Kalyana Karnataka: ದೋಷಪೂರಿತ ಮೀಸಲು ಸುತ್ತೋಲೆ ಶೀಘ್ರ ರದ್ದು: ಸಚಿವ ರಾಮುಲು

First Published | Feb 12, 2022, 9:11 AM IST

ಕಲಬುರಗಿ(ಫೆ.12):  ರಾಜ್ಯ ಸರ್ಕಾರದ(Government of Karnataka) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಕಾನೂನು ಸಚಿವಾಲಯದ ಜೊತೆ ಚರ್ಚಿಸಿ ಆದಷ್ಟು ಬೇಗ ಉದ್ಯೋಗ ನೇಮಕಾತಿ(Employment Recruitment) ಪ್ರಕ್ರಿಯೆಯಲ್ಲಿ ಕಲ್ಯಾಣ ಕರ್ನಾಟಕದ ಪ್ರತಿಭಾವಂತ ಯುವಕರಿಗೆ ಅಡ್ಡಿಯಾಗಿರುವ ’2020 ರ ದೋಷಪೂರಿತ ಮೀಸಲು ಸುತ್ತೋಲೆ’ ರದ್ದು ಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಲಂ 371 (ಜೆ) ಅನುಷ್ಠಾನದ ಪ್ರಗತಿ ಪರಿಶೀಲನೆ ಹಾಗೂ ಪರಾಮರ್ಶೆಯ ಸಚಿವ ಸಂಪುಟದ ಉಪ ಸಮಿತಿ ಅಧ್ಯಕ್ಷ, ಸಾರಿಗೆ ಸಚಿವ ಬಿ. ಶ್ರೀರಾಮುಲು(B Sriramulu) ಹೇಳಿದ್ದಾರೆ.

ಕಲಬುರಗಿಯ(Kalaburagi) ಕೆಕೆಆರ್‌ಡಿಬಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಲಂ 371(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕ(Kalyana Karnataka) ಪ್ರದೇಶಕ್ಕೆ ನೀಡಿರುವ ವಿಶೇಷ ಸ್ಥಾನಮಾನ(Special Status) ಕುರಿತು ಹೊರಡಿಸಲಾದ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಹಾಗೂ ಪರಾಮರ್ಶಿಸಲು ರಚಿಸಲಾಗಿರುವ ಸಚಿವ ಸಂಪುಟದ ಉಪ ಸಮಿತಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

2020 ರ ಜೂನ್‌ ತಿಂಗಳಲ್ಲಿ ಹೊರಬಂದಿರುವ ಕಲ್ಯಾಣ ಕರ್ನಾಟಕ ಉದ್ಯೋಗ ನೇಮಕಾತಿ ಪ್ರಕ್ರಿಯೆ ಕುರಿತಾದ ಸುತ್ತೋಲೆ ಅನೇಕ ದೋಷಪೂರಿತ ಸಂಗತಿಗಳನ್ನು ಒಳಗೊಂಡಿರುವ ವಿಚಾರ ನನ್ನ ಗಮನಕ್ಕೂ ಬಂದಿದೆ. ಶಾಸಕರು, ನೊಂದವರೂ ಈ ಬಗ್ಗೆ ಗಮನ ಸೆಳೆದಿದ್ದಾರೆ. ಈ ಸುತ್ತೋಲೆ ನಮ್ಮ ಭಾಗದವರಿಗೆ ನೇಮಕಾತಿಯಲ್ಲಿ ಅಡ್ಡಿಯಾಗುತ್ತಿದ್ದರೆ ಅದರ ರದ್ದತಿಗೆ ಖಂಡಿತಾ ಕ್ರಮ ಕೈಗೊಳ್ಳುತ್ತೇನೆ. ನಾನೂ ಇದೇ ಪ್ರದೇಶದವನಾದ ಕಾರಣ ನಮ್ಮವರಿಗೆ ಕಲ್ಯಾಣವಾಗಬೇಕು ಎಂಬುದೇ ನನ್ನ ಇಚ್ಛೆ ಎಂದ ಸಚಿವ ರಾಮುಲು

Tap to resize

ಕಲ್ಯಾಣ ನಾಡಿನ ಯುವಕರಿಗೆ ಆಧುನಿಕ ಕೌಶಲ್ಯ ಕಲಿಯಲು ಅನುವಾಗುವಂತೆ ಕೌಶಲ್ಯ ವಿವಿ ಸ್ಥಾಪನೆಗೆ ತಾವು ಚಿಂತನೆ ನಡೆಸಿದ್ದಾಗಿ ಇದೇ ವೇಳೆ ರಾಮುಲು ತಿಳಿಸಿದರು.

ಈ ವಿಚಾರವಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ತಜ್ಞರ ಜೊತೆ ಚರ್ಚಿಸಿ ರೂಪುರೇಷೆ ಸಿದ್ಧಪಡಿಸುವಂತೆ ಯೋಜನಾ ಇಲಾಖೆಯ ಹಿರಿಯ ಅಧಿಕಾರಿ ಶಾಲಿನಿ ರಜನೀಶ್‌ ಅವರಿಗೆ ಸೂಚಿಸಲಾಗಿದೆ. ಅವರೂ ಈ ಕೆಲಸಕ್ಕೆ ಒಪ್ಪಿದ್ದಾರೆ. ಈ ಬಗ್ಗೆ ಸಿಎಂ ಬವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದು ಕೌಶಲ್ಯ ವಿವಿ ಸ್ಥಾಪನೆಗೆ ಅಗತ್ಯ ರೂಪರೇಷೆ ಸಿದ್ಧಪಡಿಸಲಾಗುತ್ತದೆ ಎಂದು ತಿಳಿಸಿದ ಶ್ರೀರಾಮುಲು 

Latest Videos

click me!