ಚಿಕ್ಕಮಗಳೂರಿನಲ್ಲಿ ಆಟವಾಡ್ತಿದ್ದ ಮಕ್ಕಳನ್ನು ಕೂಡಿಹಾಕಿ ಉತ್ತರ ಭಾರತ ಪ್ರಿನ್ಸಿಪಾಲ್‌ನಿಂದ ಹಲ್ಲೆ!

Published : Mar 21, 2026, 03:17 PM IST

ಶಾಲಾ ಮಕ್ಕಳನ್ನು ಅಂಡರ್ ಗ್ರೌಂಡ್ ರೂಮಿನಲ್ಲಿ ಕೂಡಿಹಾಕಿ ಪ್ರಾಚಾರ್ಯರು ಕ್ರೂರವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಘಟನೆ ಬೆಳಕಿಗೆ ಬಂದಿದ್ದು ಹೇಗೆ?

PREV
16
ಮೂಡಿಗೆರೆ: ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಅಮಾನವೀಯ ಕೃತ್ಯ

ಶಾಲಾ ಮಕ್ಕಳನ್ನು ಅಂಡರ್ ಗ್ರೌಂಡ್ ರೂಮಿನಲ್ಲಿ ಕೂಡಿಹಾಕಿ ಪ್ರಾಚಾರ್ಯರು ಕ್ರೂರವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

26
ಉತ್ತರ ಭಾರತದ ಮೂಲದ ಪ್ರಾಚಾರ್ಯರಿಂದ ಕ್ರೂರವಾಗಿ ಹಲ್ಲೆ

ಮೂಡಿಗೆರೆ ತಾಲೂಕಿನ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ. ಮಕ್ಕಳು ಆಟವಾಡುತ್ತಿದ್ದರು ಎಂಬ ಕ್ಷುಲ್ಲಕ ಕಾರಣಕ್ಕೆ, ಉತ್ತರ ಭಾರತ ಮೂಲದ ಪ್ರಾಚಾರ್ಯರು ವಿದ್ಯಾರ್ಥಿಗಳನ್ನು ಬೇರೆ ಕೊಠಡಿಯಲ್ಲಿ ಕೂಡಿಹಾಕದೆ, ನೆಲಮಾಳಿಗೆಯ (Underground) ಕತ್ತಲು ಕೋಣೆಯಲ್ಲಿ ಕೂಡಿಹಾಕಿದ್ದಾರೆ.

36
ಮಕ್ಕಳನ್ನು ಉಪವಾಸ ಕೆಡವಿ ಮನಸೋ ಇಚ್ಛೆ ಥಳಿತ!

ಶಾಲಾ ಮಕ್ಕಳನ್ನ ಉಪವಾಸ ಕೆಡವಿ ಹಲ್ಲೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ನೆಲಮಾಳಿಗೆಯ ಕೋಣೆಯಲ್ಲಿ ಮಕ್ಕಳನ್ನು ದಿನವಿಡೀ ಉಪವಾಸವಿಟ್ಟು, ಮನಸೋಇಚ್ಛೆ ಥಳಿಸಲಾಗಿದೆ ಎಂದು ಮಕ್ಕಳು ಆರೋಪಿಸಿದ್ದಾರೆ.

46
ಮಕ್ಕಳು ಸ್ಥಳೀಯರು ಎಂಬ ಕಾರಣಕ್ಕೆ ದ್ವೇಷ?

ಹಲ್ಲೆಗೊಳಗಾದ ಮಕ್ಕಳು ಸ್ಥಳೀಯ ಹುಡುಗರು ಎಂಬ ಕಾರಣಕ್ಕೆ ಬೇಕೆಂದೇ ಟಾರ್ಗೆಟ್ ಮಾಡಿ ಥಳಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

56
ಮೈಮೇಲೆಲ್ಲಾ ಬಾಸುಂಡೆ ಬರುವಂತೆ ಮಕ್ಕಳಿಗೆ ಥಳಿತ:

ಮಕ್ಕಳ ಮೈಮೇಲೆ ಬಾಸುಂಡೆಗಳು ಬರುವಂತೆ ಕ್ರೂರವಾಗಿ ಹಲ್ಲೆ ಮಾಡಲಾಗಿದೆ. ಪೊಲೀಸರು ಮಕ್ಕಳ ತಪಾಸಣೆ ವೇಳೆ ಬೆನ್ನು ತೊಡೆ, ಕೈ ಭಾಗದಲ್ಲಿ ಹೂತ ಕಾಣಿಸಿಕೊಂಡಿದೆ, ಎಳೆ ಮಕ್ಕಳ ಮೈಮೇಲೆಲ್ಲಾ ಬಾಸುಂಡೆಗಳೇ ಕಾಣುತ್ತಿವೆ ಎಂದರೆ ಪ್ರಾಚಾರ್ಯ ಅದ್ಯಾವ ರೀತಿಯಲ್ಲಿ ಮಕ್ಕಳಿಗೆ ಹಿಂಸೆ ಕೊಟ್ಟಿರಬಹುದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

66
ಮಕ್ಕಳ ಕಿರುಚಾಟ ಕೇಳಿ ಪ್ರಕರಣ ಬಯಲಿಗೆ

ಅಂಡರ್ ಗ್ರೌಂಡ್ ರೂಮಿನಲ್ಲಿದ್ದ ಮಕ್ಕಳು ನೋವಿನಿಂದ ಕಿರುಚಾಡುತ್ತಿದ್ದರು. ಶಾಲೆಯ ಹತ್ತಿರ ಸೌದೆ ಒಡೆಯುತ್ತಿದ್ದ ಸ್ಥಳೀಯರಿಗೆ ಈ ಕೂಗಾಟ ಕೇಳಿಸಿ ಅನುಮಾನ ಮೂಡಿದೆ. ಕೂಡಲೇ ಅವರು ಬಣಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಭೇಟಿ, ಗಾಯಾಳು ಮಕ್ಕಳಿಗೆ ಚಿಕಿತ್ಸೆ

ಮಾಹಿತಿ ತಿಳಿಯುತ್ತಿದ್ದಂತೆಯೇ ಬಣಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ಶಾಲೆಯ ಎಲ್ಲಾ ಕೊಠಡಿಗಳನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ನೆಲಮಾಳಿಗೆಯ ಕೋಣೆಯಲ್ಲಿ ಕೂಡಿಹಾಕಲಾಗಿದ್ದ ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ಗಾಯಗೊಂಡ ಮಕ್ಕಳನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಾಚಾರ್ಯರಿಗೆ ಪೊಲೀಸರು, ಸ್ಥಳೀಯರು ತರಾಟೆ

ಸ್ಥಳೀಯರು ಹಾಗೂ ಪೊಲೀಸರು ಅಮಾನವೀಯವಾಗಿ ವರ್ತಿಸಿದ ಪ್ರಾಚಾರ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಯಿದ್ದು, ತನಿಖೆ ಮುಂದುವರಿದಿದೆ.

Read more Photos on
click me!

Recommended Stories