ಇಲ್ಲಿದೆ ಗಂಡು ಮಕ್ಕಳಿಗೆ ಇಡಬಹುದಾದ ಚಂದ್ರನ 9 ಹೆಸರುಗಳು

First Published | Sep 5, 2024, 4:22 PM IST

ಭಾರತೀಯರು ಸೂರ್ಯ, ಚಂದ್ರ, ಪ್ರಾಣಿ, ಪಕ್ಷಿ ಸೇರಿದಂತೆ ಇಡೀ ಪ್ರಕೃತಿಯನ್ನು ಆರಾಧನೆ ಮಾಡುತ್ತಾರೆ. ಮಕ್ಕಳಿಗೆ ದೇವರ ವಿಭಿನ್ನವಾದ ಹೆಸರುಗಳನ್ನು ಇಡಲು ಬಯಸುತ್ತಾರೆ. ಬರೀ ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದೆಲ್ಲೆಡೆ ಇರುವ ವಿವಿಧ ನಾಗರಿಕತೆಗಳು ಚಂದ್ರನಿಗೆ ದೇವರ ಸ್ಥಾನ ನೀಡಿವೆ. ಹೀಗಿರುವಾಗ ಇಲ್ಲಿ ಚಂದ್ರನ ಅರ್ಥ ಇರುವ ಗಂಡು ಮಕ್ಕಳ 10 ಹೆಸರುಗಳು ಹಾಗೂ ಅದರ ಹಿನ್ನೆಲೆಯ ವಿವರ ಇಲ್ಲಿದೆ. 

ಅಕಾಯ್

ಅಕಾಯ್ ಎಂಬುದು ಗಂಡು ಮಕ್ಕಳಿಗೆ ಇಡಬಹುದಾದ ಒಂದು ಸುಂದರ ಟರ್ಕಿಶ್ ಭಾಷೆಯ ಹೆಸರು. ಅಕಾಯ್ ಎಂದರೆ ಹೊಳೆಯುತ್ತಿರುವ ಚಂದ್ರ ಎಂಬ ಅರ್ಥ ಬರುವುದು. ಚಂದ್ರನ ಬೆಳಕನ್ನು ಉಲ್ಲೇಖಿಸುವ ಈ ಹೆಸರು ನಿಮ್ಮ ಹೊಳೆಯುವ ಪುಟ್ಟ ಕಂದನಿಗೆ ಅನ್ವರ್ಥವಾಗುವುದು. 
 

ಐನಾರ್

ಐನಾರ್ ಎಂದರೆ ಕಜಕಿಸ್ತಾನ್ ಭಾಷೆಯಲ್ಲಿ ಚಂದ್ರ ಎಂದರ್ಥ ಈ ಹೆಸರು ಕೂಡ ನಮ್ಮ ಚಂದಿರನ ಜೊತೆ ಅವಿನಾಭಾವ ಸಂಬಂಧವನ್ನು ಹೊಂದಿದ್ದು, ಈ ಹೆಸರು ಕಜಕಿಸ್ತಾನದಲ್ಲಿ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. 

Tap to resize

ಅಲ್ಡ್ರಿನ್

ಈ ಹೆಸರಿಗೂ ಚಂದ್ರನಿಗೂ ಒಂದು ಅವಿನಾಭಾವ ಸಂಬಂಧವಿದೆ. 1969ರಲ್ಲಿ ಮೊದಲ ಬಾರಿಗೆ ಚಂದ್ರನ ಮೇಲೆ ನಡೆದಾಡಿದ ಗಗನಯಾತ್ರಿ ಬುಜ್ ಅಲ್ಡ್ರಿನ್ ಗೌರವ ಸಲ್ಲಿಸುವುದಕ್ಕಾಗಿ ಈ ಹೆಸರು ಇದ್ದರೂ ಕೂಡ. ಇದು ಚಂದ್ರನೊಂದಿಗೆ ಹೊಂದಿಕೆ ಇರುವ ಐತಿಹಾಸಿಕ ಹೆಸರಾಗಿದೆ. 

ಅರ್ಚಿ

ಈ ಅರ್ಚಿ ಹೆಸರು ಕೂಡ ನಿಮ್ಮ ಗಂಡು ಮಗುವನ್ನು ಬ್ರಹ್ಮಾಂಡದ ವಿಶಾಲವಾದ ಅದ್ಭುತಗಳೊಂದಿಗೆ ಕನೆಕ್ಟ್ ಮಾಡುತ್ತದೆ. ಹಲವು ವಿವಿಧ ಅರ್ಥಗಳನ್ನು ಹೊಂದಿರುವ ಈ ಹೆಸರಿಗೆ ಬಿಲ್ವಿದ್ಯೆಗಾರ, ಧೈರ್ಯಶಾಲಿ ಎಂಬ ಅರ್ಥವೂ ಇದೆ. 

ಜೆರಾ, ಜೆರಾಹ್

ಈ ಹೆಸರು ಕೂಡ ಚಂದ್ರನ ತಿಂಗಳು ಅಥವಾ ಶುಕ್ಲಪಕ್ಷದ ಅರ್ಥ ನೀಡುತ್ತದೆ. ಅಮವಾಸ್ಯೆಯ ನಂತರ ಬರುವ ಚಂದ್ರನ ಬೆಳವಣಿಗೆಯನ್ನು ಇಷ್ಟಪಡುವವರಿಗೆ ಇದು ಕೂಡ ಒಂದು ಚಂದ್ರನ ಉತ್ತಮವಾದ ಹೆಸರಾಗಿದೆ.

ಝಿರಾ

ಈ ಹೆಸರಿಗೆ ಆಫ್ರಿಕನ್ ಹಾಗೂ ಹಿಬ್ರೂ ಇತಿಹಾಸವಿದ್ದು ಚಂದ್ರನ ಬೆಳಕು ಎಂಬ ಅರ್ಥವನ್ನು ನೀಡುತ್ತದೆ. ಈ ಹೆಸರಿಗೆ ಮೃದುವಾದ ಹೊಳೆಯುವ ಬೆಳಕು, ಸಂದೇಶವಾಹಕ, ಬೆಳಗು, ಹೊಳೆಯು ಎಂಬ ಅರ್ಥವಿದೆ. ಭರವಸೆ ಹಾಗೂ ಶಾಂತಿಯ ಅರ್ಥವನ್ನು ನೀಡುತ್ತದೆ. 

ಇಹಾನ್

ಇದು ಅರೇಬಿಕ್ ಹೆಸರಾಗಿದ್ದು, ಪೂರ್ಣಚಂದ್ರ ಅಥವಾ ಹುಣಿಮೆ ಎಂಬುದು ಈ ಹೆಸರಿನ ಅರ್ಥ, ಇದು ತೇಜಸ್ಸು ಹಾಗೂ ಸಂಪೂರ್ಣತೆಯನ್ನು ಪ್ರತಿಬಿಂಬಿಸುತ್ತದೆ. ಜೀವನಕ್ಕೆ ಪರಿಪೂರ್ಣತೆ ನೀಡುವ ಮಗುವಿಗೆ ಈ ಹೆಸರು ಇಡಬಹುದಾಗಿದೆ. 

ಜುನೈರ್

ಇದು ಇಸ್ಲಾಮಿಕ್ ಮೂಲದ ಹೆಸರಾಗಿದ್ದು, ಇದರ ಅರ್ಥವೂ ಚಂದ್ರನ ಬೆಳಕೇ ಆಗಿದೆ. ರಾತ್ರಿಯನ್ನು ಬೆಳಗುವ ಚಂದ್ರನಂತೆ ನಿಮ್ಮ ಬದುಕನ್ನು ಬೆಳಗುವ ಕಂದನಿಗೆ ಈ ಹೆಸರು ಇಡಬಹುದಾಗಿದೆ. 

ನೀಲ್

ಗೇಲಿಕ್ ಮೂಲದ ಹೆಸರು ಇದಾಗಿದ್ದು, ನೀಲ್ ಆರ್ಮ್‌ಸ್ಟಾಂಗ್ ಚಂದ್ರನ ಮೇಲೆ ಕಾಲಿಟ್ಟಾಗಿನಿಂದ ಈ ಹೆಸರು ಪಾಶ್ಚಾತ್ಯ ದೇಶಗಳಲ್ಲಿ ಸಖತ್ ಫೇಮಸ್ ಆಗಿದ್ದು, ಐತಿಹಾಸಿಕ ಖಗೋಳ ಹಿನ್ನೆಲೆಯನ್ನು ಹೊಂದಿದೆ. 

Latest Videos

click me!