ಮದುವೆಯ ನಂತರ ತೂಕ ಹೆಚ್ಚಾಗುವುದರಿಂದ ಬೇಸತ್ತಿದ್ದ ರಾಜಸ್ಥಾನದ ದಂಪತಿಗಳಾದ ಆದಿತ್ಯ ಮತ್ತು ಗಾಯತ್ರಿ ಜಿಮ್ ಸೇರಿದರು ಮತ್ತು ಈಗ ತಮ್ಮದೇ ಆದ ಜಿಮ್‌ನ ಮಾಲೀಕರಾಗಿದ್ದಾರೆ. ಇವರ ಕಥೆ ಒಂದು ಚಲನಚಿತ್ರಕ್ಕಿಂತ ಕಡಿಮೆಯಿಲ್ಲ.
ಮದುವೆಯ ನಂತರ ಗಂಡ-ಹೆಂಡತಿ ತಮ್ಮ ಫಿಟ್ನೆಸ್ ಬಗ್ಗೆ ಗಮನ ಹರಿಸುವುದಿಲ್ಲ. ಆದರೆ, ರಾಜಸ್ಥಾನದ ದಂಪತಿಗಳಾದ ಆದಿತ್ಯ ಮತ್ತು ಗಾಯತ್ರಿ ದಂಪತಿಯ ಕಥೆ ಹಾಗಲ್ಲ. ಇವರು ಎಲ್ಲರಿಗಿಂತ ವಿಭಿನ್ನವಾಗಿ ಆಲೋಚನೆ ಮಾಡಿದರು.
ಆರೋಗ್ಯ ಸಮಸ್ಯೆಗಳು ಪ್ರಾರಂಭವಾದವು. ತಮ್ಮ ಸಾಮಾನ್ಯ ಬಟ್ಟೆಗಳು ಹಾಕಿಕೊಳ್ಳಲು ಸರಿಹೊಂದುತ್ತಿರಲಿಲ್ಲ. ಆದ್ದರಿಂದ ಇಬ್ಬರೂ ಜಿಮ್ ಮಾಡಲು ಪ್ರಾರಂಭಿಸಿದರು. ಇಬ್ಬರೂ ಪ್ರತಿದಿನ ಮೂರರಿಂದ ನಾಲ್ಕು ಗಂಟೆಗಳ ಕಾಲ ಜಿಮ್‌ನಲ್ಲಿ ಕಳೆಯುತ್ತಿದ್ದರು.
ಮೂಲತಃ ರಾಜಸ್ಥಾನದ ಸಿರೋಹಿಯವರಾದ ಆದಿತ್ಯ ಮತ್ತು ಗಾಯತ್ರಿ ಅವರಿಗೆ ಮದುವೆಯ ನಂತರ ಇಬ್ಬರ ತೂಕ ಹೆಚ್ಚಾಗಲು ಪ್ರಾರಂಭಿಸಿತು. ಇಬ್ಬರೂ ನಿಧಾನವಾಗಿ ಜಿಮ್ ಮಾಡಲು ಪ್ರಾರಂಭಿಸಿದರು. ಆರಂಭದಲ್ಲಿ ಬೇರೆಯವರ ಜಿಮ್‌ನಲ್ಲಿ ತೂಕವಿಳಿಸಿ ಎಲ್ಲ ಪಟ್ಟುಗಳನ್ನು ಕಲಿತುಕೊಂಡರು. ಇದಾದ ನಂತರ ಜಿಮ್‌ಗಾಗಿ ಭಾರೀ ಪ್ರಮಾಣದಲ್ಲಿ ಹಣ ವೆಚ್ಚ ಮಾಡುವುದು ಇಬ್ಬರಿಗೂ ಕಷ್ಟವಾಯಿತು.
ಇದಾದ ನಂತರ ಒಬ್ಬರೂ ಸೇರಿಕೊಂಡು ತಮ್ಮದೇ ಆದ ಜಿಮ್ ಅನ್ನು ಪ್ರಾರಂಭಿಸಿದ್ದಾರೆ. ಇದೀಗ ಆದಿತ್ಯ ಮತ್ತು ಗಾಯತ್ರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಇಬ್ಬರೂ ಬಾಡಿಬಿಲ್ಡರ್‌ಗಳಾಗಿರುವುದು ಇದಕ್ಕೆ ಕಾರಣವಾಗಿದೆ. ಆದರೆ, ಇವರಿಬ್ಬರೂ ಬಾಡಿ ಬಿಲ್ಡರ್ ಆಗುವುದರ ಹಿಂದಿನ ಶ್ರಮ ಮಾತ್ರ ದೇವರೇ ಬಲ್ಲ..
ಪ್ರಸ್ತುತ ಇವರ ಜಿಮ್‌ನಲ್ಲಿ 400 ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಇವರ ಪ್ರೇರಣಾತ್ಮಕ ಕಥೆಯಿಂದ ಪ್ರೇರಿತರಾಗಿ ಇತರ ಹಲವು ದಂಪತಿಗಳು ಜಿಮ್ ಮಾಡಲು ಪ್ರಾರಂಭಿಸಿದರು. ಆದಿತ್ಯ ಮತ್ತು ಗಾಯತ್ರಿ ಹೇಳುವಂತೆ ನಾವು ಏನನ್ನಾದರೂ ಮಾಡಲು ನಿರ್ಧರಿಸಿದರೆ, ನಾವು ಅದಕ್ಕಾಗಿ ಶ್ರಮಿಸಬೇಕು. ಕೇವಲ ಆ ಗುರಿಯ ಬಗ್ಗೆ ಯೋಚಿಸುವುದರಿಂದ ಏನೂ ಆಗುವುದಿಲ್ಲ ಎಂದು ಹೇಳಿದ್ದಾರೆ.