ಯಾದಗಿರಿ: 1 ಲಕ್ಷ ಲಂಚ ಪಡೆಯುತ್ತಿದ್ದ ಸಿಪಿಐ ವೀರಣ್ಣ ಲೋಕಾಯುಕ್ತ ವಶಕ್ಕೆ.
ಸುಮಾರು 1 ಲಕ್ಷ ರೂಪಾಯಿ ಪಡೆಯುತ್ತಿರುವ ಸಂದರ್ಭದಲ್ಲಿ ಗುರುಮಠಕಲ್ ಸಿಪಿಐ ವೀರಣ್ಣ ಎಸ್. ದೊಡ್ಡಮನಿ ಎಂಬವರನ್ನು ಲೋಕಾಯಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣವೊಂದರಲ್ಲಿ ಆರೋಪಿಗಳನ್ನು ಬಂಧಿಸಲು ವೀರಣ್ಣ ದೊಡ್ಡಮನಿ ಬೇಡಿಕೆ ಇರಿಸಿರುವ ಆರೋಪ ಕೇಳಿ ಬಂದಿದೆ.
23
ಲಂಚಕ್ಕೆ ಬೇಡಿಕೆ
ವೀರಣ್ಣ ಎಸ್.ದೊಡ್ಡಮನಿ ಲಂಚಕ್ಕೆ ಬೇಡಿಕೆಯಿಟ್ಟಿರುವ ಬಗ್ಗೆ ಆರೋಪಿಸಿ ಆನಂದ್ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಶುಕ್ರವಾರ ರಾತ್ರಿ ಗುರುಮಠಕಲ್ ಪಟ್ಟಣದ ಸಿಪಿಐ ಕ್ವಾಟರ್ಸ್‌ನಲ್ಲಿ ಲಂಚ ಪಡೆಯುವಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
33
ಲೋಕಾಯುಕ್ತ ವಶಕ್ಕೆ
ಸದ್ಯ ಲೋಕಾಯುಕ್ತ ಪೊಲೀಸರು ವೀರಣ್ಣ ಎಸ್. ದೊಡ್ಡಮನಿ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಲೋಕಾಯುಕ್ತ ಡಿವೈಎಸ್‌ಪಿ ಜೆ.ಹೆಚ್. ಇನಾಮದಾರ, ಪಿಐ ಸಿದ್ದರಾಯ ಬೆಳ್ಳೂರಗಿ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು.