ಭಾರತದ ಪ್ರಮುಖ ಇ ಕಾಮರ್ಸ್ ಪ್ರಮುಖ ತಾಣಗಳಾದ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಇಂದಿನಿಂದ ಒಂದು ವಾರಕ್ಕೂ ಹೆಚ್ಚು ಸಮಯ ಭರ್ಜರಿ ಸೇಲ್ ಆರಂಭವಾಗಿದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಪ್ರೈಮ್ ಸದಸ್ಯರಿಗೆ ಮಧ್ಯರಾತ್ರಿ 12 ಗಂಟೆಯಿಂದಲೇ ಆರಂಭವಾಗಿದ್ದು, ಇತರೆ ಸದಸ್ಯರಿಗೆ ಇಂದು ಮಧ್ಯರಾತ್ರಿ ಶುರುವಾಗಲಿದೆ. ಇನ್ನೊಂದೆಡೆ, ಫ್ಲಿಪ್‌ಕಾರ್ಟ್ ಸಹ ತನ್ನ ಪ್ಲಸ್ ಸದಸ್ಯರಿಗೆ ಬಿಗ್ ಬಿಲಿಯನ್ ಡೇಸ್ ಅನ್ನು ಈಗಾಗಲೇ ಆರಂಭಿಸಿದ್ದು, ಇತರರಿಗೆ ಇಂದು ಮಧ್ಯರಾತ್ರಿಯಿಂದ ಶುರುವಾಗಲಿದೆ.
Amazon, Flipkart ಸೇಲ್ ಸಮಯದಲ್ಲಿ Apple iPhone 14 ರೂ. 50,000 ಕ್ಕಿಂತ ಕಡಿಮೆ ಹಾಗೂ 40,000 ರೂ. ಅಡಿಯಲ್ಲಿ iPhone 13 ಮಾರಾಟವಾಗಲಿದೆ ಎಂದು ಮಾಹಿತಿ ಬಂದಿದೆ. ಈ ಹಿನ್ನೆಲೆ ಇವೆರಡರಲ್ಲಿ ನೀವು ಯಾವುದನ್ನು ಖರಿದಿಸ್ಬೇಕು ಅನ್ನೋದನ್ನು ನಿರ್ಧರಿಸಿ.
ಹೊಸ iPhone 15 ಸೀರಿಸ್‌ಗೆ ಸುಮಾರು 80,000 ರೂಪಾಯಿ ಹಾಗೂ ಅದಕ್ಕೂ ಹೆಚ್ಚು ಹಣ ಖರ್ಚು ಮಾಡಲು ಇಷ್ಟಪಡದವರಿಗೆ, ಹಳೆಯ ಐಫೋನ್ 13 ಮತ್ತು ಐಫೋನ್ 14 ಹೆಚ್ಚಿನ ರಿಯಾಯಿತಿಗಳು ಮತ್ತು ಕೊಡುಗೆಗಳಿಗೆ ಹೆಚ್ಚು ಪ್ರವೇಶಿಸಬಹುದಾದ ಬೆಲೆಯಲ್ಲಿ ಲಭ್ಯವಿರುತ್ತವೆ.
Apple iPhone 13 ಆಫರ್
Apple iPhone 13 ಅಮೆಜಾನ್‌ನಲ್ಲಿ 39,999 ರೂಗಳಲ್ಲಿ ಲಭ್ಯವಿರುತ್ತದೆ. ಆದರೆ, ಈ ಬೆಲೆಯು 3,500 ರೂಪಾಯಿಗಳ ಎಕ್ಸ್‌ಚೇಂಜ್ ಬೋನಸ್ ಮತ್ತು 2,500 ರೂಪಾಯಿಗಳ SBI ಬ್ಯಾಂಕ್ ಕಾರ್ಡ್ ರಿಯಾಯಿತಿಯನ್ನು ಒಳಗೊಂಡಿದೆ. ವಿನಿಮಯ ಬೋನಸ್ ಮತ್ತು ಬ್ಯಾಂಕ್ ಕೊಡುಗೆ ಇಲ್ಲದೆ, iPhone 13 ನಿಮಗೆ 45,499 ರೂ.ಗೆ ಸಿಗಲಿದೆ.
Apple iPhone 14 ಆಫರ್
79,900 ರೂಗಳಲ್ಲಿ ಬಿಡುಗಡೆ ಮಾಡಲಾಗಿದ್ದ Apple iPhone 14 ಅನ್ನು ಭಾರತದಲ್ಲಿ 50,000 ರೂ. ಗೂ ಕಡಿಮೆ ಬೆಲೆಗೆ ಲಭ್ಯವಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಫ್ಲಿಪ್‌ಕಾರ್ಟ್ ಈ ಬಗ್ಗೆ ಟೀಸರ್ ಅನ್ನು ಬಿಡುಗಡೆ ಮಾಡಿತ್ತು. ಅದರೂ, ಇದು ಹೆಚ್ಚಾಗಿ ಬ್ಯಾಂಕ್ ಕೊಡುಗೆ ಮತ್ತು ವಿನಿಮಯ ಬೋನಸ್ ಅನ್ನು ಒಳಗೊಂಡಿರುತ್ತದೆ.
Apple iPhone 13 vs iPhone 14: ಯಾವುದನ್ನು ಖರೀದಿಸಬೇಕು?
ಐಫೋನ್ 14 ಐಫೋನ್ 13ಗಿಂತ ಸ್ವಲ್ಪ ಉತ್ತಮವಾದ ಕ್ಯಾಮರಾ ಮತ್ತು ಬ್ಯಾಟರಿಯೊಂದಿಗೆ ಬರುತ್ತದೆ, ಜೊತೆಗೆ iPhone 13 ಗೆ ಹೋಲಿಸಿದರೆ ಭದ್ರತಾ ನವೀಕರಣವೂ ಸಹ ಹೆಚ್ಚಿದೆ. ಈ ಹಿನ್ನೆಲೆ 10,000 ರೂ. ಬೆಲೆ ಮಾತ್ರ ವ್ಯತ್ಯಾಸವಿದ್ದರೆ ಐಫೋನ್ ಖರೀದಿಸೋದು ಹೆಚ್ಚು ಸಮಂಜಸ. ಆದರೂ, ಅಂತಿಮವಾಗಿ, ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ನಿಮ್ಮ ಬಜೆಟ್‌ಗೆ ಹೊಂದಿಕೆಯಾಗಬೇಕು.
ನೀವು ಯಾವುದೇ ಸಾಧನವನ್ನು ಖರೀದಿಸಲು ಯೋಜಿಸಿದರೂ, ರಿಯಾಯಿತಿ ದರಗಳಲ್ಲಿ ಕೆಲವೇ ಸ್ಮಾರ್ಟ್‌ಫೋನ್‌ಗಳು ಅಂದರೆ ಸ್ಟಾಕ್ ಖಾಲಿಯಾಗುವವರೆಗೆ ಮಾತ್ರ ಸೀಮಿತವಾಗಿರುತ್ತವೆ. ಖರೀದಿಯ ಸಮಯದಲ್ಲಿ ಅಕೌಂಟ್ ಲಾಗ್ ಇನ್ ಮಾಡಿ ಮತ್ತು ಪಾವತಿ ಮೋಡ್ ಅನ್ನು ರೆಡಿ ಮಾಡಿಟ್ಟುಕೊಳ್ಳಬೇಕು.