ಕುಕ್ಕರ್ ಕೂಗುತ್ತಿದ್ದಂತೆ ಒಳಗಡೆ ನೀರೆಲ್ಲಾ ಹೊರಚೆಲ್ಲಿ ಕಿರಿಕಿರಿ ಆಗುತ್ತಿದೆಯಾ? ಈ ಟ್ರಿಕ್‌ ಬಳಸಿ, ಸ್ಟಾಪ್ ಆಗುತ್ತೆ!

Published : Jul 26, 2026, 08:35 PM IST

ಈ ಪುಟ್ಟ ಬದಲಾವಣೆಗಳನ್ನು ನಿಮ್ಮ ದೈನಂದಿನ ಅಡುಗೆಯಲ್ಲಿ ರೂಢಿಸಿಕೊಂಡರೆ, ಕುಕ್ಕರ್ ಸೋರಿಕೆಯ ತಲೆನೋವಿಲ್ಲದೆ ಆರಾಮವಾಗಿ ಅಡುಗೆ ಮಾಡಬಹುದು. ಅಡುಗೆ ಮನೆ ಕೂಡ ಶುಚಿಯಾಗಿರುತ್ತದೆ! ಜೊತೆಗೆ, ನಿಮ್ಮ ಮನೆ ಹಾಗೂ ಮನಸ್ಸಿಗೆ ಆಗುವ ಕಿರಿಕಿರಿಯೂ ತಪ್ಪುತ್ತದೆ.

PREV
17

ಕುಕ್ಕರ್ ಕೂಗುವಾಗ ನೀರು ಹೊರಚೆಲ್ಲುತ್ತಿದೆಯೇ? ಹಾಗಾದ್ರೆ ಹೀಗೆ ಮಾಡಿ!

ಪ್ರತಿ ಮನೆಯ ಅಡುಗೆ ಕೋಣೆಯಲ್ಲೂ ಅತಿ ಹೆಚ್ಚು ಬಳಕೆಯಾಗುವ ವಸ್ತು ಎಂದರೆ ಅದು ಪ್ರೆಶರ್ ಕುಕ್ಕರ್. ಸಮಯ ಉಳಿಸಲು ಮತ್ತು ರುಚಿಕರವಾದ ಅಡುಗೆ ಮಾಡಲು ಕುಕ್ಕರ್ (Cooker) ಅನಿವಾರ್ಯ. ಆದರೆ, ಒಮ್ಮೊಮ್ಮೆ ಈ ಕುಕ್ಕರ್ ನಮಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಕುಕ್ಕರ್ ವಿಸಿಲ್ ಬಂದಾಗ ಅದರೊಳಗಿನ ನೀರು, ಬೇಳೆ ಅಥವಾ ಗಂಜಿ ಹೊರಚೆಲ್ಲಿ ಸ್ಟೌವ್ ಮತ್ತು ಅಡುಗೆ ಮನೆ ಎಲ್ಲ್ವನ್ನೂ ಗಲೀಜು ಮಾಡುತ್ತದೆ. ಇದನ್ನು ಕ್ಲೀನ್ ಮಾಡುವುದು ಅಡುಗೆ ಮಾಡುವುದಕ್ಕಿಂತ ದೊಡ್ಡ ಕೆಲಸ! ನಿಮ್ಮ ಮನೆಯಲ್ಲೂ ಇಂತಹ ಸಮಸ್ಯೆ ಎದುರಾಗುತ್ತಿದ್ದರೆ, ಅಡುಗೆ ಮನೆಯ ಕಿರಿಕಿರಿ ಆಗುತ್ತಿದ್ದರೆ ಈ ಕೆಳಗಿನ ಸರಳ ಲೈಫ್‌ಸ್ಟೈಲ್ ಟಿಪ್ಸ್ ಅನುಸರಿಸಿ.

27

1. ಗ್ಯಾಸ್ಕೆಟ್ (ರಬ್ಬರ್) ಸಡಿಲವಾಗಿದ್ದರೆ ಹೀಗೆ ಮಾಡಿ:

ಕುಕ್ಕರ್‌ನಿಂದ ನೀರು ಸೋರಲು ಪ್ರಮುಖ ಕಾರಣ ಮುಚ್ಚಳದ ರಬ್ಬರ್ ಅಥವಾ ಗ್ಯಾಸ್ಕೆಟ್ ಸಡಿಲವಾಗಿರುವುದು. ಒಂದು ವೇಳೆ ರಬ್ಬರ್ ಲೂಸ್ ಆಗಿದ್ದರೆ, ಅದನ್ನು ತಕ್ಷಣ ಬಿಗಿಗೊಳಿಸಲು ಒಂದು ಸುಲಭ ಹಾದಿಯಿದೆ. ಕುಕ್ಕರ್ ಬಳಸುವ 10 ನಿಮಿಷ ಮೊದಲು ಗ್ಯಾಸ್ಕೆಟ್ ಅನ್ನು ತೆಗೆದು ಫ್ರೀಜರ್‌ನಲ್ಲಿಡಿ ಅಥವಾ ತಣ್ಣೀರಿನಲ್ಲಿ ಹಾಕಿಡಿ. ಇದರಿಂದ ರಬ್ಬರ್ ಕುಗ್ಗುತ್ತದೆ ಮತ್ತು ಮುಚ್ಚಳಕ್ಕೆ ಸರಿಯಾಗಿ ಕುಳಿತುಕೊಳ್ಳುತ್ತದೆ. ತುರ್ತು ಸಂದರ್ಭದಲ್ಲಿ ಗ್ಯಾಸ್ಕೆಟ್ ಸುತ್ತಲೂ ಸ್ವಲ್ಪ ಗೋಧಿ ಹಿಟ್ಟನ್ನು ಹಚ್ಚಿ ಅಥವಾ ತೆಳುವಾದ ಟೇಪ್ ಸುತ್ತಿ ಲೀಕೇಜ್ ತಡೆಯಬಹುದು.

37

2. ಸೀಟಿ ಅಥವಾ ವಿಸಿಲ್ ಸ್ವಚ್ಛತೆ:

ಹಲವು ಬಾರಿ ನಾವು ಕುಕ್ಕರ್ ತೊಳೆಯುವಾಗ ವಿಸಿಲ್ ಭಾಗವನ್ನು ಸರಿಯಾಗಿ ಗಮನಿಸುವುದಿಲ್ಲ. ಸೀಟಿಯ ರಂಧ್ರದಲ್ಲಿ ಹಳೆಯ ಆಹಾರದ ಕಣಗಳು ಸಿಕ್ಕಿಹಾಕಿಕೊಂಡಿದ್ದರೆ, ಸ್ಟೀಮ್ ಸರಿಯಾಗಿ ಹೊರಬರದೆ ನೀರು ಚಿಮ್ಮಲು ಪ್ರಾರಂಭಿಸುತ್ತದೆ. ಅಡುಗೆ ಮಾಡುವ ಮುನ್ನ ಯಾವಾಗಲೂ ವಿಸಿಲ್ ರಂಧ್ರವು ಕ್ಲಿಯರ್ ಆಗಿದೆಯೇ ಎಂದು ಪರೀಕ್ಷಿಸಿ. ಅವಶ್ಯಕತೆ ಇದ್ದರೆ ಒಂದು ಸಣ್ಣ ಕಡ್ಡಿ ಅಥವಾ ಬ್ರಷ್‌ನಿಂದ ಅದನ್ನು ಸ್ವಚ್ಛಗೊಳಿಸಿ.

47

3. ಎಣ್ಣೆಯ ಚಮತ್ಕಾರ:

ಕುಕ್ಕರ್ ಮುಚ್ಚಳದ ಒಳಭಾಗದ ಅಂಚುಗಳಿಗೆ ಮತ್ತು ವಿಸಿಲ್ ಬರುವ ರಂಧ್ರದ ಸುತ್ತಲೂ ಸ್ವಲ್ಪ ಅಡುಗೆ ಎಣ್ಣೆಯನ್ನು ಹಚ್ಚಿ. ಹೀಗೆ ಮಾಡುವುದರಿಂದ ಅಡುಗೆ ಕುದಿಯುವಾಗ ನೊರೆ ಅಥವಾ ನೀರು ಮೇಲಕ್ಕೆ ಬಂದು ಹೊರಚೆಲ್ಲುವುದನ್ನು ಎಣ್ಣೆಯು ತಡೆಯುತ್ತದೆ. ಇದು ಅತ್ಯಂತ ಸರಳ ಮತ್ತು ಪರಿಣಾಮಕಾರಿ ವಿಧಾನವಾಗಿದೆ.

57

4. ನೀರಿನ ಪ್ರಮಾಣ ಮತ್ತು ಉರಿ:

ಅಡುಗೆ ಮಾಡುವ ಆತುರದಲ್ಲಿ ಕುಕ್ಕರ್ ತುಂಬಾ ನೀರು ಹಾಕುವುದು ತಪ್ಪು. ಕುಕ್ಕರ್‌ನ ಮುಕ್ಕಾಲು ಭಾಗದಷ್ಟು ಮಾತ್ರ ಆಹಾರ ಮತ್ತು ನೀರಿರಲಿ. ಅತಿ ಹೆಚ್ಚು ನೀರು ಹಾಕಿದರೆ ವಿಸಿಲ್ ಬಂದಾಗ ನೀರು ಹೊರಬರುವುದು ಸಹಜ.

67

ಅದರಂತೆ, ಆರಂಭದಲ್ಲಿ ಮಾತ್ರ ದೊಡ್ಡ ಉರಿ ಇರಲಿ, ಕುಕ್ಕರ್ ಬಿಸಿಯಾದ ಮೇಲೆ ಮಧ್ಯಮ ಉರಿಯಲ್ಲಿ (Medium Flame) ಅಡುಗೆ ಮಾಡುವುದರಿಂದ ಆಹಾರ ಸರಿಯಾಗಿ ಬೇಯುತ್ತದೆ ಮತ್ತು ಸೋರಿಕೆಯೂ ಕಡಿಮೆಯಾಗುತ್ತದೆ.

77

ಈ ಪುಟ್ಟ ಬದಲಾವಣೆಗಳನ್ನು ನಿಮ್ಮ ದೈನಂದಿನ ಅಡುಗೆಯಲ್ಲಿ ರೂಢಿಸಿಕೊಂಡರೆ, ಕುಕ್ಕರ್ ಸೋರಿಕೆಯ ತಲೆನೋವಿಲ್ಲದೆ ಆರಾಮವಾಗಿ ಅಡುಗೆ ಮಾಡಬಹುದು. ಅಡುಗೆ ಮನೆ ಕೂಡ ಶುಚಿಯಾಗಿರುತ್ತದೆ! ಜೊತೆಗೆ, ನಿಮ್ಮ ಮನೆ ಹಾಗೂ ಮನಸ್ಸಿಗೆ ಆಗುವ ಕಿರಿಕಿರಿಯೂ ತಪ್ಪುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories