ಬೆಂಗಳೂರಿನಲ್ಲಿ ಕೆಲಸ ಮಾಡಿದ್ರೆ ಹೆಚ್ಚಿನ ಹಣ ಸಿಗುತ್ತಾ? ಊರಿನಲ್ಲಿದ್ರೆ ಜಾಸ್ತಿ ಹಣ ಉಳಿಸಬಹುದಾ?

Published : Jul 06, 2026, 06:58 PM IST

ಉದ್ಯೋಗ, ಉತ್ತಮ ಸಂಬಳಕ್ಕಾಗಿ ಬೆಂಗಳೂರಿಗೆ ವಲಸೆ ಬಂದ ಕಾರ್ಪೊರೇಟ್ ಕೆಲಸ ಮಾಡುತ್ತಿರುವ ದಂಪತಿಯೊಬ್ಬರು, ಸಣ್ಣ ನಗರಗಳಲ್ಲಿ ಸಿಗುವ ನೆಮ್ಮದಿಯ ಜೀವನದ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

PREV
13
ಬದಲಾದ ಆಲೋಚನೆ

ಬೆಂಗಳೂರಿಗೆ ಬಂದ ಹೊಸದರಲ್ಲಿ ದೊಡ್ಡ ಸಂಬಳ, ಉತ್ತಮ ಕೆಲಸ, ಆಧುನಿಕ ಜೀವನಶೈಲಿ ಸಿಕ್ಕಿದ್ದಕ್ಕೆ ಅವರು ತುಂಬಾ ಸಂತೋಷಪಟ್ಟಿದ್ದರು. ಇದು ಒಂದು ಕನಸು ನನಸಾದಂತೆ ಇತ್ತು. 

ಕೆಲವು ವರ್ಷಗಳ ನಂತರ ಅವರ ಆದ್ಯತೆಗಳು ಬದಲಾದವು. ಪೋಷಕರಿಂದ ದೂರವಿರುವುದು, ಬೆಂಗಳೂರಿನ ಅತಿಯಾದ ಟ್ರಾಫಿಕ್, ರೆಸ್ಟೋರೆಂಟ್‌ಗಳ ಬುಕಿಂಗ್ ಜಂಜಾಟ, ದುಬಾರಿ ವೆಚ್ಚಗಳು ಅವರಿಗೆ ಬೇಸರ ತರಿಸತೊಡಗಿದವು.

23
ಪ್ರಸ್ತುತ ಗೊಂದಲ

ಈಗ ಅವರಿಗೆ ಬೆಂಗಳೂರು ಸೌಲಭ್ಯಗಳಿಗಿಂತ ಸಣ್ಣ ನಗರಗಳಲ್ಲಿ ಸಿಗುವ 'ಶಾಂತಿ ಮತ್ತು ನೆಮ್ಮದಿ' ದೊಡ್ಡದಾಗಿ ಕಾಣಿಸುತ್ತಿದೆ. ಆದರೆ, "ಸಣ್ಣ ನಗರಕ್ಕೆ ಹೋದರೆ ಬೆಂಗಳೂರಿನಂತೆ ಒಳ್ಳೆಯ ಕೆರಿಯರ್ ಮತ್ತು ಆದಾಯ ಉಳಿಸಿಕೊಳ್ಳಲು ಸಾಧ್ಯವೇ?" ಎಂಬ ಗೊಂದಲ ಅವರಿಗಿದೆ.

33
ಜನರ ಪ್ರತಿಕ್ರಿಯೆಗಳು

ಕೆಲವರು ದಂಪತಿಯ ಆಲೋಚನೆಯನ್ನು ಒಪ್ಪುತ್ತಾ, "ದೂರದ ಬೆಟ್ಟ ಕಣ್ಣಿಗೆ ನುಣುಪು" ಎಂಬಂತೆ ಸ್ವಾತಂತ್ರ್ಯ-ಅವಕಾಶಗಳು ಬೇಕೋ ಅಥವಾ ನೆಮ್ಮದಿ ಬೇಕೋ ಎಂದು ಆಯ್ಕೆ ಮಾಡುವುದು ಕಷ್ಟ ಎಂದಿದ್ದಾರೆ.

ವಯಸ್ಸಾಗುತ್ತಾ ಹೋದಂತೆ ಉತ್ತಮ ಆಸ್ಪತ್ರೆ, ಶಾಲೆ, ಏರ್‌ಪೋರ್ಟ್ ಮತ್ತು ಮೂಲಸೌಕರ್ಯಗಳು ಬೇಕಾಗುತ್ತವೆ, ಇವು ದೊಡ್ಡ ನಗರಗಳಲ್ಲೇ ಸಿಗುತ್ತವೆ ಎಂದು ನೆನಪಿಸಿದ್ದಾರೆ. ನೆಮ್ಮದಿಗಾಗಿ ನಗರದ ಹೊರವಲಯದಲ್ಲಿ ಮನೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.

ಕೆಲವರು ಬೆಂಗಳೂರಿಗಿಂತ ಕೊಂಚ ನಿಧಾನಗತಿಯ ಜೀವನವಿರುವ ಹಾಗೂ ಟೆಕ್ ಉದ್ಯೋಗಗಳೂ ಸಿಗುವ 'ಪುಣೆ'ಯಂತಹ ನಗರಗಳು ಉತ್ತಮ ಪರ್ಯಾಯ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories