲಿತವಾಗಿದೆ. ಇನ್ನು, ಆ್ಯಪಲ್ ಐಫೋನ್ 14 ಪ್ಲಸ್‌ 12MP ಮುಖ್ಯ ಸೆನ್ಸಾರ್‌ ಮತ್ತು ಅಲ್ಟ್ರಾ - ವೈಡ್ ಸೆನ್ಸಾರ್‌ನೊಂದಿಗೆ ಡ್ಯುಯಲ್ ರೇರ್‌ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. 

ಆ್ಯಪಲ್ ಐಫೋನ್ 14 ಪ್ಲಸ್‌ 5G ಸಾಮರ್ಥ್ಯವನ್ನು ಹೊಂದಿದೆ ಮತ್ತು ಒಂದೇ ಚಾರ್ಜ್‌ನಲ್ಲಿ ಈ ಸ್ಮಾರ್ಟ್‌ಫೋನ್ 26 ಗಂಟೆಗಳವರೆಗೆ ಇರುತ್ತದೆ ಎಂದು ಆ್ಯಪಲ್ ಕಂಪನಿ ಹೇಳಿಕೊಂಡಿದೆ.

click me!