Mandya: 'ಕಲ್ಲು' ಭಯೋತ್ಪಾದಕರಿಂದ ವಿಘ್ನ ವಿನಾಶಕನ ಮೇಲೆ ಕಲ್ಲು ತೂರಾಟ, ನಾಗಮಂಗಲ ಉದ್ವಿಗ್ನ!

First Published Sep 11, 2024, 10:22 PM IST

ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ದರ್ಗಾ ಬಳಿ ಕಲ್ಲು ತೂರಾಟ ನಡೆದಿದೆ. ಮುಸ್ಲಿಂ ಯುವಕರು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಮುಸ್ಲಿಂ ಪುಂಡರಿಂದ ಭಾರೀ ಪ್ರಮಾಣದ ಕಲ್ಲು ತೂರಾಟ ನಡೆದಿದೆ.
 

ದರ್ಗಾ ಬಳಿ ಗಣಪತಿ ಮೆರವಣಿಗೆ ಬಂದಾಗ ಮುಸ್ಲಿಂ ಯುವಕರು ಕಲ್ಲು ತೂರಾಟ ಮಾಡಿದ್ದಾರೆ. ದರ್ಗಾ ಬಳಿ ಡೊಳ್ಳು, ತಮಟೆ, ಬಾರಿಸಬೇಡಿ ಎಂದು ಮುಸ್ಲಿಂ ಯುವಕರು ಕಿರಿಕ್‌ ತೆಗೆದಿದ್ದಾರೆ.

Latest Videos


ಕಲ್ಲು ತೂರಾಟ ಮಾಡಿದ್ದಲ್ಲದೆ, ಮಚ್ಚು-ಲಾಂಗ್‌ಅನ್ನು ಮುಸ್ಲಿಂ ಯುವಕರು ಜಳಪಳಿಸಿದ್ದಾರೆ. ಲಾಠಿ ಚಾರ್ಜ್ ಮಾಡುವ  ಪೊಲೀಸರು ಗುಂಪನ್ನು ಚದುರಿಸಿದ್ದು,  ಉದ್ರಿಕ್ತರ ಗುಂಪಿನಿಂದ ಮಚ್ಚು-ಲಾಂಗ್ ವಶ ಪಡಿಸಿಕೊಂಡಿರುವ ವಿಡಿಯೋ ವೈರಲ್‌ ಆಗಿವೆ.
 


ಹಿಂದೂ-ಮುಸ್ಲಿಂ ಯುವಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಮುಸ್ಲಿಂ ಯುವಕರು ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.
 


ಕಲ್ಲು ತೂರಾಟ ಮಾಡಿದ ಮುಸ್ಲಿಂ ಹುಡುಗರ ಮೇಲೆ ಕ್ರಮಕ್ಕೆ ಆಗ್ರಹಿಸಿ ಹಿಂದೂಗಳು ನಾಗಮಂಗಲ ಪೊಲೀಸ್‌ ಠಾಣೆಯ ಎದುರು ಭಾರೀ ಪ್ರತಿಭಟನೆ ನಡೆಸಿದ್ದಾರೆ. 
 

ಗಣಪತಿ ಮೂರ್ತಿಯನ್ನೇ ನಾಗಮಂಗಲ ಪೊಲೀಸ್‌ ಠಾಣೆಯ ಎದುರುಗಡೆ ತಂದು ನಿಲ್ಲಿಸಿ, ಪೊಲೀಸ್‌ ಅಧಿಕಾರಿಗಳಿಂದ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದ್ದಾರೆ. ಈ ವೇಳೆ ಪೊಲೀಸರ ಮೇಲೂ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ.

ಮುಸ್ಲಿಂ ಪುಂಡರು ಕಲ್ಲು ತೂರಾಟ ಮಾಡುತ್ತಿರುವ ಸಾಕಷ್ಟು ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ದರ್ಗಾದಿಂದ ಮೆರವಣಿಗೆ ಮುಂದೆ ಹೋಗುವಾಗ ಈ ಘಟನೆ ನಡೆದಿದೆ.


ಕಲ್ಲು ತೂರಾಟ ತೀವ್ರವಾಗುತ್ತಿದ್ದಂತೆ ಗಣಪತಿ ವಿಸರ್ಜನೆಯಲ್ಲಿ ಪಾಲ್ಗೊಂಡಿದ್ದ ಹಿಂದೂ ಯುವಕರು ಇಡೀ ಮೆರವಣಿಗೆಯನ್ನು ಪೊಲೀಸ್‌ ಠಾಣೆಯ ಎದುರಿಗೆ ತಂದು ನಿಲ್ಲಿಸಿದ್ದಾರೆ.
 


ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕ್ರಮಕ್ಕೆ ಆಗ್ರಹಿಸಿ ಭಾರೀ ಪ್ರತಿಭಟನೆ ಮಾಡಲಾಗಿದೆ. ಕಲ್ಲು ತೂರಾಟದ ವೇಳೆ ಕೆಲ ಹಿಂದೂ ಹುಡುಗರಿಗೆ ಗಾಯವಾಗಿರುವ ಬಗ್ಗೆಯೂ ವರದಿಗಳಿವೆ.

ಮುಂದೆ ಸಾಗುತ್ತಿದ್ದ ಮೆರವಣಿಗೆ ಮೇಲೆ ಗಲ್ಲಿ ಗಲ್ಲಿಗಳಿಂದ ಕಲ್ಲುಗಳು ತೂರಿಬಂದಿವೆ. ಈ ವೇಳೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
 

ಮೆರವಣಿಗೆಯ ಮೇಲೆ ಗುಂಪು-ಗುಂಪಾಗಿ ಬಂದು ಕಲ್ಲು ತೂರಾಟ ಮಾಡಲಾಗಿದೆ. 'ಈದ್‌ ಮಿಲಾದ್‌, ರಂಜಾನ್‌ನಂಥ ಹಬ್ಬಗಳಲ್ಲಿ ಇಲ್ಲಿ ಮೆರವಣಿಗೆ ಆಗುತ್ತದೆ. ಎಲ್ಲಿಯೂ ನಾವು ಕಲ್ಲು ತೂರಾಟ ಮಾಡುವ ಚಿಲ್ಲರೆ ಕೆಲಸ ಮಾಡಿಲ್ಲ' ಎಂದು ಮೆರವಣಿಗೆಯಲ್ಲಿದ್ದ ಹಿಂದು ಯುವಕರು ಹೇಳಿದ್ದಾರೆ.

ದರ್ಗಾದಿಂದ ಮುಂದೆ ಹೋಗಿದ್ದಾಗ, ಗಲಾಟೆ ಆರಂಭಿಸಿ ಕಲ್ಲು ತೂರಾಟ ಮಾಡಿದ್ದಾರೆ. ರಾತ್ರಿ 8 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ ಎಂದು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರು ಹೇಳಿದ್ದಾರೆ.

ನಾಗಮಂಗಲದ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬಂದ ವೇಳೆ ಅನ್ಯಕೋಮಿನ ಯುವಕರಿಂದ ಗಣೇಶ ಮೂರ್ತಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.  ಈ ವೇಳೆ ಹಿಂದೂ-ಮುಸ್ಲಿಂ ಯುವಕರ ನಡುವೆ ವಾಕ್ಸಮರ, ತಳ್ಳಾಟ ನೂಕಾಟ ಕೂಡ ನಡೆದಿದೆ.

ಇನ್ನು ಕಲ್ಲು ತೂರಾಟಕ್ಕೆ ಓರ್ವ ಪೊಲೀಸ್ ಸಿಬ್ಬಂದಿಗೂ ಗಾಯವಾಗಿದ್ದು, ಇದೇ ವೇಳೆ ಕತ್ತಿ, ತಲ್ವಾರ್ ಅನ್ನು ಅನ್ಯಕೋಮಿನ ಯುವಕರಿಂದ ಜಳಪಿಸಿದ್ದು, ಕತ್ತಿ ತೋರಿಸಿ ಬೆದರಿಕೆ ಹಾಕುವ ಯತ್ನ ಕೂಡಾ ನಡೆದಿದೆ.

ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ: ಪೊಲೀಸ್ ಠಾಣೆ ಎದುರು ಗಣಪತಿ ಮೂರ್ತಿ ನಿಲ್ಲಿಸಿ ಹಿಂದೂಗಳ ಪ್ರತಿಭಟನೆ

click me!