Kodagu: ಮಳೆ ಕೊರತೆಯಿಂದ ಕೊಳೆರೋಗದ ಕರಾಳ ಛಾಯೆ; ಆತಂಕದಲ್ಲಿ ಕಾಫಿ ಬೆಳೆಗಾರರು, ಪರಿಹಾರಕ್ಕಾಗಿ ಆಗ್ರಹ

Published : Sep 03, 2026, 03:26 PM IST

ಕೊಡಗಿನಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೂ, ಕಾಫಿ ಬೆಳೆಗೆ ಕೊಳೆರೋಗ ವ್ಯಾಪಕವಾಗಿ ಹರಡಿದೆ. ಇದರಿಂದ ಕಾಫಿ ಕಾಯಿಗಳು ಕೊಳೆತು ಉದುರುತ್ತಿದೆ. ಈ ಅನಿರೀಕ್ಷಿತ ರೋಗದಿಂದ ಶೇ. 40-50ರಷ್ಟು ಬೆಳೆ ನಷ್ಟ ಅನುಭವಿಸುತ್ತಿರುವ ಕಾಫಿ ಬೆಳೆಗಾರರು ಸರ್ಕಾರದ ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದಾರೆ.

PREV
16
ಕಾಫಿನಾಡಲ್ಲಿ ಕೊಳೆರೋಗದ ಕರಾಳ ಛಾಯೆ

ಕೊಡಗು: ವಾಣಿಜ್ಯ ಬೆಳೆಯಾಗಿರುವ ಕಾಫಿಗೆ ಉತ್ತಮವಾದ ಮಳೆ ಬೇಕು ಎನ್ನುವುದೇನೋ ಸರಿ. ಆದರೆ ಎಲ್ ನಿನೋದಿಂದಾಗಿ ರಾಜ್ಯದಲ್ಲಿ ಅಷ್ಟೇ ಅಲ್ಲ, ಕೊಡಗು ಜಿಲ್ಲೆಯಲ್ಲೂ ಮಳೆಯ ತೀವ್ರ ಕೊರತೆ ಎದುರಾಯಿತು. ಮಳೆ ಅಷ್ಟು ಕೊರತೆ ಆದರೂ ಕೂಡ ಎತ್ತೇಚ್ಛವಾಗಿ ಮಳೆ ಸುರಿದಾಗ ಕಾಫಿಗೆ ಎದುರಾಗುವ ಕೊಳೆರೋಗ ಈ ಬಾರಿಯೂ ಬಾಧಿಸುತ್ತಿದೆ. ಇದು ಕೊಡಗಿನ ಕಾಫಿ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ.

26
ಜಿಲ್ಲೆಯಲ್ಲಿ ಕೇವಲ 1420 ಮಿಮೀ ಮಳೆ

ಹೌದು ಕೊಡಗು ಜಿಲ್ಲೆಯಲ್ಲಿ ಪ್ರತಿ ವರ್ಷ ಸಾಮಾನ್ಯವಾಗಿ ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಮೊದಲ ವಾರದೊಳಗೆ 2600 ಮಿಲಿ ಮೀಟರ್ ವರೆಗೆ ಮಳೆ ಸುರಿಯುತಿತ್ತು. ಆದರೂ ಕಾಫಿಗೆ ಅಷ್ಟೊಂದು ಕೊಳೆರೋಗ ಬಾಧಿಸಿರಲಿಲ್ಲ. ಈ ಬಾರಿ ಇದುವರೆಗೆ ಜಿಲ್ಲೆಯಲ್ಲಿ ಮಳೆ ಸುರಿದಿದ್ದೇ ಕೇವಲ 1420 ಮಿಲಿ ಮೀಟರ್ ಮಳೆ ಅಷ್ಟೇ. ಅದಾಗಲೇ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಕಾಫಿಗೆ ಕೊಳೆರೋಗ ಬಾಧಿಸುತ್ತಿದೆ. ಅದರಲ್ಲೂ ಮಡಿಕೇರಿ, ಸೋಮವಾರಪೇಟೆ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ವಿರಾಜಪೇಟೆ ತಾಲ್ಲೂಕಿನ ಕೆಲಭಾಗಗಳಲ್ಲಿ ಕಾಫಿಗೆ ಕೊಳೆರೋಗ ಎದುರಾಗಿದೆ.

36
ಕಾಫಿ ಗಿಡಗಳೇ ಒಣಗುತ್ತಿವೆ

ಪ್ರತಿ ವರ್ಷದ ಮಳೆಗಿಂತ ಅರ್ಧದಷ್ಟು ಮಳೆಗೆ ಕಾಫಿ ಕೊಳೆರೋಗ ಬಂದಿರುವುದು ಬೆಳೆಗಾರರಿಗೆ ಅಚ್ಚರಿ ಮತ್ತು ಆತಂಕ ಮೂಡಿಸಿದೆ. ಕಾಫಿ ಬೀಜಗಳು ಇನ್ನೂ ಬಲಿಯುವ ಮುನ್ನವೇ ಗಿಡಗಳಲ್ಲಿಯೇ ಕೊಳೆತು ಉದುರಲಾಂಭಿಸಿದೆ. ಬಹುತೇಕ ಗಿಡಗಳಲ್ಲಿ ಕಾಫಿ ಉದುರಿ ಹೋಗಿ ಬರೀ ಗಿಡಗಳಷ್ಟೇ ಉಳಿದಿವೆ. ಇನ್ನು ಕೆಲವು ಗಿಡಗಳಲ್ಲಿ ಎಲೆಗಳ ಸಹಿತ ಉದುರಿ ಹೋಗಿ ಗಿಡಗಳೇ ಒಣಗಿ ಹೋಗುತ್ತಿವೆ. ಶೇಕಡ 40 ರಿಂದ 50 ರಷ್ಟು ಕಾಫಿ ಕಾಯಿಗಳು ಕರಗಿ ಉದುರಿ ಹೋಗಿದ್ದು ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತೆ ಆಗಿದೆ.

46
ಕಾಫಿ ಬೆಳೆಗಾರರಿಗೆ ಭಾರೀ ನಷ್ಟ!

ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲ್ಲೂಕುಗಳಲ್ಲಿ ಇಂದಿಗೂ ಬಿಟ್ಟು ಬಿಟ್ಟು ಮಳೆ ಸುರಿಯುತ್ತಲೇ ಇದೆ. ಇದರಿಂದ ಕಾಫಿ ಕಾಯಿ ಇನ್ನಷ್ಟು ಉದುರಲು ಕಾರಣವಾಗುತ್ತಿದೆ. ಇದೇ ರೀತಿ ಕಾಫಿ ಉದುರಿರುವುದರಿಂದ ಎಕರೆಗೆ 15 ರಿಂದ 20 ಚೀಲ ನಷ್ಟವಾಗುವ ಆತಂಕ ಎದುರಾಗಿದೆ. ಇದೇ ಆದರೆ ಬೆಳೆಗಾರರು ದೊಡ್ಡ ನಷ್ಟ ಅನುಭವಿಸಿ ಕಾರ್ಮಿಕರಿಗೆ ಕೂಲಿ ಕೊಡುವುದಕ್ಕೂ ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಲಿದೆ.

56
'ಕಾಫಿ ಬೆಳೆಗಾರರಿಗೆ ಕೂಡಲೇ ಪರಿಹಾರ ಕೊಡಿ'

ಮತ್ತೊಂದೆಡೆ ಕಾಫಿ ಗಿಡಗಳೇ ಒಣಗಿ ಹೋಗುತ್ತಿದ್ದು, 15 ರಿಂದ 20 ವರ್ಷಗಳಿಂದ ಬೆಳೆದಿದ್ದ ಗಿಡಗಳು ಒಣಗಿ ಹೋದಲ್ಲಿ ಮತ್ತೆ ಹೊಸದಾಗಿ ಗಿಡನೆಟ್ಟು ಬೆಳೆಯಬೇಕಾದರೆ ಮೂರರಿಂದ ನಾಲ್ಕು ವರ್ಷಗಳೇ ಹಿಡಿಯಲಿವೆ. ಇಷ್ಟೆಲ್ಲಾ ಸಮಸ್ಯೆ ಎದುರಾಗಿದ್ದು ಸರ್ಕಾರಗಳು ಮಾತ್ರ ಯಾವುದೇ ಪರಿಹಾರ ಒದಿಗಿಸುವ ನಿಟ್ಟಿನಲ್ಲಿ ಮುಂದಾಗಿಲ್ಲ ಎಂದು ಕಾಫಿ ಬೆಳೆಗಾರ ಎ.ಎಸ್. ಟಾಟು ಮೊಣ್ಣಪ್ಪ ಅಸಮಾಧಾನ ಹೊರಹಾಕಿದ್ದಾರೆ.

66
ಕೂಡಲೇ ಕಾಫಿ ಮಂಡಳಿ ಮೂಲಕ ಸರ್ವೆ ಮಾಡಿಸಿ

ಜೂನ್ ತಿಂಗಳಲ್ಲಿಯೇ ಆರಂಭವಾಗಬೇಕಾಗಿದ್ದ ಮಳೆ, ಜುಲೈ ತಿಂಗಳ ಮಧ್ಯಭಾಗದಲ್ಲಿ ಆರಂಭವಾಯಿತು. ಇಷ್ಟೊಂದು ತಡವಾಗಿ ಮಳೆ ಆರಂಭವಾಗಿದ್ದರಿಂದಲೋ ಏನೋ ನಂತರ ಸುರಿದ ಮಳೆಯನ್ನು ತಡೆಯಲಾರದೆ ಕಾಫಿ ಕೊಳೆರೋಗ ಬಂದು ಹಾಳಾಗುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ಕಾಫಿ ಮಂಡಳಿ ಮೂಲಕ ಸರ್ವೆ ಮಾಡಿಸಿ ಬೆಳೆಗಾರರಿಗೆ ಪರಿಹಾರ ನೀಡಬೇಕು ಎಂದು ಮತ್ತೊಬ್ಬ ಬೆಳೆಗಾರ ಮಂದ್ರೀರ ಮೋಹನ್ ದಾಸ್ ಆಗ್ರಹಿಸಿದ್ದಾರೆ. (ವರದಿ: ರವಿ ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು)

Read more Photos on
click me!

Recommended Stories