16,399 ರೂ. ಗೆ ಐಫೋನ್‌ ಖರೀದಿಸಲು ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ನಲ್ಲಿದೆ ಸೂಪರ್‌ ಆಫರ್‌!

Published : Oct 09, 2023, 02:45 PM ISTUpdated : Oct 09, 2023, 03:32 PM IST

Apple iPhone 12 ಫ್ಲಿಪ್‌ಕಾರ್ಟ್‌ನಲ್ಲಿ ತೀವ್ರ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. 16,399 ರೂ. ಗೆ ಖರೀದಿಸಬಹುದಾಗಿದೆ. ಹೇಗೆ ಅಂತೀರಾ? ವಿವರ ಇಲ್ಲಿದೆ..

PREV
18
16,399 ರೂ. ಗೆ ಐಫೋನ್‌ ಖರೀದಿಸಲು ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ನಲ್ಲಿದೆ ಸೂಪರ್‌ ಆಫರ್‌!

ದಸರಾ - ದೀಪಾವಳಿ ಹಬ್ಬ ಹತ್ತಿರ ಬರುತ್ತಿದ್ದು, ಈ ಹಿನ್ನೆಲೆ ಫ್ಲಿಪ್‌ಕಾರ್ಟ್‌ ಹಾಗೂ ಅಮೆಜಾನ್‌ ಸೇರಿ ಪ್ರಮುಖ ಇ - ಕಾಮರ್ಸ್‌ ತಾಣಗಳು ಆಫರ್‌ಗಳ ಸುರಿಮಳೆಯನ್ನೇ ಸುರಿಸುತ್ತಿದೆ. ಸ್ಮಾರ್ಟ್‌ಫೋನ್‌ ಖರೀದಿದಾರರಿಗಂತೂ ಹಬ್ಬ, ಐಫೋನ್‌ ಕೊಳ್ಳಲೂ ಸಹ ಇದೇ ಬೆಸ್ಟ್‌ ಟೈಂ!

28

ಐಫೋನ್‌ ಖರೀದಿಸಲು ಯೋಚಿಸುತ್ತಿದ್ದರೂ ಹಲವರು ಬೆಲೆ ಹೆಚ್ಚು ಅಂತ ಖರೀದಿಸಲು ಹಿಂದೆ ಮುಂದೆ ನೋಡ್ತಿರ್ತಾರೆ. ಆದರೆ, ಈಗ ಐಫೋನ್ 12, 13 ಹಾಗೂ 14 ಖರೀದಿಗೆ ಅತ್ಯಾಕರ್ಷಕ ಆಫರ್‌ಗಳನ್ನು ನೀಡಲಾಗ್ತಿದೆ. ಐಫೋನ್‌ ಕೊಳ್ಳಲು ಇಷ್ಟ ಇರುವವರು ಖರೀದಿ ಮಾಡ್ಬಹುದು. 

38

Apple iPhone 12 ತೀವ್ರ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಮತ್ತು ಇನ್ನು ಸ್ವಲ್ಪ ಸಮಯದಲ್ಲಿ ಇದರ ಮಾರಾಟವನ್ನೂ ನಿಲ್ಲಿಸಬಹುದು. ಲಾಂಛ್‌ ಮಾಡಿದಾಗ Apple iPhone 12 ಅನ್ನು 79,900 ರೂಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ ಮತ್ತು ಇದು ಇಲ್ಲಿಯವರೆಗೆ ಹೆಚ್ಚು ಮಾರಾಟವಾದ ಐಫೋನ್ ಮಾಡೆಲ್‌ಗಳಲ್ಲಿ ಒಂದಾಗಿದೆ. ಇದು ಆ್ಯಪಲ್ ಐಫೋನ್‌ 12 ಪ್ರೋ ಮತ್ತು ಆ್ಯಪಲ್ ಐಫೋನ್‌ 12 ಪ್ರೋ ಮ್ಯಾಕ್ಸ್‌ ಅನ್ನು ಒಳಗೊಂಡಿರುವ Apple iPhone 12 ಸರಣಿಯ ಭಾಗವಾಗಿದೆ. 

48

ಆ್ಯಪಲ್ ಐಫೋನ್‌ 15 ಸೀರಿಸ್‌ ಪ್ರಾರಂಭದ ನಂತರ Apple iPhone 12 ಅನ್ನು ಆ್ಯಪಲ್ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ ಮತ್ತು ಶೀಘ್ರದಲ್ಲೇ ಇದನ್ನು ಇಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಂದಲೂ ತೆಗೆದುಹಾಕಲಾಗುತ್ತದೆ ಎನ್ನಲಾಗಿದೆ. 

58

ಆ್ಯಪಲ್ ಐಫೋನ್‌ 12 ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 25,600 ರೂಪಾಯಿಗಳ ಬೃಹತ್ ರಿಯಾಯಿತಿಯ ನಂತರ 16,399 ರೂ.ಗೆ ಸಿಗುತ್ತದೆ. ಆ್ಯಪಲ್ ಐಫೋನ್‌ 12 ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಕಡಿಮೆ ಬೆಲೆಗೆ ಸಿಗುವ ಸ್ಮಾರ್ಟ್‌ಫೋನ್ ಆಗಿದೆ. 6.1-ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಹಾಗೂ, ಐಫೋನ್ A14 ಬಯೋನಿಕ್ ಚಿಪ್‌ನಿಂದ ಚಾಲಿತವಾಗಿದೆ.

68

ಆ್ಯಪಲ್ ಐಫೋನ್‌ 12 ಗೆ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 41,999 ರೂ. ಗಳಲ್ಲಿ ಪಟ್ಟಿ ಮಾಡಲಾಗಿದೆ ಮತ್ತು ಇದರ ಜೊತೆಗೆ, ಖರೀದಿದಾರರು ICICI ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 1000 ರೂ. ರಿಯಾಯಿತಿ ಪಡೆಯಬಹುದು. ಈ ಹಿನ್ನೆಲೆ ಸ್ಮಾರ್ಟ್‌ಫೋನ್‌ನ ಬೆಲೆಯನ್ನು 40,999 ರೂ.ಗೆ ಇಳಿಸಿದೆ. 
 

78

ಇದಲ್ಲದೆ, ಫ್ಲಿಪ್‌ಕಾರ್ಟ್ ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗೆ ಎಕ್ಸ್‌ಚೇಂಜ್‌ ಆಗಿ 24,600 ರೂ. ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಇದರರ್ಥ ಎಲ್ಲಾ ಬ್ಯಾಂಕ್ ಕೊಡುಗೆಗಳು ಮತ್ತು ರಿಯಾಯಿತಿಗಳ ನಂತರ, ನೀವು ಆ್ಯಪಲ್ ಐಫೋನ್‌ 12 ಅನ್ನು ಕೇವಲ 16,399 ರೂ. ಗಳಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದು. ಅಂದರೆ, 25,600 ರೂ. ಆಫರ್‌ನಲ್ಲಿ ಪಡೆಯಬಹುದು.
 

88

ಆ್ಯಪಲ್ ಐಫೋನ್‌ 12 ಸೆರಾಮಿಕ್ ಶೀಲ್ಡ್ ಮತ್ತು IP68 ವಾಟರ್‌ ರೆಸಿಸ್ಟೆಂಟ್‌ನೊಂದಿಗೆ ಬರುತ್ತದೆ. ಕ್ಯಾಮೆರಾ ವಿಷಯಕ್ಕೆ ಬಂದಾಗ, ಸಾಧನವು ಹಿಂಭಾಗದಲ್ಲಿ 12MP ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಪಡೆಯುತ್ತದೆ. ಇದು ನೈಟ್ ಮೋಡ್, 4K ಡಾಲ್ಬಿ ವಿಷನ್ HDR ರೆಕಾರ್ಡಿಂಗ್ ಜೊತೆಗೆ 12MP TrueDepth ಫ್ರಂಟ್ ಕ್ಯಾಮೆರಾವನ್ನೂ ಹೊಂದಿದೆ. ಇದು ವರ್ಟಿಕಲ್‌ ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು 64GB ಸಂಗ್ರಹಣೆಯೊಂದಿಗೆ ಬ್ರ್ಯಾಂಡ್‌ನ ಕೊನೆಯ ಫೋನ್ ಆಗಿದೆ.

Read more Photos on
click me!

Recommended Stories