ಈ ಪುಷ್ಪ ಫ್ಲವರ್‌ ಅಲ್ಲ, ಫಯರು..ಮಾತನ್ನೇ ನಿಜ ಮಾಡಿದ ನಿರ್ಮಾಪಕಿ ಪುಷ್ಪ ಅರುಣ್‌ಕುಮಾರ್‌!

Published : Feb 01, 2026, 03:34 PM IST

ನಟ ಯಶ್ ಅವರ ತಾಯಿ ಪುಷ್ಪಾ ಮತ್ತು ದೇವರಾಜ್ ನಡುವಿನ ವಿದ್ಯಾನಗರದ ಸೈಟ್ ವಿವಾದ ಮತ್ತೆ ಭುಗಿಲೆದ್ದಿದೆ. ವಿವಾದಿತ ಜಾಗದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ದೇವರಾಜ್ ಮುಂದಾದಾಗ, ಪುಷ್ಪಾ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. 

PREV
17

ನಟ ಯಶ್ ಅವರ ತಾಯಿ ಪುಷ್ಪಾ ಮತ್ತು ಜಿಪಿಎ ಹೋಲ್ಡರ್ ದೇವರಾಜ್ ನಡುವಿನ ವಿದ್ಯಾನಗರದ ಸೈಟ್ ವಿವಾದ ಶನಿವಾರ ಮತ್ತೆ ತಾರಕಕ್ಕೇರಿದೆ. ವಿವಾದಿತ ಜಾಗದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲು ದೇವರಾಜ್ ಮುಂದಾದಾಗ ಪುಷ್ಪಾ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇಬ್ಬರ ನಡುವೆ ಜಟಾಪಟಿ ನಡೆದಿದೆ.

27

ವಿಷಯ ತಿಳಿಯುತ್ತಿದ್ದಂತೆ ಎರಡೂ ಕಡೆಯ ಬೆಂಬಲಿಗರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಧ್ಯಪ್ರವೇಶಿಸಿ ಹೈಡ್ರಾಮಾವನ್ನು ಶಮನಗೊಳಿಸಿದರು.

37

ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲೇ ಕಾಮಗಾರಿ ನಡೆಸುತ್ತಿರುವುದಕ್ಕೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿ, ಕೆಲಸಗಾರರನ್ನು ವಾಪಸ್ ಕಳಿಸಿದ್ದಾರೆ.

47

ಸದ್ಯ ಕಾಂಪೌಂಡ್ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದ್ದು, ದಾಖಲೆಗಳೊಂದಿಗೆ ಪೊಲೀಸ್ ಠಾಣೆಗೆ ಬರುವಂತೆ ಇಬ್ಬರಿಗೂ ಪೊಲೀಸರು ಸೂಚನೆ ನೀಡಿದ್ದಾರೆ. ಪೊಲೀಸರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಪುಷ್ಪಾ ಅವರು ಮನೆ ಒಳಗೆ ತೆರಳಿದ್ದಾರೆ.

57

ಭಾನುವಾರ ಮತ್ತೆ ಇದೇ ವಿಚಾರವಾಗಿ ಗಲಾಟೆಯಾಗಿದೆ. ಕೋರ್ಟ್‌ಅಲ್ಲಿ ಈ ಬಗ್ಗೆ ನಮಗೆ ಆದೇಶ ಆಗಿದೆ ಎಂದು ದೇವರಾಜ್‌ ಹೇಳಿದ್ದಕ್ಕೆ, ಅದರ ಆರ್ಡರ್‌ ಕಾಪಿ ಕೊಡು ಎಂದು ಪುಷ್ಪ ವೈಲೆಂಟ್‌ ಆಗಿ ಕೇಳಿದ್ದಾರೆ.

67

ಕಾಪಿ ಕೊಡೋಕೆ ಆಗಲಿಲ್ಲ ಅಂದಾದ್ರೆ ಇಲ್ಲಿಯೇ ಜಡ್ಜ್‌ನ ಕರೆಸು ಅಂತಾ ಪುಷ್ಪ ಹೇಳಿದ್ದಾರೆ. ಇದಕ್ಕೆ ದೇವರಾಜ್‌ ಅವರು ಜಡ್ಜ್‌ ಯಾರಾದ್ರೂ ಇಲ್ಲಿಗೆ ಬರ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪುಷ್ಪ ಜೊತೆಯಲ್ಲಿದ್ದ ಇನ್ನೊಬ್ಬ ವ್ಯಕ್ತಿ, ಈ ಜಾಗ ನಿಂದು ಅಂತಾದರೆ, ಅದರ ದಾಖಲೆಗಳನ್ನ ಕೊಡು ಅಂತಾ ಕೇಳಿದ್ದಾರೆ. ಅದಕ್ಕೆ ದೇವರಾಜ್‌, ಅವರ ವಕೀಲರಿಗೆ ಈ ದಾಖಲೆ ನೀಡಿದ್ದೇನೆ ಎಂದಿದ್ದಾರೆ.

77

ನೀನೇನು ಬಿಲ್ಡಪ್‌ ತಗೊಳ್ಳೋಕೆ ಬಂದಿದ್ದೀಯ. ಯಶ್‌ ಅವರ ಅಮ್ಮ ಅಂದ್ಕೊಂಡು ಬಿಲ್ಡಪ್‌ಗೆ ಬಂದಿದ್ದೀಯಾ ಎಂದು ರಾಂಗ್‌ ಆಗಿಯೇ ಪುಷ್ಪ ಅರುಣ್‌ ಕುಮಾರ್‌ ಹೇಳಿದ್ದಾರೆ. ಇಂಥ ಕೇಸ್‌ಗಳಲ್ಲಿ ನೀವು ಕ್ಯಾಮೆರಾ ಹಿಡೀತೀರೋ ಇಲ್ಲ, ಪೇಪರ್‌ ಕೇಳ್ತಿರೋ ಎಂದು ಮಾಧ್ಯಮದವರಿಗೆ ಪುಷ್ಪ ಅರುಣ್‌ಕುಮಾರ್‌ ಪ್ರಶ್ನಿಸಿದ್ದಾರೆ.

Read more Photos on
click me!

Recommended Stories