ತಿರುಪತಿ To ವಿಜಯಪುರ ನಡುವೆ ವಿಶೇಷ ರೈಲು: ರಾಜ್ಯದ 10 ನಿಲ್ದಾಣಗಳಲ್ಲಿ ನಿಲುಗಡೆ

Published : Oct 02, 2026, 12:19 PM IST

ದುರ್ಗಾ ಪೂಜೆ ಹಬ್ಬದ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ತಿರುಪತಿ ಮತ್ತು ವಿಜಯಪುರ ನಡುವೆ ಸಾಪ್ತಾಹಿಕ ವಿಶೇಷ ರೈಲು ಸಂಚರಿಸಲಿದೆ. ಈ ರೈಲು ಅಕ್ಟೋಬರ್ 4 ರಿಂದ 25ರವರೆಗೆ ಪ್ರತಿ ಭಾನುವಾರ ಸಂಚರಿಸಲಿದ್ದು, ಒಟ್ಟು 11 ಬೋಗಿಗಳನ್ನು ಒಳಗೊಂಡಿರುತ್ತದೆ.

PREV
14
ತಿರುಪತಿ-ವಿಜಯಪುರ ನಡುವೆ ವಿಶೇಷ ರೈಲುಗಳ ಸಂಚಾರ

ದುರ್ಗಾ ಪೂಜೆ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ದಕ್ಷಿಣ ಕರಾವಳಿ ರೈಲ್ವೆಯು ತಿರುಪತಿ ಮತ್ತು ವಿಜಯಪುರ ನಡುವೆ ಪ್ರತಿ ದಿಕ್ಕಿನಲ್ಲಿ ತಲಾ 4 ಟ್ರಿಪ್ ಸಾಪ್ತಾಹಿಕ ವಿಶೇಷ ರೈಲನ್ನು ಓಡಿಸಲು ಸೂಚಿಸಿದೆ.

24
ರೈಲು ಸಂಖ್ಯೆ 07419/07420

ರೈಲು ಸಂಖ್ಯೆ 07419 ತಿರುಪತಿ-ವಿಜಯಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು 04.10.2026 ರಿಂದ 25.10.2026 ರವರೆಗೆ ಪ್ರತಿ ಭಾನುವಾರ 08:15 ಗಂಟೆಗೆ ತಿರುಪತಿಯಿಂದ ಹೊರಟು, ಅದೇ ದಿನ (ಭಾನುವಾರ) 22:25 ಕ್ಕೆ ವಿಜಯಪುರ ತಲುಪಲಿದೆ.

ಹಿಂತಿರುಗುವ ಮಾರ್ಗದಲ್ಲಿ ರೈಲು ಸಂಖ್ಯೆ 07420 ವಿಜಯಪುರ-ತಿರುಪತಿ ಸಾಪ್ತಾಹಿಕ ವಿಶೇಷ ಎಕ್ಸ್'ಪ್ರೆಸ್ 04.10.2026 ರಿಂದ 25.10.2026 ರವರೆಗೆ ಪ್ರತಿ ಭಾನುವಾರ 23:35 ಗಂಟೆಗೆ ವಿಜಯಪುರದಿಂದ ಹೊರಟು, ಮಾರನೇ ದಿನ (ಸೋಮವಾರ) 14:15 ಕ್ಕೆ ತಿರುಪತಿ ತಲುಪಲಿದೆ.

34
ಎಲ್ಲೆಲ್ಲಿ ನಿಲುಗಡೆ?

ಮಾರ್ಗಮಧ್ಯದಲ್ಲಿ ಈ ರೈಲು ಎರಡೂ ಮಾರ್ಗಗಳಲ್ಲಿ ರೇಣಿಗುಂಟ, ಕೋಡೂರು, ರಾಜಂಪೇಟೆ, ಕಡಪ, ಯರ್ರಗುಂಟ, ತಾಡಿಪತ್ರಿ, ಗುತ್ತಿ, ಗುಂತಕಲ್, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಹೊಳೆ ಆಲೂರು, ಬದಾಮಿ, ಬಾಗಲಕೋಟೆ, ಆಲಮಟ್ಟಿ ಮತ್ತು ಬಸವನ ಬಾಗೇವಾಡಿ ರೋಡ್ ನಿಲ್ದಾಣಗಳಲ್ಲಿ ನಿಲ್ಲಲಿದೆ.

44
ರೈಲು ಕೋಚ್ ಮಾಹಿತಿ

ಈ ವಿಶೇಷ ರೈಲು 11 ಬೋಗಿಗಳನ್ನು ಹೊಂದಿರಲಿದ್ದು, 1-2, 2 2-3 3, 4 ಸ್ವೀಪರ್ ಕ್ಲಾಸ್, 2 ಸಾಮಾನ್ಯ ಎರಡನೇ ದರ್ಜೆ ಹಾಗೂ 2 ಲಗೇಜ್, ಬ್ರೇಕ್ ವ್ಯಾನ್ ಮತ್ತು ದಿವ್ಯಾಂಗಜನರ ಬೋಗಿಗಳು ಸೇರಿವೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ; ಮೆಮು ರೈಲುಗಳ ತಾತ್ಕಾಲಿಕ ನಿಲ್ದಾಣ ಬದಲಾವಣೆ ಅವಧಿ ವಿಸ್ತರಣೆ

Read more Photos on
click me!

Recommended Stories