ಶಿರಾಡಿ ಘಾಟ್: 40 ಅಡಿ ಪ್ರಪಾತದ ಹೊಳೆಗೆ ಬಿತ್ತು ನಾಲ್ವರು ಪ್ರಯಾಣಿಸುತ್ತಿದ್ದ ಕಾರ್

Published : Oct 24, 2025, 01:22 PM IST

ಸಕಲೇಶಪುರದ ಶಿರಾಡಿ ಘಾಟ್‌ನಲ್ಲಿ, ಚನ್ನಗಿರಿಯ ಕುಟುಂಬವೊಂದು ಪ್ರಯಾಣಿಸುತ್ತಿದ್ದ ಕಾರು 40 ಅಡಿ ಆಳದ ಹೊಳೆಗೆ ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದ ಈ ಘಟನೆಯಲ್ಲಿ, ಕಾರಿನಲ್ಲಿದ್ದ ನಾಲ್ವರು ಸದಸ್ಯರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

PREV
14
ಶಿರಾಡಿ ಘಾಟ್‌

ಹಾಸನ ಜಿಲ್ಲೆಯ ಸಕಲೇಶಪುರದ ಶಿರಾಡಿ ಘಾಟ್‌ನಲ್ಲಿ ರಸ್ತೆಬದಿಯ ಹೊಳೆಗೆ ಕಾರ್ ಬಿದ್ದಿದೆ. ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

24
ರಾಷ್ಟ್ರೀಯ ಹೆದ್ದಾರಿ 75

ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್‌ನಲ್ಲಿ ಈ ಘಟನೆ ನಡೆದಿದ್ದು, 40 ಅಡಿ ಎತ್ತರದಿಂದ ಕಾರ್ ಹೊಳೆಗೆ ಇಳಿದ್ರೂ ಎಲ್ಲರೂ ಪವಾಡ ರೀತಿಯಲ್ಲಿ ಬದುಕುಳಿದಿದ್ದಾರೆ. ಕಾರಿನಲ್ಲಿ ಗೋವಿಂದ್, ಪತ್ನಿ ಆಶಾ ಮಕ್ಕಳಾದ ಹರ್ಷಿತ್, ವರ್ಷಿತ್ ನಾಲ್ವರು ಮಂಗಳೂರಿಗೆ ತೆರಳುತ್ತಿದ್ದರು.

34
ಬುದಕುಳಿದ ಪ್ರಯಾಣಿಕರು

ಗೋವಿಂದ್ ಅವರು ದಾವಣಗೆರೆ ಜಿಲ್ಲೆಯ ಚನ್ನಗಿರಿಯ ನಿವಾಸಿಗಳಾಗಿದ್ದು, ಕುಟುಂಬ ಸಮೇತರಾಗಿ ಮಂಗಳೂರಿಗೆ ತೆರಳುತ್ತಿದ್ರು. ಕಾರ್ ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಮಳೆಗಾಲ ಮತ್ತು ಚಳಿಗಾಲ ಸಂದರ್ಭದಲ್ಲಿ ಮಂಜಿನಿಂದಾಗಿ ಗೋಚರತೆ ಕಡಿಮೆ ಇರುತ್ತದೆ. ದಟ್ಟ ಮಂಜಿನಿಂದ ರಸ್ತೆ ಕಾಣದೇ ಈ ಭಾಗದಲ್ಲಿ ಅಪಘಾತಗಳು ಸಂಭವಿಸುತ್ತಿರುತ್ತವೆ.

ಇದನ್ನೂ ಓದಿ: ಬೆಂಗಳೂರು ಬ್ಯಾಂಕ್ ಉದ್ಯೋಗಿ ಯುವತಿಗೆ ಡಬಲ್ ರೋಲ್ ಸ್ಕ್ಯಾಮ್; ಒಬ್ಬನೇ ವ್ಯಕ್ತಿ, ಫ್ರೆಂಡ್-ಲವರ್ ಆಗಿ ವಂಚನೆ!

44
ಎಲ್ಲಿದೆ ಈ ಶಿರಾಡಿ?

ರಾಷ್ಟ್ರೀಯ ಹೆದ್ದಾರಿ 75ರ ಮಂಗಳೂರು - ಬೆಂಗಳೂರು ನಗರಗಳಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ. ಶಿರಾಡಿ ಗ್ರಾಮದಲ್ಲಿನ ಮಾರ್ಗ ಅಂಕುಡೊಂಕಾಗಿದೆ. ಈ ಗ್ರಾಮವು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ವ್ಯಾಪ್ತಿಗೆ ಒಳಪಡುತ್ತದೆ. ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಮೂಲಕ ಹಾದುಹೋಗುತ್ತದೆ.

ಇದನ್ನೂ ಓದಿ: ಖರ್ಗೆ ಪಿಯುಸಿ ಫೇಲಾದ ಮಗನಿಗೆ ಐಟಿ-ಬಿಟಿ ಖಾತೆ ಕೊಡಿಸಿ ಬೆಂಗಳೂರಿಗೆ ಕೆಟ್ಟ ಹೆಸರು ತಂದ್ರು; ಪ್ರತಾಪ್ ಸಿಂಹ!

Read more Photos on
click me!

Recommended Stories