ದಸರಾ - ದೀಪಾವಳಿ ಹಬ್ಬ ಹಿನ್ನೆಲೆ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್ ಸೇರಿ ಪ್ರಮುಖ ಇ - ಕಾಮರ್ಸ್ ಜಾಲತಾಣಗಳು ಆಫರ್‌ಗಳ ಸುರಿಮಳೆ ಸುರಿಸುತ್ತಿದೆ. ಸ್ಮಾರ್ಟ್‌ಫೋನ್ ಖರೀದಿದಾರರಿಗೂ ಸಹ ಹಬ್ಬದ ವಾತಾವರಣವಾಗಿದ್ದು, ಐಫೋನ್ ಕೊಳ್ಳಲೂ ಸಹ ಇದೇ ಬೆಸ್ಟ್ ಟೈಂ ಎನ್ನಬಹುದು.
ಆ್ಯಪಲ್ ಐಫೋನ್ 13 ಪ್ರಸ್ತುತ ಆ್ಯಪಲ್ ಸ್ಟೋರ್‌ನಲ್ಲಿ ಲಭ್ಯವಿರುವ ಅಗ್ಗದ ಸ್ಮಾರ್ಟ್‌ಫೋನ್ ಆಗಿದೆ. ಏಕೆಂದರೆ, ಐಫೋನ್ 12 ಸ್ಟೋರ್‌ನಲ್ಲಿ ಲಭ್ಯವಿಲ್ಲ. ಇದು ಬಿಡುಗಡೆಯಾದಾಗಿನಿಂದ ಅಸಾಧಾರಣ ಪ್ರತಿಕ್ರಿಯೆ ಪಡೆದಿದೆ ಮತ್ತು ಕಳೆದ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಅತಿ ಹೆಚ್ಚಾಗಿ ಮಾರಾಟವಾಗಿತ್ತು.
2021 ರಲ್ಲಿ ಬಿಡುಗಡೆಯಾದ ಆ್ಯಪಲ್ ಐಫೋನ್ 13 ಬೆಲೆ 79,900 ರೂ. ಆಗಿತ್ತು, ಆದರೆ, ಆ್ಯಪಲ್ ಐಫೋನ್ 15 ಸರಣಿಯನ್ನು ಬಿಡುಗಡೆ ಮಾಡಿದ ನಂತರ Apple iPhone 13 ಬೆಲೆ ಹೆಚ್ಚು ಕಡಿಮೆಯಾಗಿದೆ ಮತ್ತು ಅದು ಈಗ ಹಿಂದೆಂದಿಗಿಂತಲೂ ಅಗ್ಗವಾಗಿದೆ. Apple ಸ್ಟೋರ್ ಆ್ಯಪಲ್ ಐಫೋನ್ 13 ಬೇಸ್ ಮಾಡೆಲ್ ಅನ್ನು 59,900 ರೂ.ಗೆ ಮಾರಾಟ ಮಾಡುತ್ತಿದೆ.
ಆದರೆ, ನೀವು ಆ್ಯಪಲ್ ಐಫೋನ್ 13 ಅನ್ನು ಇನ್ನೂ ಕಡಿಮೆ ಬೆಲೆಗೆ ಪಡೆಯಬಹುದು. ಆ್ಯಪಲ್ ಐಫೋನ್ 13 ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 25,600 ರೂ. ಗಳ ರಿಯಾಯಿತಿಯ ನಂತರ ಕೇವಲ 26,399 ರೂ. ಗಳಲ್ಲಿ ಲಭ್ಯವಿದೆ.
ಫ್ಲಿಪ್‌ಕಾರ್ಟ್‌ನಲ್ಲಿ ಆ್ಯಪಲ್ ಐಫೋನ್ 13ಗೆ 7,901 ರೂಪಾಯಿಗಳ ರಿಯಾಯಿತಿಯ ನಂತರ 51,999 ರೂಪಾಯಿಗಳಿಗೆ ಪಟ್ಟಿ ಮಾಡಲಾಗಿದೆ. ಇದರ ಜೊತೆಗೆ, ಖರೀದಿದಾರರು ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 1000 ರೂ. ಡಿಸ್ಕೌಂಟ್ ಪಡೆಯಬಹುದು.
ಇದು ಐಫೋನ್ 13 ಬೆಲೆಯನ್ನು 50,999 ರೂ.ಗೆ ಇಳಿಸಿದೆ. ಇದಲ್ಲದೆ, ಖರೀದಿದಾರರು ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ 24,600 ರೂ. ವರೆಗೆ ರಿಯಾಯಿತಿ ಪಡೆಯಬಹುದು. ಎಲ್ಲಾ ಕೊಡುಗೆಗಳು ಮತ್ತು ಬ್ಯಾಂಕ್ ರಿಯಾಯಿತಿಗಳೊಂದಿಗೆ, ಖರೀದಿದಾರರು ಆ್ಯಪಲ್ ಐಫೋನ್ 13 ಅನ್ನು ಫ್ಲಿಪ್‌ಕಾರ್ಟ್ ಮಾರಾಟದಿಂದ ಕೇವಲ 26,399 ರೂ. ಗಳಲ್ಲಿ ಪಡೆಯಬಹುದು.
ಆ್ಯಪಲ್ ಐಫೋನ್ 13 ಡಯಾಗನಲ್ ರೇರ್ ಕ್ಯಾಮೆರಾ ವಿನ್ಯಾಸವನ್ನು ಪರಿಚಯಿಸಿದೆ. ಈ ಹಿನ್ನೆಲೆ ನೀವು ಪ್ರೀಮಿಯಂ ಪ್ರಮುಖ ಮಟ್ಟದ ಸಾಧನವನ್ನು ಕಡಿಮೆ ದರದಲ್ಲಿ ಖರೀದಿಸಲು ಪ್ಲ್ಯಾನ್ ಮಾಡಿದ್ದರೆ ಇದು ನಿಸ್ಸಂದೇಹವಾಗಿ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ.
ಆ್ಯಪಲ್ ಐಫೋನ್ 13 4K Dolby Vision HDR ರೆಕಾರ್ಡಿಂಗ್ ಜೊತೆಗೆ 12MP ಡ್ಯುಯಲ್ ರೇರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ನೈಟ್ ಮೋಡ್‌ನೊಂದಿಗೆ 12MP TrueDepth ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಸಾಧನವು 17 ಗಂಟೆಗಳವರೆಗೆ ವಿಡಿಯೋ ಪ್ಲೇಬ್ಯಾಕ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಇದು ಆ್ಯಪಲ್ ಐಫೋನ್ 14 ನಂತೆಯೇ ಹೆಚ್ಚಿನ ಸ್ಪೆಕ್ಸ್ ಅನ್ನು ಕಡಿಮೆ ಬೆಲೆಗೆ ನೀಡುತ್ತದೆ. ಈ ಹಿನ್ನೆಲೆ ನೀವು ಬಜೆಟ್‌ನಲ್ಲಿ ಪ್ರೀಮಿಯಂ ಆ್ಯಪಲ್ ಐಫೋನ್ ಖರೀದಿಸಲು ಯೋಜಿಸುತ್ತಿದ್ದರೆ ಐಫೋನ್ 13 ಉತ್ತಮ ಆಯ್ಕೆಯಾಗಿದೆ.