ಮಲ್ಲಿಗೆ ಗಿಡದಲ್ಲಿ ಹೂಗಳು ಕಡಿಮೆಯಾದರೆ ಮಣ್ಣಿನ pH ಮಟ್ಟ ಮತ್ತು ಪೋಷಕಾಂಶಗಳ ಬಗ್ಗೆ ಗಮನಹರಿಸಬೇಕು.3 ಪದಾರ್ಥ ಬಳಸಿ ಮಣ್ಣಿನ ಫಲವತ್ತತೆ ಹೆಚ್ಚಿಸಿ, ಸರಿಯಾದ ಪ್ರಮಾಣದಲ್ಲಿ ನೀರು ಹಾಕುವುದು ಹೂವು ಹೆಚ್ಚಿಸಲು ಸಹಾಯ ಮಾಡುತ್ತದೆ.
ಒಂದು ಬಾರಿ ಮಲ್ಲಿಗೆ ಬಂದ ನಂತರ ಗಿಡದಲ್ಲಿ ಹೂಗಳು ಬರೋದು ಸಂಪೂರ್ಣವಾಗಿ ನಿಂತು ಹೋಗುತ್ತದೆ. ನೋಡಿದ್ರೆ ಗಿಡ ಚೆನ್ನಾಗಿ ಬೆಳೆದಿರುತ್ತದೆ. ಆದ್ರೆ ಹೂಗಳ ಸಂಖ್ಯೆ ಸಂಪೂರ್ಣ ಕಡಿಮೆಯಾಗಿರುತ್ತದೆ. ಈ ಸಂದರ್ಭದಲ್ಲಿ ಕೆಲವೊಂದು ಗಾರ್ಡನಿಂಗ್ ಉಪಾಯಗಳನ್ನು ಬಳಸಬೇಕು. ಇದರಿಂದ ಗಿಡದ ತುಂಬೆಲ್ಲಾ ಮಲ್ಲಿಗೆ ಹೂ ಸಿಗುತ್ತದೆ.
25
ಮಣ್ಣಿನ pH ಮಟ್ಟ
ಮಲ್ಲಿಗೆ ಗಿಡ ಹೂ ಬಿಡಬೇಕಾದ್ರೆ ಮಣ್ಣು ಕೆಲವೊಂದು ಪೋಷಕಾಂಶಗಳನ್ನು ಹೊಂದಿರಬೇಕಾಗುತ್ತದೆ. ಮಲ್ಲಿಗೆ ಗಿಡ ಬೆಳೆಯುವ ಮಣ್ಣಿನ pH ಮಟ್ಟ 5.5 ರಿಂದ 7.0 ರ ಒಳಗಿರೋದು ಉತ್ತಮ ಎಂದು ಪರಿಗಣಿಸಲಾಗುತ್ತದೆ. ಈ pH ಮಟ್ಟ ಕಡಿಮೆಯಾದ್ರೆ ಹೂಗಳು ಬಿಡೋದು ಭಾಗಶಃ ಅಥವಾ ಸಂಪೂರ್ಣ ಕಡಿಮೆಯಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಏನು ಮಾಡಬೇಕು ಎಂದು ನೋಡೋಣ ಬನ್ನಿ.
35
ಮಣ್ಣಿನ ಫಲವತ್ತತೆಗೆ ಮೂರು ವಸ್ತುಗಳು
ಮಣ್ಣಿನ ಫಲವತ್ತತೆ ಹೆಚ್ಚಿಸಲು ತಿಂಗಳಿಗೊಮ್ಮೆ ಒಂದು ಗ್ಲಾಸ್‌ನಷ್ಟು ಹುಳಿ ಮಜ್ಜಿಗೆ, ಒಂದು ಟೀ ಸ್ಪೂನ್ ಸುಣ್ಣದ ಪುಡಿ ಮತ್ತು ಅರ್ಧ ಟೀ ಸ್ಪೂನ್‌ನಷ್ಟು ಅರಿಶಿನ ಪುಡಿ ಸೇರಿಸಿಕೊಳ್ಳಬೇಕು. ಮಣ್ಣು ಸಡಿಲಗೊಳಿಸಿ ಈ ಮೂರು ವಸ್ತುಗಳನ್ನು ಸೇರಿಸಿಕೊಳ್ಳಿ. ಆನಂತರ ಇವುಗಳ ಮೇಲೆ ತೆಳುವಾಗಿ ಮಣ್ಣು ಹರಡಿ, ನೀರನ್ನು ಚುಮುಕಿಸಬೇಕು.
ಮಲ್ಲಿಗೆ ಗಿಡಕ್ಕೆ ಹೆಚ್ಚು ನೀರಾದ್ರೆ ಮಣ್ಣಿನಲ್ಲಿರುವ ಅಂಶಗಳು ಹರಿದು ಹೋಗುತ್ತವೆ. ಮಲ್ಲಿಗೆ ಬೇರುಗಳು ಮೃದುವಾಗಿದ್ದು, ಹೆಚ್ಚು ನೀರು ಆದ್ರೆ ಕೊಳೆತು ಕಾಂಡ ದುರ್ಬಲಗೊಳ್ಳುತ್ತವೆ. ಇದರಿಂದ ಮಲ್ಲಿಗೆ ಬುನಾದಿಯೇ ನಾಶವಾಗುತ್ತದೆ. ಬುಡಭಾಗದ ಮಣ್ಣು ಒಣಗಿದ್ರೆ ಮಾತ್ರ ಹಂತ ಹಂತವಾಗಿ ನೀರು ಹಾಕಬೇಕು. ಮಣ್ಣಿನಲ್ಲಿ ಕೊಂಚ ಮರಳನ್ನು ಸೇರಿಸಿಕೊಳ್ಳೋದು ಮಲ್ಲಿಗೆ ಗಿಡಕ್ಕೆ ಸಹಾಯ ಮಾಡುತ್ತೆ.
55
ಪೊಟ್ಯಾಷಿಯಂ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ
ಮಲ್ಲಿಗೆಗೆ ಹೆಚ್ಚು ಪ್ರಮಾಣದಲ್ಲಿ ಹೂಗಳು ಅರಳಲು ಪೊಟ್ಯಾಷಿಯಂ ಬೇಕಾಗುತ್ತದೆ. ಎಲೆಗಳು ಹಳದಿಯಾಗುವುದನ್ನು ತಡೆಯಲು ಕ್ಯಾಲ್ಸಿಯಂ ಹಾಗೂ ಮೆಗ್ನೀಸಿಯಮ್ ಅಗತ್ಯ. ಹೊಸ ಮೊಗ್ಗು ಮೂಡಲು ಮತ್ತು ಬೇರು ಬಲಗೊಳ್ಳಲು ರಂಜಕ ಅತ್ಯಗತ್ಯ. ಹಾಗಾಗಿ ಈ ಅಂಶಗಳು ಮಣ್ಣಿನಲ್ಲಿರುವಂತೆ ನೋಡಿಕೊಳ್ಳಿ. ಇಂದು ಮಾರುಕಟ್ಟೆಯಲ್ಲಿ ಸಾವಯವ ಗೊಬ್ಬರಗಳು ಸಿಗುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.