Bengaluru: ನಾರಾಯಣ ಹೆಲ್ತ್‌ ಸಿಟಿಯ ಕೊರೋನಾ ಐಸಿಯು ಘಟಕಕ್ಕೆ ಗಂಗೂಲಿ ಚಾಲನೆ

First Published | Feb 15, 2022, 8:16 AM IST

ಬೆಂಗಳೂರು(ಫೆ.15):  ಗೋಲ್ಡ್‌ಮನ್‌ ಸ್ಯಾಕ್ಸ್‌ ಮತ್ತು ಯುನೈಟೆಡ್‌ ವೇ ಬೆಂಗಳೂರು(United Way Bengaluru) ಸಹಯೋಗದೊಂದಿಗೆ ನಾರಾಯಣ ಹೆಲ್ತ್‌ ಸಿಟಿಯಲ್ಲಿ ನೂತನವಾಗಿ ನಿರ್ಮಿಸಿರುವ 100 ಹಾಸಿಗೆ ಸಾಮರ್ಥ್ಯದ ಕೊರೋನಾ ಐಸಿಯು ಘಟಕವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ(BCCI) ಅಧ್ಯಕ್ಷ ಸೌರವ್‌ ಗಂಗೂಲಿ(Sourav Ganguly) ಸೋಮವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ನಾರಾಯಣ ಹೆಲ್ತ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ದೇವಿ ಪ್ರಸಾದ್‌ ಶೆಟ್ಟಿ(Dr Deveshetty Prasad), ಮಾನವ ಅಭಿವೃದ್ಧಿ ವರದಿ 2020 ರ ಪ್ರಕಾರ, ಭಾರತವು(India) 10,000 ಭಾರತೀಯರಿಗೆ ಕೇವಲ 5 ಹಾಸಿಗೆಗಳನ್ನು ಹೊಂದಿದೆ. ತೀವ್ರ ನಿಗಾ ಸೌಲಭ್ಯಗಳ ವಿಚಾರದಲ್ಲಿ ಪರಿಸ್ಥಿತಿ ಮತ್ತಷ್ಟುಗಂಭೀರವಾಗಿದೆ. ದೇಶವು ಎದುರಿಸುತ್ತಿರುವ ಆರೋಗ್ಯ ಮೂಲ ಸೌಕರ್ಯ ಅಂತರವನ್ನು ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದರು.

ಗೋಲ್ಡ್‌ಮನ್‌ ಸ್ಯಾಕ್ಸ್‌ನ ಅಧ್ಯಕ್ಷ ಸಂಜಯ್‌ ಚಟರ್ಜಿ ಮಾತನಾಡಿ, ಭಾರತದಲ್ಲಿ ಸಾಂಕ್ರಾಮಿಕ ಸಮಯದಲ್ಲಿ ವೈದ್ಯಕೀಯ ಮೂಲಸೌಕರ್ಯ ಒದಗಿಸಲು ಗೋಲ್ಡ್‌ಮನ್‌ ಸ್ಯಾಕ್ಸ್‌ ಸಂಸ್ಥೆ(Goldman Sachs) ಪ್ರಮುಖ ಆಸ್ಪತ್ರೆಗಳೊಂದಿಗೆ ಪಾಲುದಾರಿಕೆ ಹೊಂದಿದೆ ಎಂದು ತಿಳಿಸಿದರು. 

Tap to resize

ಸದ್ಯ ನಾರಾಯಣ ಹೆಲ್ತ್‌ ಸಿಟಿಯಲ್ಲಿನ ಐಸಿಯು ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿದ್ದು, ಮುಂದಿನ ದಿನಗಳಲ್ಲಿ ಸಮುದಾಯಮಟ್ಟದಲ್ಲಿ ಹೆಚ್ಚು ಅಗತ್ಯವಿರುವ ಆರೋಗ್ಯ ಸೌಕರ್ಯಗಳನ್ನು ನೀಡುತ್ತೇವೆ ಎಂದು ತಿಳಿಸಿದ ಗೋಲ್ಡ್‌ಮನ್‌ ಸ್ಯಾಕ್ಸ್‌ನ ಅಧ್ಯಕ್ಷ ಸಂಜಯ್‌ ಚಟರ್ಜಿ

ಯುನೈಟೆಡ್‌ ವೇ ಬೆಂಗಳೂರು ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್‌ ಕೃಷ್ಣನ್‌, ಬಯೋಕಾನ್‌(Biocon) ಮುಖ್ಯಸ್ಥೆ ಡಾ. ಕಿರಣ್‌ ಮಜುಂದಾರ್‌ ಶಾ(Kiran Mazumdar-Shaw) ಉಪಸ್ಥಿತರಿದ್ದರು.

Latest Videos

click me!