South Western Railway train status: ನೈಋತ್ಯ ರೈಲ್ವೆಯು ಶಿವಮೊಗ್ಗ, ತಾಳಗುಪ್ಪ ಮತ್ತು ಮೈಸೂರು ಮಾರ್ಗವಾಗಿ ಸಂಚರಿಸುವ ಪ್ರಮುಖ ಜನಶತಾಬ್ದಿ ಹಾಗೂ ಎಕ್ಸ್‌ಪ್ರೆಸ್ ರೈಲುಗಳ ಸೇವೆಯಲ್ಲಿ ಭಾರಿ ಬದಲಾವಣೆ ಮಾಡಿದೆ. ಕೆಲವು ರೈಲುಗಳು ಸಂಪೂರ್ಣವಾಗಿ ರದ್ದಾಗಿದ್ದರೆ, ಇನ್ನು ಕೆಲವು ಮಾರ್ಗ ಬದಲಾಯಿಸಲಾಗಿದೆ.
ಈ ಕೆಳಗಿನ ವಿವರಗಳನ್ನು ಗಮನಿಸಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ಸಿಟಿ ರೈಲು ನಿಲ್ದಾಣದಲ್ಲಿ ಯಾರ್ಡ್ ನವೀಕರಣ ಹಾಗೂ ಪ್ರಮುಖ ಸುರಕ್ಷತಾ ಮೇಲ್ದರ್ಜೆ ಕಾಮಗಾರಿಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಶಿವಮೊಗ್ಗ ಮತ್ತು ತಾಳಗುಪ್ಪ ಮಾರ್ಗವಾಗಿ ಸಂಚರಿಸುವ ಹಲವು ಪ್ರಮುಖ ರೈಲುಗಳ ಸೇವೆಯನ್ನು ರದ್ದು ಹಾಗೂ ಮಾರ್ಗ ಬದಲಾವಣೆ ಮಾಡಿದೆ. ಆಗಸ್ಟ್ ತಿಂಗಳಲ್ಲಿ ಪ್ರಯಾಣಿಸುವವರು ಈ ಕೆಳಗಿನ ವಿವರಗಳನ್ನು ಗಮನಿಸುವುದು ಅಗತ್ಯ.
25
ಸಂಪೂರ್ಣ ರದ್ದಾಗಿರುವ ರೈಲುಗಳು (ಆಗಸ್ಟ್ 4)
ಸಂಪೂರ್ಣ ರದ್ದಾಗಿರುವ ರೈಲುಗಳು (ಆಗಸ್ಟ್ 4) ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 16581): 2026ರ ಆಗಸ್ಟ್ 4ರಂದು ಈ ರೈಲಿನ ಸಂಚಾರ ಇರುವುದಿಲ್ಲ. ಶಿವಮೊಗ್ಗ ಟೌನ್–ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 16582): 2026ರ ಆಗಸ್ಟ್ 4ರಂದು ಈ ರೈಲಿನ ಸೇವೆಯನ್ನೂ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
35
ಭಾಗಶಃ ರದ್ದಾಗಿರುವ ರೈಲುಗಳು (ಆಗಸ್ಟ್ 1 ರಿಂದ ಆಗಸ್ಟ್ 3)
ಭಾಗಶಃ ರದ್ದಾಗಿರುವ ರೈಲುಗಳು (ಆಗಸ್ಟ್ 1 ರಿಂದ ಆಗಸ್ಟ್ 3) ತಾಳಗುಪ್ಪ–ಬೆಂಗಳೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 20652): ಆಗಸ್ಟ್ 1ರಿಂದ 3ರವರೆಗೆ ಈ ರೈಲು ಅರಸೀಕೆರೆ ಮತ್ತು ಬೆಂಗಳೂರು ನಡುವೆ ಸಂಚರಿಸುವುದಿಲ್ಲ. ಇದು ಅರಸೀಕೆರೆ ನಿಲ್ದಾಣದಲ್ಲೇ ತನ್ನ ಪ್ರಯಾಣ ಕೊನೆಗೊಳಿಸಲಿದೆ. ಶಿವಮೊಗ್ಗ ಟೌನ್–ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 12090): ಆಗಸ್ಟ್ 1ರಿಂದ 3ರವರೆಗೆ ಈ ರೈಲು ಅರಸೀಕೆರೆ ಮತ್ತು ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದ್ದು, ಅರಸೀಕೆರೆಯಲ್ಲೇ ನಿಲ್ಲಲಿದೆ. ಬೆಂಗಳೂರು–ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 12089): ಆಗಸ್ಟ್ 1ರಿಂದ 3ರವರೆಗೆ ಈ ರೈಲು ಬೆಂಗಳೂರಿನ ಬದಲಾಗಿ ಅರಸೀಕೆರೆ ನಿಲ್ದಾಣದಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ.
ಮಾರ್ಗ ಬದಲಾವಣೆ ಆಗಿರುವ ರೈಲುಗಳು (ಆಗಸ್ಟ್ 3) ಬೆಂಗಳೂರು ನಿಲ್ದಾಣದ ಕಾಮಗಾರಿ ಹಿನ್ನೆಲೆಯಲ್ಲಿ ಕೆಳಗಿನ ರೈಲುಗಳು ಬೆಂಗಳೂರು, ಯಶವಂತಪುರ ಮತ್ತು ತುಮಕೂರು ನಿಲ್ದಾಣಗಳಿಗೆ ಬರುವುದಿಲ್ಲ. ಬದಲಾಗಿ ಪರ್ಯಾಯ ಮಾರ್ಗದಲ್ಲಿ ಚಲಿಸಲಿವೆ: ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 16228): ಆಗಸ್ಟ್ 3ರಂದು ತಾಳಗುಪ್ಪದಿಂದ ಹೊರಡುವ ಈ ರೈಲು ಅರಸೀಕೆರೆ, ಹಾಸನ ಮತ್ತು ಕೃಷ್ಣರಾಜನಗರ ಮಾರ್ಗವಾಗಿ ಮೈಸೂರು ತಲುಪಲಿದೆ. ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 16227): ಆಗಸ್ಟ್ 3ರಂದು ಮೈಸೂರಿನಿಂದ ಹೊರಡುವ ಈ ರೈಲು ಕೃಷ್ಣರಾಜನಗರ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಚಲಿಸಲಿದೆ.
55
ಗಮನಿಸಿ:
ಗಮನಿಸಿ: ಮಾರ್ಗ ಬದಲಾಗಿರುವ ಕಾರಣ ಈ ಎರಡೂ ರೈಲುಗಳಿಗೆ ತುಮಕೂರು, ಯಶವಂತಪುರ ಮತ್ತು ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಿಲುಗಡೆಯನ್ನು ಕೈಬಿಡಲಾಗಿದೆ. ಪ್ರಯಾಣಿಕರು ರೈಲ್ವೆ ಇಲಾಖೆಯ ಅಧಿಕೃತ ಸೂಚನೆಗಳನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಲು ಕೋರಲಾಗಿದೆ.