#IndianPost ಆದಾಯ ಹೆಚ್ಚಿಸೋ ಹಿರಿಯ ನಾಗರಿಕರ ಉಳಿತಾಯ ಯೋಜನೆ

First Published Jun 29, 2020, 3:49 PM IST

ಹಿರಿಯ ನಾಗರಿಕರಿಗೆ ಎಲ್ಲಿ ಹೂಡಿಕೆ ಮಾಡಬೇಕೆಂಬುವುದೇ ದೊಡ್ಡ ಸಮಸ್ಯೆ. ಪಿಂಚಣಿ ಪಡೆಯುವ ಜನರಿಗೆ ಹೆಚ್ಚು ತೊಂದರೆ ಇರೋಲ್ಲ. ನಿಗದಿತ ಮೊತ್ತವನ್ನು ನಿಯಮಿತವಾಗಿ ಪಡೆಯುತ್ತಾರೆ. ಆದರೆ ಪಿಂಚಣಿ ಸೌಲಭ್ಯವಿಲ್ಲದ ಖಾಸಗಿ ವಲಯದ ಕೆಲಸ ಮಾಡುವ ಜನರ ಸಂಖ್ಯೆಯೂ ಕಡಿಮೆ ಇಲ್ಲ. ಅವರಿಗೆ ನಿವೃತ್ತಿ ನಂತರ ಮಾತ್ರ ಗ್ರ್ಯಾಚುಟಿ ಮತ್ತು ಪಿಎಫ್ ಪ್ರಯೋಜನ ಸಿಗುವುದು. ಹಿರಿಯ ನಾಗರಿಕರಿಗಾಗಿ ಅನೇಕ ಹೂಡಿಕೆ ಯೋಜನೆಗಳಿದ್ದರೂ, ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆ ಉತ್ತಮವಾಗಿದೆ. ಅದರ ಬಗ್ಗೆ ವಿವರ ಇಲ್ಲಿದೆ.

ಪೋಸ್ಟಲ್ ಸೇವಿಂಗ್ಸ್ ಯೋಜನೆಯು ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯಗಳನ್ನು ಹೊಂದಿದೆ.ಇದರಲ್ಲಿ ಠೇವಣಿ ಇರಿಸಿದ ಮೊತ್ತದ ಮೇಲೆ ಪ್ರತೀ ತಿಂಗಳು ರಿಟರ್ನ್ಸ್ ಪಡೆಯಬಹುದು.ಯಾರಾದರೂ ತಮ್ಮ ನಿವೃತ್ತ ಪೋಷಕರಿಗೆ ಹಣವನ್ನು ಹೂಡಿಕೆ ಮಾಡಲು ಬಯಸಿದರೆ, ಅವರ ಹೆಸರಿನಲ್ಲಿ ಈ ಯೋಜನೆ ಅಡಿ ಖಾತೆತೆರೆಯಬಹುದು ಮತ್ತು ತಿಂಗಳಿಗೆ 9 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಗಳಿಸಬಹುದು.
undefined
ಹಿರಿಯ ನಾಗರಿಕ ಉಳಿತಾಯ ಯೋಜನೆ -ಸಿನಿಯರ್‌ ಸಿಟಿಜನ್‌ ಸೇವಿಂಗ್‌ ಸ್ಕಿಮ್‌ (SCSS) ಸರ್ಕಾರದಬೆಂಬಲಿತ ಯೋಜನೆ. 60 ವರ್ಷಕ್ಕಿಂತ ಮೇಲ್ಪಟ್ಟವರಿಗಾಗಿ ಇರುವ ಯೋಜನೆ ಇದಾಗಿದೆ. ಖಾತೆ ತೆರೆದ ದಿನಾಂಕದಿಂದ 5 ವರ್ಷಗಳ ನಂತರ, ಮೊತ್ತವನ್ನು ಠೇವಣಿ ಇಡಬೇಕು. ಈ ಅವಧಿಯನ್ನು 3 ವರ್ಷಗಳಿಗೊಮ್ಮೆ ವಿಸ್ತರಿಸಬಹುದು.
undefined
ಬ್ಯಾಂಕು ಮತ್ತು ಅಂಚೆ ಕಚೇರಿಗಳಲ್ಲಿ ಲಭ್ಯಹಿರಿಯ ನಾಗರಿಕ ಉಳಿತಾಯ ಯೋಜನೆ ಅಂಚೆ ಕಚೇರಿಯ ಹೊರತಾಗಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳಲ್ಲಿ ಲಭ್ಯ. ಸರ್ಕಾರಿ ಬೆಂಬಲಿತ ಯೋಜನೆಯಾಗಿರುವುದರಿಂದ, ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳಲ್ಲಿ SCSS ಒಂದೇ ರೀತಿಯ ನಿಯಮಗಳು ಅನ್ವಯವಾಗುತ್ತವೆ.
undefined
ಬಡ್ಡಿದರ -2019 ರ ಜನವರಿಯಿಂದ ಮಾರ್ಚ್‌ವರೆಗೆ SCSS ಬಡ್ಡಿದರವನ್ನು ಶೇಕಡಾ 8.6 ಕ್ಕೆ ನಿಗದಿಪಡಿಸಲಾಗಿತ್ತು, ಆದರೆ ಈಗ ಅದು 7.4 ಶೇಕಡಾ ಬಡ್ಡಿ ದರವನ್ನು ಹೊಂದಿದೆ. ಬೇರೆ ಯಾವುದೇ ಉಳಿತಾಯ ಯೋಜನೆಯಲ್ಲಿಯೂಇಷ್ಟು ಹೆಚ್ಚು ಇಂಟರೆಸ್ಟ್‌ ಸಿಗುವುದಿಲ್ಲ.
undefined
55ನೇ ವಯಸ್ಸಿನಲ್ಲಿಯೂ ಹೂಡಿಕೆ ಮಾಡಬಹುದುಪೋಸ್ಟ್ ಆಫೀಸ್ ಹಿರಿಯ ನಾಗರಿಕ ಉಳಿತಾಯ ಯೋಜನೆ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ನಿವೃತ್ತರಿಗೆ ಮೀಸಲಾಗಿತ್ತಾದರೂ, 55 ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಿದವರು ಸಹ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
undefined
ನೀವು ಎಷ್ಟು ಹೂಡಿಕೆ ಮಾಡಬಹುದುಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ ಕನಿಷ್ಠ 1000 ರೂ ಮತ್ತು ಗರಿಷ್ಠ 15 ಲಕ್ಷ ರೂ ಸೇವ್‌ ಮಾಡುವ ಅವಕಾಶವಿದೆ. ಈ ಯೋಜನೆಯಡಿ ಒಂದು ಲಕ್ಷ ರೂಪಾಯಿಗಿಂತ ಕಡಿಮೆ ಮೊತ್ತವನ್ನು ನಗದು ರೂಪದಲ್ಲಿ ಜಮಾ ಮಾಡಬಹುದು. ಒಂದು ಲಕ್ಷಕ್ಕಿಂತ ಹೆಚ್ಚು ಠೇವಣಿ ಇಡಲು, ಚೆಕ್ ಮತ್ತು ಡಿಮ್ಯಾಂಡ್‌ ಡ್ರಾಫ್ಟ್‌ ಬಳಸಬೇಕು.
undefined
ತೆರಿಗೆ ವಿನಾಯಿತಿ -ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80ಸಿ ಅಡಿಯಲ್ಲಿ, ಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತದ ಮೇಲೆ ಆದಾಯ ತೆರಿಗೆಲಾಭವನ್ನು ಕಡಿತಗೊಳಿಸಲಾಗುತ್ತದೆ. ಬಡ್ಡಿಗೆ ಯಾವುದೇ ತೆರಿಗೆ ಇಲ್ಲ. ಹಣಕಾಸಿನ ವರ್ಷದಲ್ಲಿ ಬಡ್ಡಿ ಮೊತ್ತವು 50 ಸಾವಿರ ರೂಪಾಯಿಗಳಿಗಿಂತ ಹೆಚ್ಚಿದ್ದರೆ, ಗಳಿಸಿದ ಬಡ್ಡಿಗೆ TDSಕಡಿತಗೊಳಿಸಲಾಗುತ್ತದೆ. SCSSನಲ್ಲಿನ ಹೂಡಿಕೆಯ ಮೇಲಿನ ಟಿಡಿಎಸ್ ಕಡಿತದ ಮಿತಿ 2020-21 ರಿಂದ ಅನ್ವಯಿಸುತ್ತದೆ.
undefined
ಖಾತೆ ತೆರೆಯುವುದು ಹೇಗೆಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ ಯಾವುದೇ ಅಂಚೆ ಕಚೇರಿಯಲ್ಲಿ ಬೇಕಾದರೂ ಖಾತೆ ತೆರೆಯಬಹುದು. ಪ್ರಸ್ತುತ, ಈ ಖಾತೆಯನ್ನು ಆನ್‌ಲೈನ್‌ನಲ್ಲಿ ತೆರೆಯಲು ಯಾವುದೇ ಸೌಲಭ್ಯವಿಲ್ಲ. ಇದಕ್ಕಾಗಿ SCSS ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅಂಚೆ ಕಚೇರಿಗೇ ಸಲ್ಲಿಸಬೇಕು.
undefined
ಯಾವ ದಾಖಲೆಗಳು ಅವಶ್ಯಕಖಾತೆ ತೆರೆಯಲು ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅಗತ್ಯ. ಸಂಗಾತಿಯೊಂದಿಗೆ ಜಂಟಿ ಖಾತೆ ತೆರೆಯುವಾಗ ಸಂಗಾತಿಹೆಸರು, ವಯಸ್ಸು ಮತ್ತು ವಿಳಾಸವನ್ನು ನಮೂದಿಸಬೇಕಾಗುತ್ತದೆ. ಇದರೊಂದಿಗೆ, ನಾಮಿನಿಯ ಹೆಸರು, ವಯಸ್ಸು ಮತ್ತು ವಿಳಾಸವನ್ನು ನಮೂದಿಸಬೇಕಾಗುತ್ತದೆ. ನಾಮಿನಿ ಒಂದಕ್ಕಿಂತ ಹೆಚ್ಚು ಇದ್ದರೆ, ಎಲ್ಲಾ ವೈಯಕ್ತಿಕ ಮಾಹಿತಿಯನ್ನು ನೀಡಬೇಕಾಗುತ್ತದೆ.
undefined
ಮುಕ್ತಾಯಗೊಳ್ಳುವ ಮೊದಲೇ ಠೇವಣಿಹಿಂಪಡೆಯಬಹುದುಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ ಮುಕ್ತಾಯಕ್ಕೆ ಮುಂಚಿತವಾಗಿ ಹಣವನ್ನು ಹಿಂತೆಗೆದುಕೊಳ್ಳಲು ಅನುಮತಿಸಲಾಗಿದೆ, ಆದರೆ ಖಾತೆಯನ್ನು ತೆರೆದ ದಿನಾಂಕದಿಂದ 2 ವರ್ಷಗಳು ಪೂರ್ಣಗೊಳ್ಳುವ ಮೊದಲು ಯೋಜನೆಯನ್ನು ಮುಕ್ತಾಯಗೊಳಿಸಿದರೆ 5% ಠೇವಣಿಯನ್ನು ದಂಡವಾಗಿ ಕಡಿತಗೊಳಿಸಲಾಗುತ್ತದೆ. ಅದೇ ಸಮಯದಲ್ಲಿ, ಠೇವಣಿ ಮೊತ್ತದ 1% ಅನ್ನು 2 ವರ್ಷದಿಂದ 5 ವರ್ಷಗಳ ನಡುವೆ ಯೋಜನೆಯಿಂದ ನಿರ್ಗಮಿಸುವಾಗ ದಂಡವಾಗಿ ಕಡಿತಗೊಳಿಸಲಾಗುತ್ತದೆ.
undefined
ಪೋಸ್ಟ್ ಆಫೀಸ್ ಮಾಸಿಕ ಹೂಡಿಕೆ ಯೋಜನೆಯಲ್ಲಿ ಪ್ರತಿ ತಿಂಗಳು ಪೇಮೆಂಟ್‌ಅನ್ನು ಸಹ ತೆಗೆದುಕೊಳ್ಳಬಹುದು. ಆದಾಗ್ಯೂ, ಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ, ಖಾತೆಯಲ್ಲಿನ ಮೊತ್ತವನ್ನು ಸಂಯುಕ್ತ (ಕಪೌಂಡ್‌) ರೂಪದಲ್ಲಿ ಜಮಾ ಮಾಡಲಾಗುತ್ತದೆ ಮತ್ತು ಪಾವತಿ (ಪೇಮೆಂಟ್‌) ವಾರ್ಷಿಕವಾಗಿರುತ್ತದೆ. ಈ ಪಾವತಿಖಾತೆಯನ್ನು ತೆರೆದ ಅಂಚೆ ಕಚೇರಿ ಖಾತೆಯಲ್ಲಿ ಸ್ವಯಂಚಾಲಿತವಾಗಿ ಜಮಾ ಮಾಡಲಾಗುತ್ತದೆ. ಹೂಡಿಕೆಯ ಮೊತ್ತಕ್ಕೆ ಅನುಗುಣವಾಗಿ ಪಾವತಿಗಳನ್ನು ಮಾಡಲಾಗುತ್ತದೆ.
undefined
ಪಾವತಿ ಹೇಗೆ?ಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ, ಖಾತೆಯ ಮೊತ್ತವನ್ನು ಕಾಂಪೌಂಡ್ರೂಪದಲ್ಲಿ ಜಮಾ ಮಾಡಲಾಗುತ್ತದೆ ಮತ್ತು ಪಾವತಿ ವಾರ್ಷಿಕವಾಗಿರುತ್ತದೆ. ಈ ಪಾವತಿ ಖಾತೆಯನ್ನು ತೆರೆದ ಅಂಚೆ ಕಚೇರಿ ಖಾತೆಯಲ್ಲಿ ಸ್ವಯಂಚಾಲಿತವಾಗಿ ಜಮಾ ಮಾಡಲಾಗುತ್ತದೆ. ಹೂಡಿಕೆಮೊತ್ತಕ್ಕೆ ಅನುಗುಣವಾಗಿ ಪಾವತಿಗಳನ್ನು ಮಾಡಲಾಗುತ್ತದೆ.
undefined
click me!