ಬೆಂಗಳೂರಿನ BEMLನಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಅನಾವರಣ

First Published | Sep 1, 2024, 11:36 AM IST

ಭಾರತೀಯ ರೈಲ್ವೆಯ ಸದ್ಯದ ಟ್ರೆಂಡಿಂಗ್ ಟ್ರೈನ್ ಅಂದ್ರೆ ವಂದೇ ಭಾರತ್. ಇದೀಗ ವಂದೇ ಭಾರತ್ ರೈಲಿನ ಸ್ಲೀಪರ್ ಕೋಚ್‌ ಟ್ರೈನ್ ಬರಲಿದೆ. ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಬೆಂಗಳೂರಿನಲ್ಲಿ ಅನಾವರಣಗೊಂಡಿದೆ. 

ದೇಶದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಭಾರಿ ಯಶಸ್ಸುಗಳಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ವಂದೇ ಭಾರತ್ ಸ್ಲೀಪರ್‌, ವಂದೇ ಮೆಟ್ರೋ ರೈಲುಗಳನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿತ್ತು.

ಈ ವರದಿ ಬೆನ್ನಲ್ಲೇ ವಂದೇ ಭಾರತ್ ರೈಲಿನ ಸ್ಲೀಪರ್ ಕೋಚ್‌ಗಳ ಫೋಟೋಗಳು ವೈರಲ್ ಆಗಿದ್ದವು. ಸ್ಲೀಪರ್ ಕೋಚ್‌ನಲ್ಲಿ ಆಸನಗಳು ಹೇಗಿರಲಿವೆ ಎಂಬುವುದು ಗೊತ್ತಾಗಿತ್ತು.

Tap to resize

ಸ್ಲೀಪರ್ ಕೋಚ್ ಹೊಂದಿರುವ ವಂದೇ ಭಾರತ್ ರೈಲು ಬೆಂಗಳೂರಿನ ಬಿಇಎಂಎಲ್ ಘಟಕದಲ್ಲಿ ಸಿದ್ಧಗೊಂಡಿವೆ. ಇಂದು ಬೆಂಗಳೂರಿನ ಬಿಇಎಂಎಲ್ ಘಟಕದಲ್ಲಿ ಭಾರತದ ಮೊದಲ ವಂದೇ ಭಾರತ್ ಮಾದರಿಯ ಸ್ಲೀಪರ್ ರೈಲು ಅನಾವರಣಗೊಳಿಸಲಾಯ್ತು.

ಆಗಸ್ಟ್ 31ರಂದು ಮೀರತ್-ಲಕ್ನೋ, ಮಧುರೈ-ಬೆಂಗಳೂರು ಮತ್ತು ಚೆನ್ನೈ-ನಾಗರಕೋಯಿಲ್ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಿದ್ದರು.

Vande Bahrat

ವಂದೇ ಮೆಟ್ರೋ ರೈಲುಗಳು 100-250 ಕಿ.ಮೀ. ಮಾರ್ಗಗಳಲ್ಲಿ ಸಂಚರಿಸಿದರೆ, ವಂದೇ ಭಾರತ್ ಸ್ಲೀಪರ್ ರೈಲುಗಳು 1,000 ಕಿ.ಮೀ. ವ್ಯಾಪ್ತಿಯ ಮಾರ್ಗಗಳಲ್ಲಿ ನಿಯೋಜಿಸಲ್ಪಡುತ್ತವೆ.

ಈ ರೈಲಿನಲ್ಲಿ 24 ಬೋಗಿಗಳು ಇರಲಿದ್ದು, ರೈಲಿನ ಕ್ಷಿಪ್ರ ಸಂಚಾರಕ್ಕೆ ಎರಡೂ ಬದಿ ಎಂಜಿನ್‌ ಇರಲಿದೆ. ಇದನ್ನು ಹೊರತಾಗಿ, ಪ್ರತಿ ಆಸನದಲ್ಲೂ ಚಾರ್ಜಿಂಗ್‌ ಸ್ಲಾಟ್‌, ಸಿಸಿಟೀವಿ ಕ್ಯಾಮರಾ, ಪ್ರಯಾಣಿಕರಿಗೆ ಮಾಹಿತಿ ಟೀವಿ, ಬಯೋ ಟಾಯ್ಲಟ್‌ ಇದರಲಿದೆ. ಇವೆಲ್ಲಕ್ಕಿಂತ ವಿಶೇಷವೆಂದರೆ ಇದರಲ್ಲೂ ವಂದೇ ಭಾರತ್ ರೀತಿ ಸ್ವಯಂಚಾಲಿತ ಬಾಗಿಲುಗಳು ಇರಲಿದೆ ಎಂದು ವರದಿಯಾಗಿದೆ.

Latest Videos

click me!