ನಿಮ್ಮ ಐಫೋನ್‌ ಕೂಡ ಬಿಸಿಯಾಗ್ತಿದ್ಯಾ? ಸಮಸ್ಯೆ ನಿವಾರಣೆಗೆ ತಕ್ಷಣ ಹೀಗೆ ಮಾಡಿ..

First Published | Oct 5, 2023, 5:40 PM IST

ಐಫೋನ್ 15 ಪ್ರೋ ಖರೀದಿಸಿದ ಹಲವರು ಬಳಕೆಯ ಸಮಯದಲ್ಲಿ ಫೋನ್ ಬೆಚ್ಚಗಾಗುತ್ತಿರುವ ಅಥವಾ ಬಿಸಿಯಾಗುತ್ತಿರುವ ಬಗ್ಗೆ ದೂರಿದ್ದಾರೆ. ಈ ಸಮಸ್ಯೆ ನಿವಾರಣೆಗೆ ಆ್ಯಪಲ್ ಈ ಕ್ರಮ ಕೈಗೊಂಡಿದೆ. 

ಐಫೋನ್‌ 15 ಬಿಡುಗಡೆಯಾಗಿ ಹಲವು ದಿನಗಳು ಕಳೆದಿದ್ರೂ ಈಗಲೂ ಕೂಡ ಐಫೋನ್‌ ಪ್ರಿಯರು ಹೊಸ ಫೋನ್‌ ಖರೀದಿಗೆ ಮುನ್ನುಗ್ಗುತ್ತಿದ್ದಾರೆ. ಐಫೋನ್ 13 ಹಾಗೂ ಐಫೋನ್ 4 ಬೆಲೆ ಕಡಿಮೆಯಾಗ್ತಿದ್ರೂ ಸಹ ಹೆಚ್ಚು ಬೆಲೆಯ ಐಫೋನ್ 15 ಪ್ರೋ ಹಾಗೂ ಐಫೋನ್ 15 ಪ್ರೋ ಮ್ಯಾಕ್ಸ್ ಅಕ್ಷರಶಃ ಹಾಟ್‌ಕೇಕ್‌ಗಳಂತೆ ಮಾರಾಟವಾಗುತ್ತಿವೆ.

ಆದರೆ, ಐಫೋನ್ 15 ಪ್ರೋ ಖರೀದಿಸಿದ ಹಲವರು ಬಳಕೆಯ ಸಮಯದಲ್ಲಿ ಫೋನ್ ಬೆಚ್ಚಗಾಗುತ್ತಿರುವ ಅಥವಾ ಬಿಸಿಯಾಗುತ್ತಿರುವ ಬಗ್ಗೆ ದೂರಿದ್ದಾರೆ. ಈ ಸಮಸ್ಯೆಯನ್ನು ಕೆಲ ದಿನಗಳ ಹಿಂದೆ ಒಪ್ಪಿಕೊಂಡಿದ್ದ ಆ್ಯಪಲ್ ಈ ಸಮಸ್ಯೆ ನಿವಾರಣೆಗೆ ಈ ಕ್ರಮ ಕೈಗೊಂಡಿದೆ. 

Latest Videos


ನಿಮ್ಮ iPhone 15 Pro ಅಥವಾ ಯಾವುದೇ ಐಫೋನ್ ಮಾದರಿಗಳೊಂದಿಗೆ ನೀವು ಸಹ ಫೋನ್‌ ಬಿಸಿ ಅಥವಾ ಬೆಚ್ಚಗಾಗುತ್ತಿರುವ ಸಮಸ್ಯೆಯನ್ನು ಎದುರಿಸಿದ್ದರೆ, Apple ನಿಮಗಾಗಿ ಅಪ್‌ಡೇಟ್‌ ಹೊಂದಿದೆ. ಆ್ಯಪಲ್ ತನ್ನ ಇತ್ತೀಚಿನ ಐಫೋನ್‌ಗಳ ಮೇಲೆ ಪರಿಣಾಮ ಬೀರುತ್ತಿರುವ ಮಿತಿಮೀರಿದ ಸಮಸ್ಯೆಗಳನ್ನು ಸರಿಪಡಿಸಲು ಅಪ್ಡೇಟ್‌ ಬಿಡುಗಡೆ ಮಾಡಿದೆ. 

iOS 17.0.3 ಅಪ್‌ಡೇಟ್ ಸಾಮಾನ್ಯ ದೋಷ ಪರಿಹಾರಗಳು ಮತ್ತು ಭದ್ರತಾ ಅಪ್‌ಡೇಟ್‌ಗಳ ಜೊತೆಗೆ ಐಫೋನ್ ನಿರೀಕ್ಷೆಗಿಂತ ಬಿಸಿಯಾಗಿ ಕಾರ್ಯನಿರ್ವಹಿಸಲು ಕಾರಣವಾಗುವ ಸಮಸ್ಯೆಯನ್ನು ಪರಿಹರಿಸುತ್ತದೆ ಎಂದು ಕಂಪನಿ ಹೇಳಿದೆ. "ಈ ಅಪ್‌ಡೇಟ್ ಪ್ರಮುಖ ದೋಷ ಪರಿಹಾರಗಳು, ಭದ್ರತಾ ನವೀಕರಣಗಳನ್ನು ಒದಗಿಸುತ್ತದೆ ಮತ್ತು ಐಫೋನ್ ನಿರೀಕ್ಷೆಗಿಂತ ಬೆಚ್ಚಗಾಗಲು ಕಾರಣವಾಗುವ ಸಮಸ್ಯೆಯನ್ನು ಪರಿಹರಿಸುತ್ತದೆ" ಎಂದು ಆ್ಯಪಲ್ ಮಾಹಿತಿ ನೀಡಿದೆ.  

ತಮ್ಮ iPhone 15 Pro ಮಾಡೆಲ್‌ಗಳು ಬಿಸಿಯಾಗುವ ಸಮಸ್ಯೆಗಳನ್ನು ಎದುರಿಸುತ್ತಿರುವವರು ಅದಕ್ಕೆ ಟೈಟಾನಿಯಂ ಫ್ರೇಮ್ ಅನ್ನು ದೂಷಿಸಿದರು, ಇನ್ನು ಕೆಲವರು ಹೊಸ 3nm A17 Pro ಚಿಪ್ ಅನ್ನು ಸಹ ಶಂಕಿಸಿದ್ದರು. ಆದರೆ, ಆ್ಯಪಲ್ ಈ ಆರೋಪಗಳನ್ನು ತಳ್ಳಿಹಾಕಿತ್ತು ಹಾಗೂ  iOS 17 ನಲ್ಲಿ ದೋಷವಿದೆ ಎಂದು ತೋರುತ್ತದೆ, ಅದು ಐಫೋನ್‌ಗಳು ಸಾಮಾನ್ಯಕ್ಕಿಂತ ಹೆಚ್ಚು ಬೆಚ್ಚಗಾಗಲು ಕಾರಣವಾಗಬಹುದು ಎಂದಿತ್ತು. 

ಅಲ್ಲದೆ, ಈ ಸಮಸ್ಯೆಯ ಹಿಂದೆ Instagram, Uber ಮತ್ತು Asphalt 9 ನಂತಹ ಕೆಲವು ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳನ್ನು ಸಹ ಆ್ಯಪಲ್ ದೂಷಿಸಿತ್ತು ಮತ್ತು ಸಮಸ್ಯೆಯನ್ನು ಪರಿಹರಿಸಲು ಡೆವಲಪರ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದೆ.

ನಿಮ್ಮ iPhone ಸಾಫ್ಟ್‌ವೇರ್ ಅಪ್ಡೇಟ್‌ ಮಾಡಲು, ನೀವು ಇತ್ತೀಚಿನ iOS ವರ್ಷನ್‌ ಅನ್ನು ಪರಿಶೀಲಿಸಬಹುದು. ಇದಕ್ಕೆ ‘ಸೆಟ್ಟಿಂಗ್ಸ್‌’ಗೆ (Settings) ಹೋಗಿ, ನಂತರ ‘ಜನರಲ್‌’ಗೆ (General) ಹೋಗಿ, ‘ಅಬೌಟ್‌’ (About) ಆಯ್ಕೆಮಾಡಿ ಮತ್ತು ಅಂತಿಮವಾಗಿ, Software Update) ಮೇಲೆ ಕ್ಲಿಕ್ ಮಾಡಿ. 

ನಿಮ್ಮ ಸಾಧನಕ್ಕೆ iOS 17.0.3 ಲಭ್ಯವಿದ್ದರೆ (ಆ್ಯಪಲ್ ಕ್ರಮೇಣ ನವೀಕರಣಗಳನ್ನು ಬಿಡುಗಡೆ ಮಾಡುತ್ತದೆ), ನೀವು ತಕ್ಷಣ ಅದನ್ನು ಇನ್ಸ್ಟಾಲ್‌ ಮಾಡಬಹುದು. ಇದು ನಿಮ್ಮ ಐಫೋನ್ ಬಿಸಿಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. 
 

ಈ ಮಧ್ಯೆ, ತಾಜಾ ಸೆಟಪ್ ನಂತರ ಮೊದಲ ಕೆಲವು ದಿನಗಳಲ್ಲಿ ಐಫೋನ್‌ಗಳು ನಿರೀಕ್ಷೆಗಿಂತ ಬೆಚ್ಚಗಾಗುವುದು ಸಹಜ ಎಂದೂ ಆ್ಯಪಲ್ ಹೇಳುತ್ತದೆ. ಆದರೆ, ನೀವು ಹೊಸ ಐಫೋನ್ 15 ಪ್ರೋ ಮಾಡೆಲ್‌ ಪಡೆದಿದ್ದರೆ ಅಥವಾ ಹಳೆಯ ಐಫೋನ್ ಮಾಡೆಲ್‌ಗಳಲ್ಲಿಯೂ ನೀವು ಬಿಸಿಯಾಗ್ತಿರುವ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸಹ ಅಪ್ಡೇಟ್‌ ಇನ್ಸ್ಟಾಲ್‌ ಮಾಡಲು ಹೆಚ್ಚು ಸಲಹೆ ನೀಡಲಾಗುತ್ತದೆ.

click me!