ಮುಖೇಶ್ ಅಂಬಾನಿಗಿಂತ ದೊಡ್ಡ ಸಿರಿವಂತ ಈ ಬ್ಯಾಂಕ್ ಎಂಡಿ

First Published Jun 29, 2020, 6:33 PM IST

ಕಾರ್ಪೊರೇಟ್ ವಲಯದಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಹೆಚ್ಚಿನ ಸಂಬಳ ಪಡೆಯುವುದು ಕಾಮನ್. ಭಾರತ ಮಾತ್ರವಲ್ಲ, ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಎಂದು ಪರಿಗಣಿಸಲಾಗಿದೆ. ಜೊತೆಗೆ ಅವರು ವಿಶ್ವದ ಶ್ರೀಮಂತರಲ್ಲಿ 9ನೇ ಸ್ಥಾನದಲ್ಲಿದ್ದಾರೆ, ಆದರೆ ಅವರಿಗಿಂತ ಹೆಚ್ಚಿನ ಸಂಬಳ ಹೊಂದಿರುವ ವ್ಯಕ್ತಿ  ಭಾರತದಲ್ಲಿದ್ದಾರೆ, ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಮುಕೇಶ್ ಅಂಬಾನಿಗಿಂತ ಎಚ್‌ಡಿಎಫ್‌ಸಿ ಬ್ಯಾಂಕ್ ಎಂಡಿ ಮತ್ತು ಸಿಇಒ ಆದಿತ್ಯ ಪುರಿ ಹೆಚ್ಚಿನ ಸಂಬಳ ಪಡೆಯುತ್ತಾರೆ. ಎಚ್‌ಡಿಎಫ್‌ಸಿ ಬ್ಯಾಂಕ್ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಎಂಬ ಕೀರ್ತಿಗೆ ಪಾತ್ರವಾಗಿದೆ.

ಕಳೆದ ಹಣಕಾಸು ವರ್ಷದಲ್ಲಿ ಆದಿತ್ಯ ಪುರಿ 18.9 ಕೋಟಿ ರೂ ವೇತನ ಪಡೆದಿದ್ದಾರೆ. ಅದೇ ಸಮಯದಲ್ಲಿ ಮುಖೇಶ್ ಅಂಬಾನಿ ವಾರ್ಷಿಕ ವೇತನವಾಗಿ 15 ಕೋಟಿ ರೂ. ಪಡೆದಿದ್ದಾರೆ. ಮುಖೇಶ್ ಅಂಬಾನಿ ಕಳೆದ 12 ವರ್ಷಗಳಿಂದ ಅಷ್ಟೇ ವೇತನವನ್ನು ಪಡೆಯುತ್ತಿದ್ದಾರೆ. ಈ ವರ್ಷ, ಕೊರೋನಾ ವೈರಸ್ ಕಾರಣದಿಂದಾಗಿ ಅವರು ಸಂಬಳ ತೆಗೆದುಕೊಳ್ಳದಿರಲು ನಿರ್ಧರಿಸಿದ್ದಾರೆ.
undefined
2018-19ನೇ ಹಣಕಾಸು ವರ್ಷದಲ್ಲಿ ಆದಿತ್ಯ ಪುರಿಯ ವಾರ್ಷಿಕ ವೇತನ 13.7 ಕೋಟಿ ಆಗಿತ್ತು. ಅವರ ಪ್ಯಾಕೇಜ್ ಒಂದು ವರ್ಷದಲ್ಲಿ ಶೇಕಡಾ 38 ರಷ್ಟು ಹೆಚ್ಚಾಗಿದ್ದು. ಕಳೆದ ಹಣಕಾಸು ವರ್ಷದಲ್ಲಿ 161 ಕೋಟಿ ರೂ.ಗಳ ಷೇರುಗಳನ್ನು ಅವರು ಪುನಃ ಪಡೆದುಕೊಂಡಿದ್ದಾರೆ. ಈ ರೀತಿಯಾಗಿ ಅವರು ಒಟ್ಟು 180 ಕೋಟಿ ರೂ ಪಡೆದರು.
undefined
ಎಚ್‌ಡಿಎಫ್‌ಸಿ ಬ್ಯಾಂಕ್ ಆಡಳಿತ ಆರಂಭದಿಂದಲೂ ಆದಿತ್ಯ ಪುರಿಕೈಯಲ್ಲಿದೆ. ಇದು ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿದೆ. ಇದನ್ನು ಈ ಎತ್ತರಕ್ಕೆ ಕೊಂಡೊಯ್ಯುವ ಮನ್ನಣೆ ಆದಿತ್ಯ ಪುರಿಗೆ ಸೇರುತ್ತದೆ. 70 ವರ್ಷದ ಆದಿತ್ಯ ಪುರಿ ಈ ವರ್ಷ ಅಕ್ಟೋಬರ್ 26 ರಂದು ನಿವೃತ್ತರಾಗಲಿದ್ದಾರೆ. .
undefined
ಎಚ್‌ಡಿಎಫ್‌ಸಿ ಬ್ಯಾಂಕ್ 1995ರಲ್ಲಿ ಕೇವಲ ಒಂದು ಶಾಖೆಯೊಂದಿಗೆ ಪ್ರಾರಂಭವಾಗಿತ್ತು. ಮೊದಲಿನಿಂದಲೂ ಅದರೊಂದಿಗೆ ಭಾಗಿಯಾಗಿರುವ ಪುರಿ ಅವರ ಅಧಿಕಾರಾವಧಿಯಲ್ಲಿ ಎಚ್‌ಡಿಎಫ್‌ಸಿ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿ ಬೆಳೆದಿದೆ.
undefined
ಆದಿತ್ಯ ಪುರಿ ಅವರ ನಾಯಕತ್ವದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಅನೇಕ ಸಾಧನೆಗಳನ್ನು ಮಾಡಿದೆ. ಬ್ಯಾಂಕಿನ ಆಸ್ತಿ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಆದಿತ್ಯ ಪುರಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಾರ್ಕೇಟ್‌ ಕ್ಯಾಪಿಟಲ್‌ 5.7 ಲಕ್ಷ ಕೋಟಿ ರೂ. ಬ್ಯಾಂಕಿನ ಒಟ್ಟು ನಿಷ್ಕ್ರಿಯ ಆಸ್ತಿ (NPA) ಶೇಕಡಾ 1.26 ರಷ್ಟಿದ್ದು, ಇದು ಬ್ಯಾಂಕಿಂಗ್ ಉದ್ಯಮದಲ್ಲಿ ಅತ್ಯಂತ ಕಡಿಮೆ.
undefined
ಆದಿತ್ಯ ಪುರಿಯನ್ನು ದೇಶದ ಉನ್ನತ ಬ್ಯಾಂಕರ್‌ ಎಂದು ಪರಿಗಣಿಸಲಾಗಿದೆ. ಬ್ಯಾಂಕಿನಲ್ಲಿ ಸುಮಾರು 78 ಲಕ್ಷ ಷೇರುಗಳನ್ನು ಹೊಂದಿರುವ ಅವರ ಬೆಲೆ ಸುಮಾರು 804 ಕೋಟಿ ರೂ.
undefined
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಧ್ಯಕ್ಷ ರಜನೀಶ್ ಕುಮಾರ್ ಅವರು 2019-20ರ ಆರ್ಥಿಕ ವರ್ಷದಲ್ಲಿ 31.2 ಲಕ್ಷ ರೂ ಸಂಬಳ ಪಡೆದಿದ್ದರು. ಇದರಲ್ಲಿ ಬೇಸಿಕ್‌ ಸ್ಯಾಲರಿ 27 ಲಕ್ಷ ರೂ ಮತ್ತು ಡಿಎ 4.2 ಲಕ್ಷ ರೂ ಒಳಗೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿದೆ.
undefined
click me!