ಬಿಗ್‌ಬಾಸ್ ಖ್ಯಾತಿಯ ನಟಿ ದಿವ್ಯಾ ಸುರೇಶ್ ವಿರುದ್ಧ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗಿದೆ. ನಟಿ ಕಾರು ನಿಲ್ಲಿಸದೆ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬಿಗ್‌ಬಾಸ್ ಶೋನ ಮಾಜಿ ಸ್ಪರ್ಧಿ, ನಟಿ ದಿವ್ಯಾ ಸುರೇಶ್ ವಿರುದ್ದ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಹಿಟ್ ಆಂಡ್ ರನ್ ಕೇಸ್ ದಾಖಲಾಗಿದೆ. ಅಕ್ಟೋಬರ್ 4ರ ರಾತ್ರಿ ಸುಮಾರು 1.45ಕ್ಕೆ ಅಪಘಾತ ಸಂಭವಿಸಿದ್ದು, ದಿವ್ಯಾ ಸುರೇಶ್ ಕಾರ್ ನಿಲ್ಲಿಸದೆಯೇ ಎಸ್ಕೇಪ್ ಆಗಿದ್ದಾರೆ. ಸಿಸಿಟಿವಿ ದೃಶ್ಯದಲ್ಲಿ ದಿವ್ಯಾ ಸುರೇಶ್ ಕಾರ್ ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.
25
ಹಿಟ್ ಆಂಡ್ ರನ್ ಕೇಸ್
ಅಕ್ಟೋಬರ್ 4ರಂದು ಅನಿತಾ, ಅನುಷಾ ಮತ್ತು ಕಿರಣ್ ಮೂವರು ಬೈಕ್‌ನಲ್ಲಿ ತೆರಳಿದ್ದರು. ಈ ವೇಳೆ ದಿವ್ಯಾ ಸುರೇಶ್ ಅವರ ಕಾರ್ ಡಿಕ್ಕಿಯಾಗಿದ್ದರಿಂದ ಬೈಕ್‌ನಲ್ಲಿದ್ದ ಮೂವರು ಕೆಳಗೆ ಬಿದ್ದದ್ದಾರೆ. ಅನುಷಾ ಮತ್ತು ಕಿರಣ್‌ಗೆ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿದ್ರೆ, ಅನಿತಾ ಅವರ ಕಾಲಿನ ಮಂಡಿಚಿಪ್ಪು ನುಜ್ಜುಗುಜ್ಜಾಗಿದೆ. ಅಪಘಾತವಾದ್ರೂ ನಟಿ ದಿವ್ಯಾ ಸುರೇಶ್ ಕಾರ್ ನಿಲ್ಲಿಸದೇ ಹೋಗಿದ್ದಾರೆ.
35
ದೂರು ದಾಖಲಿಸಿದ ಕಿರಣ್
ಗಾಯಾಳು ಅನಿತಾ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಶಸ್ತ್ರಚಿಕಿತ್ಸೆಗೆ ಸುಮಾರು 2 ಲಕ್ಷ ರೂ. ಖರ್ಚಾಗಿದೆ ಎಂದು ಅನಿತಾ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಅಪಘಾತದ ಬಳಿಕ ದಿವ್ಯಾ ಸುರೇಶ್ ಅವರು ಗಾಯಾಳುಗಳನ್ನು ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ. ಅಕ್ಟೋಬರ್ 7ರಂದು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ತೆರಳಿ ಕಿರಣ್ ಎಂಬವರು ದೂರು ದಾಖಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ ಅನೂಪ್, ಬ್ಯಾಟರಾಯನಪುರ ಪೊಲೀಸ್ ಠಾಣೆಯ ಸಮೀಪದ ಎಂಎಂ ರಸ್ತೆಯಲ್ಲಿ ಅಕ್ಟೋಬರ್ 4ರಂದು ಅಪಘಾತ ಸಂಭವಿಸಿದೆ. ಎರಡು ದಿನ ಯಾರೂ ದೂರು ದಾಖಲಿಸಿರಲಿಲ್ಲ. ಅಕ್ಟೋಬರ್ 7ರಂದು ಕಿರಣ್ ಎಂಬವರು ದೂರು ದಾಖಲಿಸಿದ್ದಾರೆ. ತನಿಖೆಯಲ್ಲಿ ದಿವ್ಯಾ ಎಂಬವರ ಕಾರ್‌ನಿಂದ ಅಪಘಾತವಾಗಿರೋದು ತಿಳಿದು ಬಂದಿದೆ. ಬೈಕ್‌ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ದೂರುದಾರ ಕಿರಣ್, ನಮ್ಮ ಕಸೀನ್ ಅನಾರೋಗ್ಯದ ಹಿನ್ನೆಲೆ ರಾತ್ರಿ ಆಸ್ಪತ್ರೆಗೆ ಹೊರಟಿದ್ದೇವು. ಟರ್ನ್‌ನಲ್ಲಿ ಕಪ್ಪು ಕಾರ್ ಡಿಕ್ಕಿಯಾಯ್ತು. ಮಹಿಳೆಯೊಬ್ಬರು ಕಾರ್ ಚಲಾಯಿಸುತ್ತಿರೋದು ಮಾತ್ರ ಕಾಣಿಸಿತು. ದೂರು ದಾಖಲಿಸಿದ ಬಳಿಕ ನಮಗೆ ಪೊಲೀಸರಿಂದ ಕಾರ್ ನಲ್ಲಿದ್ದು ದಿವ್ಯಾ ಸುರೇಶ್ ಎಂದು ಗೊತ್ತಾಗಿದೆ. ಗಾಯಾಳು ಅನಿತಾ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.