ಸೋಮವಾರ ನಗರದ ಗವಿಪುರದ ಗೋಸಾಯಿ ಮಹಾಸಂಸ್ಥಾನದ ಮಂಜುನಾಥ ಸ್ವಾಮೀಜಿ(Manjunath Swamiji) ಪಟ್ಟಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡು, ಸ್ವಾಮೀಜಿಗಳಿಗೆ ಕಿರೀಟ ಧಾರಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
ಮರಾಠ ಸಮಾಜಕ್ಕೆ ತನ್ನದೆ ಆದ ಇತಿಹಾಸ ಹೊಂದಿದೆ, ಮರಾಠ ಸಮಾಜದ ಶಿವಾಜಿ ಮಹಾರಾಜ್, ಶಹಜಿ ಸೇರಿ ಹಲವರು ನಮ್ಮ ಇತಿಹಾಸ ಪ್ರಮುಖ ಅಂಗವಾಗಿದ್ದು, ಭಾರತದ ಅಖಂಡತೆ, ಏಕತೆ, ಪರಂಪರೆ, ಸಂಸ್ಕೃತಿ ಉಳಿಸಿಕೊಳ್ಳಲು ದೊಡ್ಡ ಕೊಡುಗೆ ನೀಡಿದ್ದಾರೆ. ಹೊಸ ಇತಿಹಾಸ ಇತಿಹಾಸವನ್ನು ಸೃಷಿಸುವ ಶಕ್ತಿ ಮರಾಠ ವಂಶಸ್ಥರಿಗಿದೆ. ಇಂತಹ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.
ಮರಾಠ ಸಮಾಜ ಎಲ್ಲರೂ ನಮ್ಮವರು ಎಂದು ಭಾವಿಸುತ್ತದೆ. ರಾಜ್ಯದಲ್ಲಿರುವ ಮರಾಠರೆಲ್ಲರೂ ಕನ್ನಡವನ್ನು ಅಚ್ಚುಕಟ್ಟಾಗಿ ಮಾತಾಡುತ್ತಾರೆ. ನಾಡಿನಲ್ಲಿ ಉತ್ತಮ ಸ್ಥಾನಮಾನ ಗಳಿಸಿದ್ದು, ಹಲವು ಕೊಡುಗೆ ಕೊಟ್ಟಿದ್ದಾರೆ. ಕನ್ನಡ ನಾಡು, ನುಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕನ್ನಡ ನಾಡಿನ ನೆಲ, ಜಲ ವಿಚಾರದಲ್ಲಿ ಮರಾಠ ಸಮಾಜದವರು ಕರ್ನಾಟಕಕ್ಕೆ ಬೆಂಬಲ ನೀಡುತ್ತಾ ಬಂದಿದ್ದಾರೆ ಎಂದು ತಿಳಿಸಿದ ಬೊಮ್ಮಾಯಿ
ಗೋಸಾಯಿ ಮಠಕ್ಕೆ ತನ್ನದೇ ಪರಂಪರೆ ಇದೆ. ಮಂಜುನಾಥ ಸ್ವಾಮೀಜಿಗಳು ಚಿಕ್ಕವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದು, ಅವರ ಅನುಭವದಿಂದ ಸಮಾಜವನ್ನು ಮುನ್ನಡೆಸಲಿದ್ದಾರೆ. ಭಗವದ್ಗೀತೆಯ ತತ್ವಗಳನ್ನು ಹಾಗೂ ಕಾಲಾತೀತವಾದ ಸತ್ಯಗಳನ್ನು ಭಾವನಾಪೂರ್ಣವಾಗಿ ಮೂಲಕ ಜನರಿಗೆ ತಲುಪಿಸುತ್ತಿರುವುದು ಸಂತಸದ ವಿಷಯ ಎಂದರು.
ಸಚಿವರಾದ ಆರ್.ಅಶೋಕ(R Ashok), ಡಾ. ಸಿ.ಎನ್ ಅಶ್ವತ್ಥ ನಾರಾಯಣ(CN Ashwathnarayan), ಶಾಸಕ ಶ್ರೀಮಂತ ಪಾಟೀಲ್(Shrimant Patil) ಹಾಗೂ ಇತರರು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ಶೀಘ್ರ ಕಾರ್ಯರೂಪಕ್ಕೆ ತರಬೇಕು. ಗೋಸಾಯಿ ಮಠದ ಜಾಗವನ್ನು ಬಿಬಿಎಂಪಿ ವಶಪಡಿಸಿಕೊಂಡಿದ್ದು, ಸರ್ಕಾರ ಈ ಬಗ್ಗೆ ಕ್ರಮಕೈಗೊಂಡು ಮಠದ ಜಾಗದ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಮನವಿ ಮಾಡಿದ ಮಾಜಿ ಸಚಿವ ಪಿ ಜಿ ಆರ್ ಸಿಂಧ್ಯಾ