ಈಗ ಗೋಧಿ ಹಿಟ್ಟನ್ನ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಅದರ ಮಧ್ಯದಲ್ಲಿ ತಯಾರಿಸಿಕೊಂಡ ಪುಡಿಯನ್ನ ಹಾಕಿ ಉಂಡೆಗಳನ್ನ ಮಾಡಿ. ಇದೇ ರೀತಿ ಸಾಧ್ಯವಾದಷ್ಟು ಉಂಡೆಗಳನ್ನ ಮಾಡಿ. ಇವುಗಳನ್ನ ಇಲಿಗಳು ಹೆಚ್ಚಾಗಿ ಓಡಾಡುವ ಮೂಲೆಗಳಲ್ಲಿ ಇಡಿ. ಇವುಗಳನ್ನ ತಿಂದ ಇಲಿಗಳು ಮನೆಯಲ್ಲಿ ಒಂದೂ ಉಳಿಯುವುದಿಲ್ಲ. ಈ ಟ್ರಿಕ್ ಮನೆಯಲ್ಲಿ ಇಲಿಗಳನ್ನ ಓಡಿಸೋದ್ರಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ.
ಇವುಗಳನ್ನ ಹಿಟ್ಟಿನ ಉಂಡೆಗಳಲ್ಲಿ ಮಿಕ್ಸ್ ಮಾಡಬಹುದು
ಮನೆಯಿಂದ ಇಲಿಗಳನ್ನ ಓಡಿಸೋಕೆ ನೀವು ಗೋಧಿ ಹಿಟ್ಟಿನ ಉಂಡೆಗಳಿಗೆ ಹೊಗೆಸೊಪ್ಪು, ಒಣ ಮೆಣಸಿನಕಾಯಿಗಳು, ದೇಸಿ ತುಪ್ಪವನ್ನೂ ಸೇರಿಸಬಹುದು. ಇದಕ್ಕೆ ಮೊದಲು ಒಂದು ಬಟ್ಟಲಿನಲ್ಲಿ ಹೊಗೆಸೊಪ್ಪು, ಒಣಮೆಣಸಿನ ಪುಡಿ, ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಒಂದು ಹಿಟ್ಟಿನ ಉಂಡೆ ತೆಗೆದುಕೊಂಡು ಅದರ ಮಧ್ಯದಲ್ಲಿ ಈ ಮಿಶ್ರಣವನ್ನ ಇಟ್ಟು ಉಂಡೆಯನ್ನಾಗಿ ಮಾಡಿ. ಇವುಗಳನ್ನ ಮನೆಯ ಎಲ್ಲಾ ಮೂಲೆಗಳಲ್ಲಿ ಇಡಿ. ನಿಜಕ್ಕೂ ತುಪ್ಪದ ವಾಸನೆ ಇಲಿಗಳನ್ನ ತುಂಬಾ ಆಕರ್ಷಿಸುತ್ತೆ. ಇನ್ನು ಹೊಗೆಸೊಪ್ಪು ಮಾದಕ ವಸ್ತು ಆಗಿರೋದ್ರಿಂದ.. ಇವುಗಳನ್ನ ತಿಂದ ಮೇಲೆ ಅವು ಮನೆಯಿಂದ ಹೊರಟು ಹೋಗುತ್ತವೆ.