ತಲೆಹೊಟ್ಟು ನಿವಾರಣೆಗೆ ಸೂಪರ್ ಮನೆಮದ್ದುಗಳು, ಕೂದಲು ಸೊಂಪಾಗಿ ಬೆಳೆಯಲು ಇದನ್ನೇ ಮಾಡ್ಲೇಬೇಕು
ಕೂದಲಿನ ರಕ್ಷಣೆಗಾಗಿ ತಲೆಹೊಟ್ಟು ನಿವಾರಣೆಗೆ ಕೆಲವು ಮನೆಮದ್ದುಗಳಿವೆ. ಲಿಂಬೆ ರಸ, ಅಲೋವೆರಾ, ಬೇವಿನ ಎಲೆಗಳು ಮತ್ತು ಬಾಳೆಹಣ್ಣುಗಳನ್ನು ಬಳಸುವುದರಿಂದ ತಲೆಹೊಟ್ಟನ್ನು ಕಡಿಮೆ ಮಾಡಬಹುದು.
ಕೂದಲಿನ ರಕ್ಷಣೆಗಾಗಿ ತಲೆಹೊಟ್ಟು ನಿವಾರಣೆಗೆ ಕೆಲವು ಮನೆಮದ್ದುಗಳಿವೆ. ಲಿಂಬೆ ರಸ, ಅಲೋವೆರಾ, ಬೇವಿನ ಎಲೆಗಳು ಮತ್ತು ಬಾಳೆಹಣ್ಣುಗಳನ್ನು ಬಳಸುವುದರಿಂದ ತಲೆಹೊಟ್ಟನ್ನು ಕಡಿಮೆ ಮಾಡಬಹುದು.
ಇಂದು ಕೂದಲು ರಕ್ಷಣೆಗೆ ಹಲವು ಉತ್ಪನ್ನಗಳು ಸಿಗುತ್ತವೆ. ಆದ್ರೆ ಕೆಲವೊಂದು ದಿನಬಳಕೆ ವಸ್ತುಗಳನ್ನು ಬಳಸುವ ಮೂಲಕ ತಲೆಹೊಟ್ಟ ನಿವಾರಿಸಬಹುದು. ತಲೆಹೊಟ್ಟು ನಿವಾರಣೆ ಮಾಡೋದರಿಂದ ಕೂದಲು ರಕ್ಷಣೆ ಮಾಡಿಕೊಳ್ಳಬಹುದು.
ಕೂದಲಿನಲ್ಲಿ ಎಣ್ಣೆ ಮತ್ತು ಕೊಳಕು ಇಲ್ಲದಂತೆ ನೋಡಿಕೊಳ್ಳುವ ಮೂಲಕ ತಲೆಹೊಟ್ಟು ನಿವಾರಣೆ ಮಾಡಿಕೊಳ್ಳಬಹುದು. ತಲೆಹೊಟ್ಟು ನಿವಾರಿಸಲು ಸಹಾಯ ಮಾಡುವ ಕೆಲವು ಹೇರ್ ಕೇರ್ ಸಲಹೆಗಳು ನೋಡೋಣ ಬನ್ನಿ.
ಸಲಹೆ 1:
ಲಿಂಬೆ ರಸವು ತಲೆಹೊಟ್ಟು ನಿವಾರಿಸಲು ಅತ್ಯುತ್ತಮವಾಗಿದೆ. ಇದಕ್ಕಾಗಿ ಒಂದು ಚಮಚ ಲಿಂಬೆ ರಸ, ಅರ್ಧ ಕಪ್ ಮೊಸರು, ಒಂದು ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ತಲೆ ಬುಡದಿಂದ ತುದಿಯವರೆಗೆ ಹಚ್ಚಿ. 30 ನಿಮಿಷಗಳ ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆದುಕೊಳ್ಳಬೇಕು.
ಸಲಹೆ 2:
ಸುಲಭವಾಗಿ ಸಿಗುವ ವಸ್ತುಗಳಲ್ಲಿ ಅಲೋವೆರಾ ಕೂಡ ಒಂದಾಗಿದೆ. ಅಲೋವೆರಾ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಲೋವೆರಾ ರಸವು ಕೂದಲು ಬೆಳೆಯಲು ಮತ್ತು ತಲೆಹೊಟ್ಟು ಹೋಗಲಾಡಿಸಲು ತುಂಬಾ ಸಹಾಯಕವಾಗಿದೆ. ಇದಕ್ಕಾಗಿ ಅಲೋವೆರಾ ರಸವನ್ನು ತಲೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. 20 ನಿಮಿಷಗಳ ನಂತರ ತೊಳೆದುಕೊಳ್ಳಬೇಕು.
ಸಲಹೆ 3:
ಎಣ್ಣೆ ಮತ್ತು ಆಲಿವ್ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ತಲೆಗೆ ಹಚ್ಚಿಕೊಳ್ಳಬೇಕು. ನಂತರ ಬಿಸಿ ನೀರಿನಲ್ಲಿ ಅದ್ದಿದ ಟವೆಲ್‌ನಿಂದ ತಲೆಯನ್ನು ಚೆನ್ನಾಗಿ ಕಟ್ಟಿಕೊಳ್ಳಬೇಕು. 20 ನಿಮಿಷಗಳ ನಂತರ ಶಾಂಪೂ ಬಳಸಿ ತಲೆಕೂದಲು ತೊಳೆಯಿರಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.
ಸಲಹೆ 4:
ಬೇವಿನ ಎಲೆಗಳನ್ನು ರುಬ್ಬಿ ತಲೆಗೆ ಹಚ್ಚಿ ತೊಳೆಯಿರಿ. ಇದನ್ನು ವಾರಕ್ಕೊಮ್ಮೆ ಅಭ್ಯಾಸ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ. ತಲೆಹೊಟ್ಟು ನಿವಾರಣೆ ಆದ್ರೆ ಕೂದಲು ಸೊಂಪಾಗಿ ಬೆಳೆಯುತ್ತದೆ.
ಸಲಹೆ 5:
ಒಂದು ಬಾಳೆಹಣ್ಣನ್ನು ಮ್ಯಾಶ್ ಮಾಡಿ ಅದಕ್ಕೆ ಒಂದು ಚಮಚ ಆಲಿವ್ ಎಣ್ಣೆ ಸೇರಿಸಿ ಪೇಸ್ಟ್ ಮಾಡಿ. ನಂತರ ಅದಕ್ಕೆ ಒಂದು ಚಮಚ ಮೊಸರು ಸೇರಿಸಿ ಕಲಸಿ. ಈಗ ಈ ಮಿಶ್ರಣವನ್ನು ತಲೆಗೆ ಚೆನ್ನಾಗಿ ಹಚ್ಚಿ. ಅರ್ಧ ಗಂಟೆಯ ನಂತರ ತಣ್ಣೀರಿನಲ್ಲಿ ತೊಳೆಯಿರಿ.
Disclaimer:ಈ ಮಾಹಿತಿ ಅಂತರ್ಜಾಲದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.