ಮೈಸೂರು-ಅಜ್ಮೀರ್ ಪ್ರಯಾಣಿಕರಿಗೆ ಗುಡ್‌ನ್ಯೂಸ್: ಕೊಟ್ಟೂರು ಮೂಲಕ ಈ ಹೊಸ ಎಕ್ಸ್‌ಪ್ರೆಸ್ ರೈಲು!

Published : Sep 04, 2026, 04:48 PM IST

ಕೊಟ್ಟೂರು ಭಾಗದ ಸಾರ್ವಜನಿಕರ ಬಹುದಿನದ ಬೇಡಿಕೆಯಾಗಿದ್ದ ಮೈಸೂರು-ಅಜ್ಮೀರ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸುವ ಘೋಷಣೆ ಪ್ರಕಟವಾಗಿದೆ. ಮೈಸೂರಿನಿಂದ ಹೊರಡುವ ರೈಲು ಕೊಟ್ಟೂರು ರೈಲ್ವೆ ನಿಲ್ದಾಣಕ್ಕೆ ತಲುಪಿ ಅಜ್ಮೀರ್‌ನತ್ತ ಸಂಚರಿಸಲಿದೆ.

PREV
14
ಜನರಲ್ಲಿ ಸಂತಸ

ಕೊಟ್ಟೂರು (ಸೆ.04): ಕೊಟ್ಟೂರು ಭಾಗದ ಸಾರ್ವಜನಿಕರ ಬಹುದಿನದ ಬೇಡಿಕೆಯಾಗಿದ್ದ ಮೈಸೂರ ಅಜ್ಮೀರ್‌ ನಡುವಿನ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸುವ ಘೋಷಣೆ ಪ್ರಕಟಿಸಿದ್ದರಿಂದ ಜನರಲ್ಲಿ ಸಂತಸ ಮೂಡಿದೆ.

24
ಕೊಟ್ಟೂರು ರೈಲ್ವೆ ನಿಲ್ದಾಣ

ಮೈಸೂರಿನಿಂದ ಸೆ.5ರ ಶನಿವಾರ ಬೆಳಗ್ಗೆ 8 ಗಂಟೆಗೆ ಬಿಟ್ಟು ಕೊಟ್ಟೂರು ರೈಲ್ವೆ ನಿಲ್ದಾಣವನ್ನು 3.15ಕ್ಕೆ ತಲುಪಿ 3.17ಕ್ಕೆ ಅಜ್ಮೀರ್‌ನತ್ತ ತುಂಗಭದ್ರ ಡ್ಯಾಂ, ಕೊಪ್ಪಳ, ಹುಬ್ಬಳ್ಳಿ ಮತ್ತಿತರ ಸೀಮಿತ ಮಾರ್ಗಗಳ ಮೂಲಕ ತೆರಳಲಿದೆ.

34
ಈ ನಿಲ್ದಾಣಗಳ ಮೂಲಕ ಮೈಸೂರು

ಈ ರೈಲು ವಾರದಲ್ಲಿ ಒಮ್ಮೆ ಮಾತ್ರ ಸಂಚರಿಸಲಿದೆ. ಅಜ್ಮೀರನ್ನು ಬೆಳಗ್ಗೆ 7 ಗಂಟೆಗೆ ಬಿಟ್ಟು ಕೊಟ್ಟೂರನ್ನು ಮಧ್ಯಾಹ್ನ 12.30ಕ್ಕೆ ತಲುಪಿ, ದಾವಣಗೆರೆ, ಚಿಕ್ಕಜಾಜೂರು, ಅರಸಿಕೆರೆ, ಕಡೂರು, ಹಾಸನ, ಹೊಳೆನರಸಿಪುರ ಮತ್ತಿತರ ನಿಲ್ದಾಣಗಳ ಮೂಲಕ ಮೈಸೂರು ತಲುಪಲಿದೆ.

44
ಕೊಟ್ಟೂರು ಮೂಲಕ ಘೋಷಣೆ

ಈ ಹಿಂದೆ ವಾರದಲ್ಲಿ ಒಂದು ದಿನ ಸಂಚರಿಸುವ ಮೈಸೂರು ಅಜ್ಮೀರ ಕೊಟ್ಟೂರು ಮೂಲಕ ಸಂಚರಿಸುವ ಘೋಷಣೆ ಮಾಡಿತ್ತು. ಆದರೆ ಕೊಟ್ಟೂರು ಮತ್ತಿತರ ಮಾರ್ಗದಲ್ಲಿ ವಿದ್ಯುತ್‌ ಲೈನ್‌ ಕಾಮಗಾರಿ ಸಾಗಿದ್ದರಿಂದ ಘೋಷಿತ ರೈಲು ಇದುವರೆಗೆ ಚಾಲನೆ ಪಡೆದಿರಲಿಲ್ಲ.

Read more Photos on
click me!

Recommended Stories