ಮಕ್ಕಳನ್ನು ಬೆಳಗ್ಗೆ ನಿದ್ದೆಯಿಂದ ಬೇಗ ಎಬ್ಬಿಸಲು ಈ ಟಿಪ್ಸ್ ಫಾಲೋ ಮಾಡಿ !

First Published | Aug 5, 2024, 6:04 PM IST

ಭಾನುವಾರ ಬಿಟ್ಟರೆ ಸೋಮವಾರದಿಂದ ಶನಿವಾರದವರೆಗೆ ಮಕ್ಕಳನ್ನು ಬೆಳಗ್ಗೆ ನಿದ್ದೆಯಿಂದ ಎಬ್ಬಿಸೋದು ಪೋಷಕರಿಗೆ ಸವಾಲಿನ ಕೆಲಸ. ಕೆಲವು ಟಿಪ್ಸ್ ಫಾಲೋ ಮಾಡಿದ್ರೆ ಮಕ್ಕಳೇ ಬೇಗ ಎದ್ದೇಳುತ್ತಾರೆ.

ಶಾಲೆಗೆ ಹೋಗುವ ಮಕ್ಕಳು ಕನಿಷ್ಠ 10 ಗಂಟೆಯಾದ್ರೂ ನಿದ್ದೆ ಮಾಡಬೇಕು. 10 ಗಂಟೆಗಿಂತ ಮುಂಚೆ ಮಕ್ಕಳು ನಿದ್ದೆಯಿಂದ ಏಳಲ್ಲ. ಹಾಗಾಗಿ ಮಕ್ಕಳು 10 ಗಂಟೆ ನಿದ್ದೆ ಮಾಡುವಂತೆ ಪೋಷಕರು ನೋಡಿಕೊಳ್ಳಬೇಕು.

ಮೂರು ವರ್ಷದೊಳಗಿನ ಮಕ್ಕಳು ಸಾಮಾನ್ಯವಾಗಿ 12 ರಿಂದ 15 ಗಂಟೆಗಳ ಕಾಲ ನಿದ್ದೆ ಮಾಡುತ್ತಾರೆ. 5 ರಿಂದ 10 ವರ್ಷದೊಳಗಿನ ಮಕ್ಕಳು 9 ರಿಂದ 12 ಗಂಟೆಗಳ ನಡುವೆ ಮಲಗಬೇಕು. ನಿಮ್ಮ ಮಕ್ಕಳು ತಮ್ಮ ವಯಸ್ಸಿಗೆ ತಕ್ಕಂತೆ ನಿದ್ದೆ ಮಾಡದಿದ್ದರೆ ಅವರು ಬೆಳಗ್ಗೆ ಬೇಗ ಏಳುವುದಿಲ್ಲ.

Tap to resize

ನಿಮ್ಮ ಮಕ್ಕಳು ಬೆಳಗ್ಗೆ ಏಕೆ ಏಳಲ್ಲ ಎಂಬುದನ್ನು ಮೊದಲ ತಿಳಿದುಕೊಳ್ಳಬೇಕು. ಸಮಸ್ಯೆ ಗೊತ್ತಾದ್ರೆ ಪರಿಹಾರ ಸಿಕ್ಕೇ ಸಿಗುತ್ತದೆ. ಮಕ್ಕಳು ಬೆಳಗ್ಗೆ ಸರಿಯಾಗಿ ಏಳಲು ಏನು ಮಾಡಬೇಕು ಅನ್ನೋದನ್ನು ಪ್ಲಾನ್ ಮಾಡಬೇಕು.

ರಾತ್ರಿ ಮಕ್ಕಳು ಬೇಗ ಮಲಗುವಂತೆ ನೋಡಿಕೊಳ್ಳಬೇಕು. ಹಾಗಾಗಿ ರಾತ್ರಿ ಮಕ್ಕಳನ್ನು ಟಿವಿ ಮತ್ತು ಮೊಬೈಲ್‌ನಿಂದ ದೂರವಿಡಿ. ಮಕ್ಕಳು ಮಲಗಲು ನಿಶ್ಚಿತ ಸಮಯವನ್ನು ನಿಗದಿ ಮಾಡಿ, ಕೆಲ ದಿನ ಅದನ್ನು ರೂಢಿ ಮಾಡಿಸಬೇಕು. ಈ ಸಮಯಕ್ಕೆ ಮಗು ಹೊಂದಿಕೊಂಡ್ರೆ ಬೆಳಗ್ಗೆ ಬೇಗ ಎಚ್ಚರಗೊಳ್ಳುತ್ತಾರೆ.

ಬೆಳಗ್ಗೆ ಮಕ್ಕಳನ್ನು ಪ್ರೀತಿಯಿಂದ ಮಾತನಾಡುತ್ತಾ ಎಚ್ಚರಗೊಳಿಸಬೇಕು. ಜೋರಾಗಿ ಮಾತನಾಡುವ ಅಥವಾ ಕಿರುಚುವುದನ್ನು ಮಾಡಬಾರದು. ಹೀಗಾದ್ರೆ ಮಕ್ಕಳು ಹಠ ಮಾಡಬಹುದು.

ನಿಮ್ಮ ಮಕ್ಕಳು ಇಷ್ಟಪಡುವ ಆರೋಗ್ಯಕರ ಉಪಹಾರವನ್ನು ತಯಾರಿಸುತ್ತಾ, ಎಬ್ಬಿಸಬೇಕು. ಏನು ಅಡುಗೆ ಮಾಡಿದ್ದೇವೆ ಅಂತ ವಿವರಿಸುತ್ತಾ ಮಕ್ಕಳನ್ನು ಎಚ್ಚರಗೊಳಿಸಬೇಕು. ಹೀಗೆ ಮಾಡೋದರಿಂದಲೂ ಮಕ್ಕಳು ಬೇಗ ಎದ್ದೇಳುತ್ತಾರೆ.

ಕೆಲ ಮಕ್ಕಳು ಸಂಗೀತದ ಆಕರ್ಷಣೆಗೆ ಒಳಗಾಗುತ್ತಾರೆ. ಮಕ್ಕಳು ಸಂಗೀತ ಇಷ್ಟಪಡ್ತಿದ್ದರೆ ಮಕ್ಕಳನ್ನು ಎಬ್ಬಿಸುವಾಗ ಹಾಡು ಹೇಳಿ ಅಥವಾ ಟಿವಿಗಳಲ್ಲಿ ಮೆಲೊಡಿ ಹಾಡು ಹಾಕಿ.

Latest Videos

click me!