ಎಸ್. ಜಾನಕಿ ಕೊನೆಯಾಸೆ & ಕೊನೆ ಕ್ಷಣ ಹೇಗಿತ್ತು? ಕೇರ್‌ಟೇಕರ್ ನವೀನ್ ಬಿಚ್ಚಿಟ್ಟ ರಹಸ್ಯ

Published : Jul 12, 2026, 07:53 AM IST

ಗಾಯಕಿ ಎಸ್. ಜಾನಕಿ ಅವರ ಕೇರ್‌ಟೇಕರ್ ನವೀನ್, ಅವರ ಅಂತಿಮ ದಿನಗಳ ಬಗ್ಗೆ ಮಾತನಾಡಿದ್ದಾರೆ. ಜಾನಕಿಯವರಿಗೆ ಮೈಸೂರಿನಲ್ಲೇ ಪ್ರಾಣ ಬಿಡುವ ಆಸೆಯಿತ್ತು ಮತ್ತು ಆಸ್ಪತ್ರೆಗೆ ಹೋಗಲು ಭಯಪಡುತ್ತಿದ್ದರು ಎಂದು ನವೀನ್ ಬಹಿರಂಗಪಡಿಸಿದ್ದಾರೆ. ಅವರ ಅಂತ್ಯಕ್ರಿಯೆ ಮೈಸೂರಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ನಡೆಯಲಿದೆ.

PREV
15
ಕೇರ್‌ಟೇಕರ್ ಅಗಿದ್ದ ನವೀನ್

ಗಾಯಕಿ ಎಸ್‌.ಜಾನಕಿ ಅವರ ಕೇರ್‌ಟೇಕರ್ ಅಗಿದ್ದ ನವೀನ್ ಎಂಬವರು ಮಾಧ್ಯಮಗಳ ಜೊತೆ ಮಾತನಾಡಿದ್ದು, ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಕಾಲಿಗೆ ಇನ್ಫೆಕ್ಷನ್ ಆಗಿದ್ದರಿಂದ, ಸ್ವಲ್ಪ ನೋವು ಇತ್ತು. ಅದನ್ನು ಹೊರತುಪಡಿಸಿದ್ರೆ ಚೆನ್ನಾಗಿಯೇ ಇದ್ದರು ಎಂದು ಹೇಳಿದರು.

25
ಮೈಸೂರು ಅಂದ್ರೆ ಬಲುಪ್ರೀತಿ

ನಾನು 12 ವರ್ಷದವನಿದ್ದಾಗಿನಿಂದ ಜಾನಕಿ ಅಮ್ಮ‌ನ ಹುಚ್ಚು ಅಭಿಮಾನಿ. ಮೊದಲು ಚೆನೈ ಅಭಿಮಾರಾಮಿಪುರದಲ್ಲಿ ಅವರನ್ನು ಭೇಟಿಯಾಗಿದ್ದೆ. 2008ರಿಂದ ಮೈಸೂರಲ್ಲೇ ಇರುತ್ತಿದ್ದರು. ಕಳೆದ 2 ವರ್ಷಗಳಿಂದ ನಮ್ಮ ಮನೆಯಲ್ಲಿದ್ದರು. ನಮ್ಮ ಮನೆಯಲ್ಲಿರುವ ವಿಷಯ ಅಕ್ಕಪಕ್ಕದ ನಿವಾಸಿಗಳಿಗೂ ಗೊತ್ತಿರಲಿಲ್ಲ. ಹೆಚ್ಚು ಜನರು ಸೇರಬಹುದು ಎಂದು ಈ ವಿಷಯವನ್ನು ಯಾರಿಗೂ ಹೇಳಿರಲಿಲ್ಲ ಎಂದರು.

35
ವೈದ್ಯರು ಅಂದ್ರೆ ಭಯಪಡ್ತಿದ್ರು

ಭಾಗ್ಯ ಎನ್ನುವವರು ಜಾನಕಿ ಅಮ್ಮನನ್ನು ನೋಡಿಕೊಳ್ಳುತ್ತಿದ್ದರು. ಹಾಸ್ಪಿಟಲ್ ಅಂದ್ರೆ ಭಯ ಪಡ್ತಿದ್ರು. ಹಾಗಾಗಿ ಮನೆಗೆ ನರ್ಸ್ ಕರೆಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಎದ್ದು ಕುಳಿತುಕೊಳ್ಳಲು ಕಷ್ಟ ಪಡ್ತಿದ್ರು. ತಕ್ಷಣ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯ್ತು. ವೈದ್ಯರು 20-30% ಮಾತ್ರ ಗ್ಯಾರಂಟಿ ಕೊಡ್ತೀವಿ ಎಂದರು. ಮಧ್ಯಾಹ್ನ 3 ಗಂಟೆವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನ ವ್ಯವಸ್ಥೆ ಕಲ್ಪಿಸಲಾಗುತ್ತದೆ.

45
ಮೈಸೂರಿನಲ್ಲೇ ಪ್ರಾಣ ಬಿಡುವುದು ಜಾನಕಿ ಅವರ ಆಸೆಯಾಗಿತ್ತು

ಹೈದರಾಬಾದ್‌ನಲ್ಲಿ ಅವರ ಮನೆ ಪ್ಯಾಲೇಸ್‌ ‌ರೀತಿಯಲ್ಲಿದ್ದು, ಆದರೆ ನನ್ನ ಮೇಲಿನ ಪ್ರೀತಿಗೆ ಮೈಸೂರಿಗೆ ಬರುತ್ತಿದ್ದರು. ಮೈಸೂರಿನಲ್ಲೇ ಪ್ರಾಣ ಬಿಡುವುದು ನನ್ನ ಆಸೆ ಅಂತಿದ್ರು. 2018ನಲ್ಲಿ ಮೈಸೂರಿನಲ್ಲೇ ಕಡೆಯ ಕಾರ್ಯಕ್ರಮ ನೀಡಿದ್ರು. ನನಗಾಗಿ ಈ ಕಾರ್ಯಕ್ರಮ ಮಾಡ್ತಿದ್ದೀನಿ ಎಂದಿದ್ರು. ಆನಂತರ ಬಂದ ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸಿಲ್ಲ.

55
ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ

ಅಮ್ಮ ಭೇಟಿಗೆ ಕೊಡುತ್ತಿದ್ದ ದಿನಾಂಕವನ್ನ ಲೆಕ್ಕ ಹಾಕಿಕೊಂಡು ಕಾಯ್ತಿದ್ದೆ. ನಮ್ಮ ಫಾರಂ ಹೌಸ್‌ನಲ್ಲೇ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದ್ದು, ಮೊಮ್ಮಗಳು ಅಪ್ಸರಾ ಅಂತಿಮ ವಿಧಿವಿಧಾನಗಳನ್ನು ಪೂರೈಸಲಿದ್ದಾರೆ ಎಂದು ನವೀನ್ ಮಾಹಿತಿ ನೀಡಿದ್ದಾರೆ.

Read more Photos on
click me!

Recommended Stories