ಬಲ್ಕ್ ಡೀಸೆಲ್ ಬೆಲೆ ಏರಿಕೆಯಾದರೂ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಇಲ್ಲ

Published : Mar 21, 2026, 10:56 AM ISTUpdated : Mar 22, 2026, 09:43 AM IST

ಬಲ್ಕ್ ಡೀಸೆಲ್ ಬೆಲೆ ಏರಿಕೆಯಾದರೂ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಇಲ್ಲ, ಮಧ್ಯಪ್ರಾಚ್ಯ ಯುದ್ಧದಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ಕೈಗಾರಿಕಾ ಉದ್ದೇಶದ ಡೀಸೆಲ್ ಬೆಲೆ ಏರಿಕೆಯಾಗಿದೆ. ಇದರಿಂದ ಪ್ರಯಾಣಿಕರು ಆತಂಕಪಡುವು ಅವಶ್ಯಕತೆ ಇಲ್ಲ.  

PREV
15
ಜನರಿಗೆ ಯುದ್ದದ ಹೊಡೆತ

ಜನಸಾಮಾನ್ಯರಿಗೆ ಇರಾನ್ ಹಾಗೂ ಇಸ್ರೇಲ್ ಯುದ್ದದ ಬಿಸಿ ತೀವ್ರವಾಗಿ ತಟ್ಟುತ್ತಿದೆ. ಗ್ಯಾಸ್ ಸಿಲಿಂಡರ್ ಪೂರೈಕೆ ಕೊರತೆ, ಹೊಟೆಲ್‌ಗಳಿಗೆ ವಾಣಿಜ್ಯ ಸಿಲಿಂಡರ್ ಪೂರೈಕೆ ವ್ಯತ್ಯಯಗಳ ಬೆನ್ನಲ್ಲೇ ಪ್ರೀಮಿಯಂ ಪೆಟ್ರೋಲ್ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಜನಸಾಮಾನ್ಯರಿಗೆ ಪ್ರಯಾಣ ದರ ದುಬಾರಿಯಾಗುವ ಸಾಧ್ಯತೆ ಗೋಚರಿಸಿದೆ. ಬಲ್ಕ್ ಡೀಸೆಲ್ ಬೆಲೆಯಲ್ಲಿ ಬರೋಬ್ಬರಿ 22 ರೂಪಾಯಿ ಏರಿಕೆಯಾಗಿದೆ.

25
ಬಲ್ಕ್ ಡೀಸೆಲ್ ಬೆಲೆ ಏರಿಕೆ ಸಂಕಷ್ಟ

ಕೈಗಾರಿಕಾ ಉದ್ದೇಶಕ್ಕೆ ಬಳಸುವ ಬಲ್ಕ್ ಡಿಸೇಲ್ ದರ ಲೀಟರ್‌ಗೆ 22 ಏರಿಕೆಯಾಗಿದೆ. 87.67 ರೂಪಾಯಿ ಇದ್ದ ಬಲ್ಕ್ ಡಿಸೇಲ್ ದರ 109.59 ರೂಪಾಯಿಗೆ ಏರಿಕೆಯಾಗಿದೆ. ಕೈಗಾರಿಗಳು ಇದೀಗ ಸಂಕಷ್ಟಕ್ಕೆ ಸಿಲುಕಿದೆ. ದಿಢೀರ್ 22 ರೂಪಾಯಿ ಏರಿಕೆಯಿಂದ ಹಲವು ಸಣ್ಣ ಕೈಕಾರಿಕೆಗಳು ಆತಂಕ ಎದುರಿಸುತ್ತಿದೆ. 

35
ಸಾರಿಗೆ ನಿಗಮಗಳಿಗೆ ಸಿಗುತ್ತಾ ವಿನಾಯಿತಿ?

ಸಾರಿಗೆ ಸಂಸ್ಥೆಗಳು ಪ್ರತಿ ದಿನ ಲಕ್ಷಾಂತರ ಲೀಟರ್ ಡೀಸೆಲ್ ಖರೀದಿ ಮಾಡುತ್ತದೆ. ಇಂದಿನಿಂದ ಬಲ್ಕ್ ಡಿಸೇಲ್ ದರ ಲೀ.ಗೆ 22 ರೂಪಾಯಿ ಏರಿಕೆಯಾಗಿದೆ. ಆದರೆ ಸಾರಿಗೆ ಬಸ್‌ಗಳ ಟಿಕೆಟ್ ದರದಲ್ಲಿ ಯಾವುದೇ ವ್ಯತ್ಯಾಸವಾಗುವವ ಸಾಧ್ಯತೆ ಇಲ್ಲ.   

45
ಪ್ರೀಮಿಯಂ ಪೆಟ್ರೋಲ್ ದರ ಏರಿಕೆ

ಮಧ್ಯಪ್ರಾಚ್ಯ ಯುದ್ಧದಿಂದ ಭಾರತದಲ್ಲಿ ಪ್ರೀಮಿಯಂ ಪೆಟ್ರೋಲ್ ದರದಲ್ಲಿ ಏರಿಕೆಯಾಗಿದೆ. ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆಯಲ್ಲಿ 2 ರೂಪಾಯಿ ಏರಿಕೆಯಾಗಿದೆ. ಇದರಿಂದ ಪೆಟ್ರೋಲ್ ಮತ್ತಷ್ಟು ದುಬಾರಿಯಾಗಿದೆ.. ಹೆಚ್ ಪಿ‌ ಪೆಟ್ರೋಲ್ ಬಂಕ್‌ಗಳಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆ ಪ್ರತಿ‌ಲೀಟರ್ ಗೆ 110.97 ರೂ.ಯಿಂದ 113.14 ರೂಪಾಯಿಗೆ ಏರಿಕೆಯಾಗಿದೆ

55
ತೈಲ, ಗ್ಯಾಸ್ ಘಚಕಗಳ ಮೇಲೆ ತೀವ್ರಗೊಂಡ ಯುದ್ಧ

ಇರಾನ್ ಹಾಗೂ ಇಸ್ರೇಲ್ ಯುದ್ಧದಲ್ಲಿ ತೈಲ ಹಾಗೂ ಗ್ಯಾಸ್ ಘಟಕಗಳು ಹಾನಿಯಾಗಿದೆ. ಎರಡು ರಾಷ್ಟ್ರಗಳು ತೈಲ, ಗ್ಯಾಸ್ ಘಟಕ ಗುರಿಯಾಗಿಸಿ ದಾಳಿ ಮಾಡಿದೆ.ಜೊತೆಗೆ ಹೊರ್ಮುಜ್ ಜಲಸಂಧಿ ಬಿಕ್ಕಿಟ್ಟು ಮುಂದುವರಿದಿದೆ. ಹೀಗಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ.

ತೈಲ, ಗ್ಯಾಸ್ ಘಚಕಗಳ ಮೇಲೆ ತೀವ್ರಗೊಂಡ ಯುದ್ಧ

Read more Photos on
click me!

Recommended Stories